For Quick Alerts
  ALLOW NOTIFICATIONS  
  For Daily Alerts

  ಮತ್ತೆ ನಟನೆ ಬಿಡುವ ಮಾತಾಡಿದ ಕಮಲ್: ರಾಜಕೀಯ ಲಾಭದ ಉದ್ದೇಶವೇ?

  |

  ಕಮಲ್ ಹಾಸನ್ ಭಾರತ ಕಂಡ ಅತ್ಯದ್ಭುತವಾದ ಕೆಲವೇ ನಟರಲ್ಲಿ ಒಬ್ಬರು. ಆದರೆ ಈಗ ಏಕೋ ಪದೇ-ಪದೇ ನಟನೆ ಬಿಡುವ ಬಗ್ಗೆ ಮಾತನಾಡುತ್ತಿದ್ದಾರೆ. ಅದೂ ಮತದಾನಕ್ಕೆ ಗಂಟೆಗಳಷ್ಟೆ ಬಾಕಿ ಇರುವ ಸಮಯದಲ್ಲಿ ಕಮಲ್ ಆಡಿರುವ ಈ ಮಾತು ಅನುಮಾನ ಮೂಡಿಸುತ್ತಿದೆ.

  ರಾಜಕಾರಣಿಯೂ ಆಗಿರುವ ಕಮಲ್ ಹಾಸನ್ 'ಮಕ್ಕಳ್ ನಿಧಿ ಮಯಂ' ಹೆಸರಿನ ಹೊಸ ಪಕ್ಷ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಳೆ (ಏಪ್ರಿಲ್ 06) ತಮಿಳುನಾಡಿನಲ್ಲಿ ಮತದಾನ ನಡೆಯುತ್ತಿದ್ದು, ಸಿನಿಮಾ ಮತ್ತು ರಾಜಕೀಯದಲ್ಲಿ ತಮ್ಮ ಪ್ರಾಶಸ್ತ್ಯ ಯಾವುದಕ್ಕೆ ಎಂಬುದನ್ನು ಇಂದು ಕಮಲ್ ಹಾಸನ್ ಹೇಳಿದ್ದಾರೆ.

  ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಮಲ್ ಹಾಸನ್ 'ನಟನೆ ನನ್ನ ವೃತ್ತಿ. ಆದರೆ ಸಿನಿಮಾ ನಟನೆ ನನ್ನ ರಾಜಕೀಯ ಜೀವನಕ್ಕೆ ಅಡ್ಡ ಬರುತ್ತದೆ ಎಂದಾದಲ್ಲಿ ನಾನು ಸಿನಿಮಾವನ್ನು ತ್ಯಜಿಸುತ್ತೇನೆ' ಎಂದಿದ್ದರು. ಇಂದು ಕೊಯಮತ್ತೂರಿನಲ್ಲಿ ಇದೇ ಮಾತುಗಳನ್ನು ಪುನರಾವರ್ತನೆ ಮಾಡಿದ್ದಾರೆ.

  'ಕಮಲ್ ಹಾಸನ್ ನಟನಾ ವೃತ್ತಿಯಲ್ಲಿದ್ದಾರೆ. ರಾಜಕೀಯ ರಂಗದಲ್ಲಿ ವಿಫಲವಾದರೂ ನಟನಾ ವೃತ್ತಿ ಅವರ ಪಾಲಿಗೆ ಇದೆ, ರಾಜಕೀಯದಲ್ಲಿ ನಪಾಸಾದರೂ ನಟನೆಯಲ್ಲಿಅವರು ಮುಂದುವರೆಯಲಿದ್ದಾರೆ' ಎಂಬ ಅಭಿಪ್ರಾಯಗಳಿಗೆ ವಿರುದ್ಧವಾಗಿ ಕಮಲ್ ಮೇಲಿನಂತೆ ಹೇಳಿಕೆ ನೀಡಿರುವ ಸಾಧ್ಯತೆ ಇದೆ. ಇದೇ ಹೇಳಿಕೆಯನ್ನು ಅವರು ಪದೇ-ಪದೇ ಪುನರಾವರ್ತಿಸುತ್ತಿರುವ ಉದ್ದೇಶ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ.

  ಆದರೆ ಸಿನಿಮಾದಲ್ಲಿ ನಟಿಸುತ್ತಲೇ ರಾಜಕೀಯವನ್ನು ನಿಭಾಯಿಸಿದ ಎಂಜಿಆರ್ ಅನ್ನು ಉದಾಹರಣೆಯಾಗಿ ನೀಡಿರುವ ಕಮಲ್ ಹಾಸನ್, 'ರಾಜಕೀಯದಲ್ಲಿದ್ದು ಸಿನಿಮಾದಲ್ಲಿ ನಟಿಸುವುದು ತಪ್ಪು ಎಂದು ಕೆಲವರು ಹೇಳುತ್ತಾರೆ ಆದರೆ ಎಂಜಿಆರ್ ಅವರು ಶಾಸಕರಾಗಿದ್ದಾಗಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಗಳಿಸಿದ ಹಣವನ್ನು ಅವರು ತಮ್ಮ ರಾಜಕೀಯ ಪಯಣಕ್ಕೆ ಬಳಸಿದರು. ನನಗೂ ತುಸು ಹಣದ ಅವಶ್ಯಕತೆ ಇದೆ' ಎಂದಿದ್ದಾರೆ ಕಮಲ್ ಹಾಸನ್.

  ಅತಿ ಹೆಚ್ಚು ಫಿಲಂಫೇರ್ ಪ್ರಶಸ್ತಿ ಗೆದ್ದ ನಟ ಕಮಲ್ ಹಾಸನ್. ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ರಾಷ್ಟ್ರ ಮಾತ್ರವಲ್ಲದೆ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೂ ಕಮಲ್ ಭಾಜನರಾಗಿದ್ದಾರೆ. ಕಮಲ್ ಹಾಸನ್ ನಟನೆ ತ್ಯಜಿಸಿದರೆ ಅದು ಸಿನಿಮಾರಂಗಕ್ಕೆ ನಷ್ಟ. ಈ ಸಾಧ್ಯತೆ ಕಡಿಮೆ ಇದೆ.

  ಸೈಕಲ್ ನಲ್ಲಿ ಬಂದು ವೋಟ್ ಹಾಕಿ ಮೋದಿಗೆ ಟಾಂಗ್ ಕೊಟ್ಟ ವಿಜಯ್ | Filmibeat Kannada

  ಕಮಲ್ ಹಾಸನ್ ಅವರು ಪ್ರಸ್ತುತ 'ಇಂಡಿಯನ್ 2', 'ವಿಕ್ರಂ', 'ತಲೈವಾನ್ ಇರುಕ್ಕಿಂಡ್ರಾನ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actor and politicial Kamal Haasan again said he will leave acting if it became hurdle to his political career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X