ಜೈಲರ್ ಸಿನಿಮಾದಲ್ಲಿ ಕೆಲಸ ಮಾಡಿದ 300 ಜನರಿಗೆ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಿರ್ಮಾಪಕ ಕಲಾನಿಧಿ ಮಾರನ್
ನಟ ರಜನಿಕಾಂತ್ ಅವರ ವರ್ಚಸ್ಸು ಕಡಿಮೆಯಾಗುವಂತೆಯೇ ಕಾಣಿಸುತ್ತಿಲ್ಲ ಇದಕ್ಕೆ ಇತ್ತೀಚಿನ ಜೈಲರ್ ಸಿನಿಮಾ ಬ್ಲಾಕ್ ಬಸ್ಟರ್ ಯಶಸ್ಸು ಸಾಕ್ಷಿಯಾಗಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ವಿಶ್ವಾದ್ಯಂತ 590 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದೆ.
ಚಿತ್ರದ ಯಶಸ್ಸಿನ ನಂತರ, ನಿರ್ಮಾಪಕ ಕಲಾನಿಧಿ ಮಾರನ್ ಅವರು ಜೈಲರ್ ಸಿನಿಮಾಗಾಗಿ ಕೆಲಸ ಮಾಡಿದ 300 ಜನರನ್ನು ಸನ್ಮಾನಿಸಿದ್ದಾರೆ. ಸನ್ ಪಿಕ್ಚರ್ಸ್‌ನ ಅಧಿಕೃತ ಹ್ಯಾಂಡಲ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಕಲಾನಿಧಿ ಮಾರನ್ 300 ಕೆಲಸಗಾರರು ಮತ್ತು ತಂತ್ರಜ್ಞರಿಗೆ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಜೈಲರ್ ಯಶಸ್ಸು ಆಚರಣೆ
ಕೋಟಿ ಕೋಟಿ ಬಾಚಿಕೊಂಡಿರುವ ಜೈಲರ್ ಸಿನಿಮಾ ಯಶಸ್ಸನ್ನು ನಿರ್ಮಾಪಕ ಕಲಾನಿಧಿ ಮಾರನ್ ವಿಶೇಷವಾಗಿ ಆಚರಿಸುತ್ತಿದ್ದಾರೆ. ಈ ಹಿಂದೆ ಚಿತ್ರದ ಭಾಗವಾಗಿದ್ದ ನಟ ರಜಿನಿಕಾಂತ್, ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್, ನಿರ್ದೇಶಕ ನೆಲ್ಸನ್ ಅವರಿಗೆ ದುಬಾರಿ ಗಿಫ್ಟ್ ನೀಡಿ ಸಂಭ್ರಮಿಸಿದ್ದರು.
ಇದಾದ ಬಳಿಕ ಈ ಯಶಸ್ಸಿಗೆ ಕಾರಣವಾಗಿರುವ ಕಾರ್ಮಿಕರು ಮತ್ತು ತಂತ್ರಜ್ಞರನ್ನು ಮರೆಯದ ಕಲಾನಿಧಿ ಮಾರನ್, ವರನ್ನು ಕರೆದು ಔತಣಕೂಟ ಏರ್ಪಡಿಸಿದ್ದಾರೆ. ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿ ಅವರೊಡನೆ ಕುಳಿತು ಭರ್ಜರಿ ಬಾಡೂಟ ಮಾಡಿದ್ದಾರೆ.
ಈ ಜೈಲರ್ ಸಂಭ್ರಮದ ವಿಡಿಯೋವನ್ನು ಸನ್ ಪಿಕ್ಚರ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ನಂತರ, ಸಿನಿಪ್ರಿಯರು ಕಲಾನಿಧಿ ಮಾರನ್ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು, "ಕಲಾನಿಧಿ ಮಾರನ್ ಸರ್ ಧನ್ಯವಾದಗಳು. ಎಲ್ಲಾ ಕೆಲಸಗಾರರು ಮತ್ತು ತಂತ್ರಜ್ಞರ ಮೇಲೆ ನೀವು ಇಟ್ಟುಕೊಂಡಿರುವ ಪ್ರೀತಿಗೆ ಧನ್ಯವಾದಗಳು. ಇಂತಹ ವಿನಮ್ರ ನಿರ್ಮಾಪಕನನ್ನು ನಾನು ನೋಡಿಲ್ಲ" ಎಂದು ಹೊಗಳಿದ್ದಾರೆ.
ಜೈಲರ್‌ನ ಛಾಯಾಗ್ರಾಹಕ ವಿಜಯ್ ಕಾರ್ತಿಕ್ ಕಣ್ಣನ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, "ಜೈಲರ್‌ನ ಎಲ್ಲಾ ಕೆಲಸಗಾರರು ಮತ್ತು ತಂತ್ರಜ್ಞರೊಂದಿಗೆ ಯಶಸ್ಸನ್ನು ಹಂಚಿಕೊಳ್ಳುವ ಇದು ದೊಡ್ಡ ಗೆಸ್ಚರ್. ಇಡೀ ತಂಡಕ್ಕೆ ಮತ್ತು ಸನ್ ಪಿಕ್ಚರ್ಸ್‌ಗೆ ಧನ್ಯವಾದಗಳು" ಎಂದು ಬರೆದಿದ್ದಾರೆ.

ಈ ಹಿಂದೆ ನಿರ್ಮಾಪಕ ಕಲಾನಿಧಿ ಮಾರನ್ ಅವರು ಜೈಲರ್ ಅನ್ನು ಯಶಸ್ವಿಗೆ ಕಾರಣರಾದ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರಿಗೆ 1.50 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ನೀಲಿ ಬಣ್ಣದ ಪೋರ್ಷೆ ಕಾರು ಉಡುಗೊರೆಯಾಗಿ ನೀಡಿದ್ದರು. ಜನಿಕಾಂತ್ ಅವರಿಗೆ 1.70 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದರು. ನಿರ್ದೇಶಕ ನೆಲ್ಸನ್ ಅವರಿಗೂ ಹಣ ಮತ್ತು ಐಷಾರಾಮಿ ಕಾರು ನೀಡಿದ್ದಾರೆ.
ಇನ್ನು, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಡೈರೆಕ್ಟರ್ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ತಲೈವಾ 171 ಸಿನಿಮಾ ಬರುತ್ತಿದೆ. ತಲೈವಾ 171 ಸಿನಿಮಾವನ್ನು ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 5ನೇ ಬಾರಿಗೆ ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ.
ಈಗಾಗಲೇ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ಈ ಸಂಸ್ಥೆಗೆ ನೂರಾರು ಕೋಟಿ ಆದಾಯ ನೀಡಿದೆ. ಈಗ ಮತ್ತೆ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ರಜನಿಕಾಂತ್ ನಟಿಸಲಿದ್ದು ಅದು ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದು, ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











