twitter
    For Quick Alerts
    ALLOW NOTIFICATIONS  
    For Daily Alerts

    ನಟ ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

    |

    ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ನಟ ಮತ್ತು ಮಕ್ಕಳ್ ನೀದಿ ಮೈಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೇ ತಿಂಗಳು 19ರಂದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಮಲ್ ಹಾಸನ್ ಅವರಿಗೆ ಮಂಗಳವಾರ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.

    ಶಸ್ತ್ರ ಚಿಕಿತ್ಸೆಯಾಗಿ ಮೂರು ದಿನಗಳ ಬಳಿಕ ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಇಂದು ಮನೆಗೆ ಮರಳಿದ ಕಮಲ್ ಅವರನ್ನು ಆಸ್ಪತ್ರೆ. ವೈದ್ಯರು ಮತ್ತು ಸಿಬ್ಬಂದಿ ಹೂ ಗುಚ್ಚ ನೀಡಿ ಬೀಳ್ಕೊಟ್ಟಿದ್ದಾರೆ.

    ಕಮಲ್ ಹಾಸನ್ ಗೆ ಶಸ್ತ್ರ ಚಿಕಿತ್ಸೆ: ಸರ್ಜರಿ ಬಳಿಕ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಕ್ಕಳುಕಮಲ್ ಹಾಸನ್ ಗೆ ಶಸ್ತ್ರ ಚಿಕಿತ್ಸೆ: ಸರ್ಜರಿ ಬಳಿಕ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಕ್ಕಳು

    ವೈದ್ಯರ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಕಮಲ್ ಹಾಸನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮಲ್ ಹಾಸನ್ ಅವರಿಗೆ ವರ್ಷಗಳ ಹಿಂದೆಯೇ ಅಪಘಾತದಿಂದ ಕಾಲಿಗೆ ಶಸ್ತ್ರ ಚಿಕಿತ್ಸೆಗೆ ಮಾಡಲಾಗಿತ್ತು. ಮತ್ತೊಂದು ಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು, ಅಲ್ಲಿವರೆಗೂ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದರು. ಆದರೆ ಕಮಲ್ ಕೆಲಸ ಒತ್ತಡದಿಂದ ಚಿಕಿತ್ಸೆ ಮುಂದೂಡಿದ್ದರು.

    Kamal Haasan Discharge from hospital after surgery

    ಇದೀಗ ನೋವು ಜಾಸ್ತಿಯಾದ ಪರಿಣಾಮ ತಕ್ಷಣ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಕಮಲ್ ಶೀಘ್ರದಲ್ಲೇ ಕೆಲಸಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ.

    Recommended Video

    ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಇನ್ನಿಲ್ಲಾ | Filmibeat Kannada

    ಕಮಲ್ ಹಾಸನ್ ಗೆ ಸರ್ಜರಿಯಾದ ದಿನ ಮಕ್ಕಳಾದ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಪತ್ರ ಬರೆದು, 'ನಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿಗೆ, ಎಲ್ಲರ ಪ್ರಾರ್ಥನೆ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಶಸ್ತ್ರ್ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಹೇಳಲು ಸಂತಸವಾಗುತ್ತೆ. ಇಂದು ಬೆಳಗ್ಗೆ ವೈದ್ಯರಾದ ಡಾ.ಮೋಹನ್ ಕುಮಾರ್ ಮತ್ತು ಡಾ. ಜೆ ಎಸ್ ಎನ್ ಮೂರ್ತಿ ಸರ್ಜರಿ ಮಾಡಿದ್ದಾರೆ' ಎಂದು ಮಾಹಿತಿ ಹಂಚಿಕೊಂಡಿದ್ದರು.

    English summary
    Actor And politician Kamal Haasan Discharge from hospital after surgery.
    Friday, January 22, 2021, 16:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X