ಮೊದಲ ಬಾರಿಗೆ ದುಲ್ಕರ್ ಸಲ್ಮಾನ್ ಗೆ ಜೋಡಿಯಾದ ಕಾಜಲ್
ಸೌತ್ ಚೆಲುವೆ ಕಾಜಲ್ ಅಗರ್ವಾಲ್ ಈಗಾಗಲೇ ಸಾಕಷ್ಟು ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡಿದ್ದಾರೆ. ಚಿರಂಜೀವಿ, ಪ್ರಭಾಸ್, ವಿಜಯ್, ಧನುಷ್, ಮಹೇಶ್ ಬಾಬು ಹೀಗೆ ಅನೇಕ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.
ಕಾಜಲ್ ಇದೀಗ ಮೊದಲ ಬಾರಿಗೆ ನಟ ದುಲ್ಕರ್ ಸಲ್ಮಾನ್ ಗೆ ಜೋಡಿಯಾಗಿದ್ದಾರೆ. ಈ ವಿಷಯವನ್ನು ಕಾಜಲ್ ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ . ಇದೊಂದು ತಮಿಳು ಸಿನಿಮಾವಾಗಿದೆ.
ದುಲ್ಕರ್ ಸಲ್ಮಾನ್ ಸಿನಿಮಾಗಳು ಅಂದರೆ, ಒಂದು ಮಟ್ಟದ ನಿರೀಕ್ಷೆ ಇರುತ್ತದೆ. ಆ ಸಿನಿಮಾಗೆ ಈಗ ಕಾಜಲ್ ಕೂಡ ಸೇರಿಕೊಂಡಿದ್ದಾರೆ. ಈ ಸಿನಿಮಾದ ನಿರ್ದೇಶಕ ಹಾಗೂ ಉಳಿದ ಮಾಹಿತಿಯನ್ನು ಕಾಜಲ್ ಬಹಿರಂಗ ಪಡಿಸಿಲ್ಲ.

ಈ ಸಿನಿಮಾದ ಜೊತೆಗೆ ಕಮಲ್ ಹಾಸನ್ ನಟನೆಯ ಇಂಡಿಯನ್ ಸಿನಿಮಾಗೆ ಕೂಡ ಕಾಜಲ್ ನಾಯಕಿ. ಶಂಕರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಾಜಲ್ 85 ವರ್ಷದ ಮುದುಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
English summary
Kajal Aggarwal doing a movie with Dulquer Salmaan.


Click it and Unblock the Notifications