For Quick Alerts
  ALLOW NOTIFICATIONS  
  For Daily Alerts

  ಮದುವೆ ನಂತರ ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡಿದ ಕಾಜಲ್ ಅಗರ್‌ವಾಲ್

  |

  ಬಹುಭಾಷೆ ನಟಿ ಕಾಜಲ್‌ಅಗರ್‌ವಾಲ್ ಮುಂಬೈ ಮೂಲದ ಉದ್ಯಮಿ ಗೌತಮ್ ಜೊತೆ ಅಕ್ಟೋಬರ್ ತಿಂಗಳಿನಲ್ಲಿ ವಿವಾಹವಾದರು. ಮದುವೆ ಕಾರಣದಿಂದ ಬ್ರೇಕ್ ತೆಗೆದುಕೊಂಡಿದ್ದ ಕಾಜಲ್ ನಂತರ ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಎಂಜಾಯ್ ಮಾಡಿದ್ದರು.

  ಮದುವೆ ಮೂಡ್‌ನಿಂದ ಹೊರಬಂದ ಕಾಜಲ್ ಈಗ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ತಮಿಳಿನಲ್ಲಿ ಹಾರರ್ ಚಿತ್ರಕ್ಕೆ ಸಹಿ ಮಾಡುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದಾರೆ.

  ಕಲ್ಯಾಣ್ ಆಕ್ಷನ್ ಕಟ್ ಹೇಳಲಿರುವ 'ಗೋಸ್ಟಿ' ಚಿತ್ರದಲ್ಲಿ ಕಾಜಲ್ ನಟಿಸುತ್ತಿದ್ದು, ವೃತ್ತ ಜೀವನದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ.

  'ಆಚಾರ್ಯ'ಗಾಗಿ ಹನಿಮೂನ್ ಮುಗಿಸಿ ಭಾರತಕ್ಕೆ ಬಂದ ನಟಿ ಕಾಜಲ್ ಅಗರ್ವಾಲ್'ಆಚಾರ್ಯ'ಗಾಗಿ ಹನಿಮೂನ್ ಮುಗಿಸಿ ಭಾರತಕ್ಕೆ ಬಂದ ನಟಿ ಕಾಜಲ್ ಅಗರ್ವಾಲ್

  ಮದುವೆ ಬಳಿಕ ಕಾಜಲ್ ಸಹಿ ಮಾಡಿದ ಮೊದಲ ಸಿನಿಮಾ ಇದು. ಮಹಿಳಾ ಪ್ರಧಾನ ಕಥೆ ಹೊಂದಿರುವ ಈ ಚಿತ್ರ ಹಾರರ್ ಥ್ರಿಲ್ಲಿಂಗ್ ಆಗಿದೆ. ಮೂಲಗಳಿಂದ ಈ ಪ್ರಾಜೆಕ್ಟ್ ಪಕ್ಕಾ ಆಗಿದ್ದು, ಇದುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

  ಅಂದ್ಹಾಗೆ, ಈ ಚಿತ್ರದಲ್ಲಿ ಸುಮಾರು 23 ಅಥವಾ 23 ಜನ ಪೋಷಕ ಹಾಗೂ ಹಾಸ್ಯ ಕಲಾವಿದರು ಇರಲಿದ್ದಾರಂತೆ. ಯೋಗಿ ಬಾಬು, ಊರ್ವಶಿ, ಟೋನಿ, ಮೊಟ್ಟೈ ರಾಜೇಂದ್ರನ್, ದೇವದರ್ಶನಿ, ಶ್ರೀಮಾನ್ ಸೇರಿದಂತೆ ಹಲವರು ಪ್ರಮುಖ ಕಲಾವಿದರು ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  ಸ್ಟಾರ್ ನಟಿಯರೆಲ್ಲಾ ಮಾಲ್ಡೀವ್ಸ್‌ಗೆ ಹೋಗುತ್ತಿರುವುದರ ಹಿಂದಿನ ಕಾರಣ ಇಲ್ಲಿದೆಸ್ಟಾರ್ ನಟಿಯರೆಲ್ಲಾ ಮಾಲ್ಡೀವ್ಸ್‌ಗೆ ಹೋಗುತ್ತಿರುವುದರ ಹಿಂದಿನ ಕಾರಣ ಇಲ್ಲಿದೆ

  ದುಬಾರಿ ಗೆ ನಾಯಕಿಯಾದ ಭರಾಟೆ ಬೇಡಗಿ | Filmibeat Kannada

  ಈ ಚಿತ್ರವನ್ನು ಹೊರತುಪಡಿಸಿ ಇನ್ನು ನಾಲ್ಕೈದು ಸಿನಿಮಾಗಳಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಕಮಲ್ ಹಾಸನ್ ನಟನೆಯ ಇಂಡಿಯನ್ 2, ಚಿರಂಜೀವಿ ನಟನೆಯ ಆಚಾರ್ಯ, ಹೇ ಸಿನಾಮಿಕಾ, ಪ್ಯಾರಿಸ್ ಪ್ಯಾರಿಸ್, ಮೋಸಗಾಳ್ಳು ಹಾಗೂ ಮುಂಬೈ ಸಗಾ ಚಿತ್ರಗಳಲ್ಲಿ ಕಾಜಲ್ ಅಭಿನಯ ಇದೆ.

  English summary
  South actress Kajal Aggarwal signs her first movie after marriage: report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X