For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಮತ್ತು ಸಿನಿಮಾದಿಂದ ದಿಢೀರ್ ಬ್ರೇಕ್ ಪಡೆದ ಕಮಲ್ ಹಾಸನ್: ಕಾರಣವೇನು?

  |

  ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಸ್ವಲ್ಪ ಸಮಯ ವಿರಾಮ ಪಡೆಯುವುದಾಗಿ ಹೇಳಿ ಪತ್ರ ಬರೆದಿದ್ದಾರೆ. ತಮಿಳುನಾಡಿನ ಚುನಾವಣಾ ಪ್ರಚಾರದ ಬಿಸಿಯ ನಡುವೆಯೂ ಕಮಲ್ ಹಾಸನ್ ಬ್ರೇಕ್ ಪಡೆದಿರುವುದು ಅಚ್ಚರಿ ಮೂಡಿಸಿದೆ. ಆದರೆ ಕಮಲ್ ಬ್ರೇಕ್ ಪಡೆಯಲು ಕಾರಣ ಕಾಲಿನ ಶಸ್ತ್ರ ಚಿಕಿತ್ಸೆಗಾಗಿ.

  ಹೌದು, ಕಾಲಿನ ಶಸ್ತ್ರ್ ಚಿಕಿತ್ಸೆಗಾಗಿ ಕಮಲ್ ಹಾಸನ್ ಬ್ರೇಕ್ ಪಡೆಯುವುದಾಗಿ ಹೇಳಿದ್ದಾರೆ. 66 ವರ್ಷದ ನಟ ಹಾಸನ್ ಕಳೆದ 15 ದಿನಗಳಲ್ಲಿ 5,000 ಕಿಮಿ ಓಡಾಡಿರುವುದಾಗಿ ಹೇಳಿದ್ದಾರೆ. ಏಪ್ರಿಲ್ ಮತ್ತು ಮೇ ನಲ್ಲಿ ಬರುವ ಚುನಾವಣೆಗೂ ಮೊದಲು ಸಂಪೂರ್ಣ ಗುಣಮುಖರಾಗಿ ಮತ್ತೆ ಬರುವುದಾಗಿ ಭರವಸೆ ನೀಡಿದ್ದಾರೆ.

  ರಜನಿ ನಿರ್ಧಾರ ಬೇಸರ ತಂದಿದೆ, ಆದರೆ ಅವರ ಆರೋಗ್ಯ ನನಗೆ ಮುಖ್ಯ: ಕಮಲ್ ಹಾಸನ್ರಜನಿ ನಿರ್ಧಾರ ಬೇಸರ ತಂದಿದೆ, ಆದರೆ ಅವರ ಆರೋಗ್ಯ ನನಗೆ ಮುಖ್ಯ: ಕಮಲ್ ಹಾಸನ್

  ನಟ ಕಮಲ್ ಹಾಸನ್ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದರು ಚುನಾವಣೆಯ ಕಾರಣ ವ್ಯಾಪಕವಾಗಿ ರಾಜ್ಯದಾದ್ಯಂತ ಪ್ರಯಾಣಸಿದ ಕಾರಣ ಕಾಲು ನೋವು ಜಾಸ್ತಿಯಾಗಿದೆ ಎಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಅಪಘಾತದಿಂದ ಕಮಲ್ ಹಾಸನ್ ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಮತ್ತೆ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಕಮಲ್ ರಾಜಕೀಯದಲ್ಲಿ ಬ್ಯುಸಿಯಾದ ಕಾರಣ ಶಸ್ತ್ರ ಚಿಕಿತ್ಸೆ ಕಡೆ ಗಮನ ಹರಿಸಿರಲಿಲ್ಲ.

  Australia ದಲ್ಲೂ ಶುರುವಾಯ್ತು Master ಹವಾ | Filmibeat Kannada

  ಆದರೆ ಇದೀಗ ನೋವು ಹೆಚ್ಚಾದ ಕಾರಣ ಶಸ್ತ್ರ್ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಭಾನುವಾರ ರಾತ್ರಿ ಬಿಗ್ ಬಾಸ್ ಸೀಸನ್-4 ಗ್ರ್ಯಾಂಡ್ ಫಿನಾಲೆ ಮುಗಿಸಿದ ಬಳಿಕ ಕಾಲಿನ ಶಸ್ತ್ರ ಚಿಕಿತ್ಸೆಯ ಕಾರಣ ಬ್ರೇಕ್ ಪಡೆಯುವುದಾಗಿ ಹೇಳಿದ್ದಾರೆ. ಸದ್ಯ ಕಮಲ್ ಕೆಲವು ದಿನಗಳ ಕಾಲ ರಾಜಕೀಯ ಮತ್ತು ಸಿನಿಮಾ ಸೇರಿದಂತೆ ಎಲ್ಲಾ ಕೆಲಸಗಳಿಂದ ಬ್ರೇಕ್ ಪಡೆದು ವಿಶ್ರಾಂತಿ ಪಡೆಯಲಿದ್ದಾರೆ.

  English summary
  Actor Come politician Kamal Haasan announces break from work for leg surgery.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X