For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 5ನೇ ಆವೃತ್ತಿಗೆ ಕಮಲ್ ಹಾಸನ್ ಸಂಭಾವನೆ ಏರಿಕೆ?

  |

  ತಮಿಳು ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ತಮಿಳು ಐದನೇ ಆವೃತ್ತಿಗೆ ಸಜ್ಜಾಗುತ್ತಿದೆ. ಈ ಹಿಂದಿನಂತೆ ಪರಿಸ್ಥಿತಿ ಸಾಮಾನ್ಯವಾಗಿದಿದ್ದರೆ ಜೂನ್ ತಿಂಗಳಲ್ಲಿ ದೊಡ್ಮನೆ ಆಟಕ್ಕೆ ಚಾಲನೆ ಸಿಗುತ್ತಿತ್ತು. ಆದ್ರೀಗ, ಕೊರೊನಾ ಎರಡನೇ ಅಲೆಯ ಭೀತಿಯಿಂದ ಕಾರ್ಯಕ್ರಮಕ್ಕೆ ಸದ್ಯಕ್ಕೆ ಆರಂಭವಾಗಲ್ಲ.

  ತಮಿಳು ಸರ್ಕಾರ ಸಿನಿಮಾ ಶೂಟಿಂಗ್ ಹಾಗು ಕಿರುತೆರೆ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದೆ. ಮುಂದಿನ ಆದೇಶದವರೆಗೂ ತಮಿಳುನಾಡಿನಲ್ಲಿ ಶೂಟಿಂಗ್ ಮಾಡದಂತೆ ಆದೇಶಿಸಿದೆ. ಹಾಗಾಗಿ, ಬಿಗ್ ಬಾಸ್ ಜೂನ್‌ನಲ್ಲಿ ಆರಂಭವಾಗುವುದು ಬಹುತೇಕ ಅನುಮಾನ. ಪೂರ್ವ ತಯಾರಿ ನಡೆಸುತ್ತಿರುವ ಆಯೋಜಕರು ಸ್ಪರ್ಧಿಗಳನ್ನು ಅಂತಿಮ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಕಮಲ್ ಹಾಸನ್ ಸಂಭಾವನೆ ವಿಚಾರ ತಮಿಳು ಇಂಡಸ್ಟ್ರಿಯಲ್ಲಿ ಚರ್ಚೆಗೆ ಬಂದಿದೆ. ಮುಂದೆ ಓದಿ...

  ನಿರೂಪಣೆ ಬದಲಾವಣೆಯ ಸುದ್ದಿ

  ನಿರೂಪಣೆ ಬದಲಾವಣೆಯ ಸುದ್ದಿ

  ರಾಜಕೀಯ, ಸಿನಿಮಾ ಕಾರಣದಿಂದ ಕಮಲ್ ಹಾಸನ್ ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತಿತ್ತು. ಹಾಗಾಗಿ, ಕಮಲ್ ಹಾಸನ್ ಬದಲು ಮತ್ತೊಬ್ಬ ನಿರೂಪಕನನ್ನು ಕರೆತರುವ ನಿಟ್ಟಿನಲ್ಲಿ ಆಯೋಜಕರು ಕೆಲಸ ಮಾಡ್ತಿದ್ದಾರೆ ಎಂದು ವರದಿಗಳು ಆಗಿದ್ದವು. ಆದ್ರೀಗ, ಕಮಲ್ ಹಾಸನ್ ಐದನೇ ಆವೃತ್ತಿಯ ಜವಾಬ್ದಾರಿ ತೆಗೆದುಕೊಂಡಿರುವ ಬಗ್ಗೆ ಚಾನಲ್‌ ಕಡೆಯಿಂದ ಬಹಿರಂಗವಾಗಿದೆ.

  ನಾನು ಬದುಕಿರೋವರೆಗೂ ರಾಜಕೀಯ ಬಿಡಲ್ಲ: ಕಮಲ್ ಹಾಸನ್ನಾನು ಬದುಕಿರೋವರೆಗೂ ರಾಜಕೀಯ ಬಿಡಲ್ಲ: ಕಮಲ್ ಹಾಸನ್

  ಕಮಲ್ ಹಾಸನ್ ಸಂಭಾವನೆ ಏರಿಕೆ!

  ಕಮಲ್ ಹಾಸನ್ ಸಂಭಾವನೆ ಏರಿಕೆ!

  ಐದನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಸಂಭಾವನೆಯಲ್ಲಿ ಏರಿಕೆ ಕಂಡಿದೆ ಎಂದು ಹೇಳಲಾಗಿದೆ. ವಾರದ ಎಪಿಸೋಡ್‌ಗೆ 3.5 ಕೋಟಿ ಚಾರ್ಜ್ ಮಾಡ್ತಾರೆ. ಶೋ ಮುಕ್ತಾಯ ವೇಳೆಗೆ 55 ಕೋಟಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂದು ತಮಿಳು ವೆಬ್‌ಸೈಟ್‌ಗಳು ವರದಿ ಮಾಡಿದೆ.

  ಮೊದಲು ಎಷ್ಟು ಪಡೆಯುತ್ತಿದ್ದರು?

  ಮೊದಲು ಎಷ್ಟು ಪಡೆಯುತ್ತಿದ್ದರು?

  ಈ ಮೊದಲ ವಾರದ ಎಪಿಸೋಡ್‌ಗೆ 3 ಕೋಟಿ ಸಂಭಾವನೆ ನಿಗದಿಯಾಗಿತ್ತು. ಸುಮಾರು 15 ವಾರಗಳ ಕಾಲ ಶೂಟಿಂಗ್ ಮಾಡಲಾಗುತ್ತಿತ್ತು. ಆದ್ರೀಗ, ವಾರದ ಎಪಿಸೋಡ್‌ಗೆ 50 ಲಕ್ಷ ಏರಿಕೆ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಶ್ರೀದೇವಿಯನ್ನು ಮದುವೆಯಾಗುವಂತೆ ಕಮಲ್ ಹಾಸನ್‌ಗೆ ಒತ್ತಾಯ ಮಾಡಿದ್ಯಾರು? ಕಮಲ್ ರಿಜೆಕ್ಟ್ ಮಾಡಿದ್ದೇಕೆ?ಶ್ರೀದೇವಿಯನ್ನು ಮದುವೆಯಾಗುವಂತೆ ಕಮಲ್ ಹಾಸನ್‌ಗೆ ಒತ್ತಾಯ ಮಾಡಿದ್ಯಾರು? ಕಮಲ್ ರಿಜೆಕ್ಟ್ ಮಾಡಿದ್ದೇಕೆ?

  ವಿಕ್ರಮ್ ಸಿನಿಮಾದಲ್ಲಿ ನಟನೆ

  ವಿಕ್ರಮ್ ಸಿನಿಮಾದಲ್ಲಿ ನಟನೆ

  ಮಾಸ್ಟರ್ ಸಿನಿಮಾದ ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿರುವ 'ವಿಕ್ರಮ್' ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಲಾಕ್‌ಡೌನ್‌ನಿಂದ ರಿಲೀಫ್ ಸಿಕ್ಕಿದ ಕೂಡಲೇ ಎರಡನೇ ಹಂತದ ಶೂಟಿಂಗ್ ಆರಂಭಿಸಲಿದ್ದಾರೆ.

  English summary
  Actor and Host Kamal Hassan is charging big amount for Bigg boss tamil season 5 said source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X