For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಚಿತ್ರದಲ್ಲಿ 80 ವರ್ಷದ ಮುದುಕಿಯಾದ ಸ್ಟಾರ್ ನಟಿ

  |

  ಕಮಲ್ ಹಾಸನ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಷನ್ ನಲ್ಲಿ ಆರಂಭವಾಗಿದ್ದು ಇಂಡಿಯನ್-2 ಸಿನಿಮಾದ ಚಿತ್ರೀಕರಣ ಸ್ಥಗಿತವಾಗಿತ್ತು. ಕಮಲ್ ಹಾಸನ್ ಅವರ ಅನಾರೋಗ್ಯದ ಕಾರಣ ಶೂಟಿಂಗ್ ಬ್ರೇಕ್ ಹಾಕಲಾಗಿತ್ತು.

  ಈ ನಡುವೆ ಆರ್ಥಿಕ ಕಾರಣಗಳಿಂದ ಸಿನಿಮಾದ ಶೂಟಿಂಗ್ ನಿಂತು ಹೋಗಿದೆ ಎಂದು ಸುದ್ದಿ ಕೇಳಿಬಂತು. ಇದೀಗ, ಇಂಡಿಯನ್ 2 ಚಿತ್ರ ಮತ್ತೆ ಟೇಕ್ ಆನ್ ಆಗಿದೆ. ಫೆಬ್ರವರಿ ತಿಂಗಳಲ್ಲಿ ಮತ್ತೆ ಶೂಟಿಂಗ್ ಆರಂಭಿಸುತ್ತಿದೆಯಂತೆ ಚಿತ್ರತಂಡ.

  ಖ್ಯಾತ ತಮಿಳು ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲುಖ್ಯಾತ ತಮಿಳು ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

  ಸರ್ಪ್ರೈಸ್ ಅಂದ್ರೆ ಈ ಚಿತ್ರದಲ್ಲಿ ಕಾಜಲ್ ಅಗರ್ ವಾಲ್ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಎದುರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಮಾರು 80 ವರ್ಷದ ವಯಸ್ಸಿನ ಮುದುಕಿ ಪಾತ್ರ ಇದಾಗಿದೆಯಂತೆ.

  ಲೈಕಾ ಪ್ರೊಡಕ್ಷನ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಪ್ರಿಯಾ ಭವಾನಿ ಶಂಕರ್, ಬಾಬಿ ಸಿಂಹ, ಸಿದ್ಧಾರ್ಥ್, ವಿವೇಕ್, ರಕುಲ್ ಪ್ರೀತ್ ಸಿಂಗ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

  ಸದ್ಯದ ಪ್ಲಾನ್ ಪ್ರಕಾರ ಈ ವರ್ಷದ ಅಂತ್ಯಕ್ಕೆ ಇಂಡಿಯನ್ 2 ಸಿನಿಮಾ ಶೂಟಿಂಗ್ ಮುಗಿಸಿಲಿದೆ. 2021ರ ಆರಂಭದಲ್ಲಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.

  English summary
  Kamal Haasan starrer Indian 2 movie re-starts in february month. kajal aggarwal playing 80 years women role in front of kamal hassan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X