twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್ 2', 'RRR' ಈಗಿನವು, ಪ್ಯಾನ್ ಇಂಡಿಯಾ ಸಿನಿಮಾಗಳು ಆಗಲೇ ಬಂದಿದ್ದವು: ಕಮಲ್ ಹಾಸನ್

    |

    ಎಲ್ಲ ಚಿತ್ರರಂಗದಲ್ಲಿ 'ಪ್ಯಾನ್ ಇಂಡಿಯಾ ಸಿನಿಮಾ' ಹಾಗೂ 'ದಕ್ಷಿಣ ಭಾರತ ಚಿತ್ರರಂಗ v/s ಬಾಲಿವುಡ್' ವಿಷಯಗಳು ಪ್ರಮುಖ ಚರ್ಚೆಯ ವಿಷಯಗಳಾಗಿವೆ. ಬಾಲಿವುಡ್‌ನಿಂದ ಹಿಡಿದು ಎಲ್ಲ ಚಿತ್ರರಂಗದಲ್ಲಿಯೂ ಈ ವಿಷಯಗಳ ಬಗ್ಗೆ ಸ್ಟಾರ್‌ ನಟರು, ತಂತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಹಿರಿಯ ನಟ ಕಮಲ್ ಹಾಸನ್ ಸಹ ಈ ಬಗ್ಗೆ ಮಾತನಾಡಿದ್ದು, 'ಪ್ಯಾನ್ ಇಂಡಿಯಾ ಸಿನಿಮಾ' ಎಂದು ಈಗ ಬಳಸಲಾಗುತ್ತಿದೆ. 'RRR', 'ಕೆಜಿಎಫ್ 2' ಸಿನಿಮಾಗಳು ಮೊದಲ ಪ್ಯಾನ್ ಇಂಡಿಯಾ ಸಿನಿಮಾಗಳೇನಲ್ಲ, ಬಹಳ ವರ್ಷಗಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿವೆ'' ಎಂದಿದ್ದಾರೆ.

    ಹಿಂದಿಯ 'ಪಡೋಸನ್', 'ಮುಘಲ್-ಎ-ಅಜಮ್' ಸಿನಿಮಾಗಳನ್ನು ಏನೆಂದು ಕರೆಯುವುದು. ಅವುಗಳೂ ಸಹ ಪ್ಯಾನ್ ಇಂಡಿಯಾ ಸಿನಿಮಾಗಳೇ. ಆ ಸಿನಿಮಾಗಳನ್ನು ಇಡೀ ದೇಶದ ಜನ ವೀಕ್ಷಿಸಿದ್ದರು. 'ಪಡೋಸನ್' ಸಿನಿಮಾದಲ್ಲಿ ಮೆಹಮೂದ್ ಅವರು ತಮಿಳು ಭಾಷೆಯನ್ನೇ ಮಾತನಾಡಿದ್ದರು'' ಎಂದಿದ್ದಾರೆ ಕಮಲ್ ಹಾಸನ್.

    Kamal Haasan Said Padosan, Mughal E Azam Movies Also Pan India Movies

    ''ಪ್ಯಾನ್ ಇಂಡಿಯಾ ಸಿನಿಮಾಗಳು ನಮಗೆ ಹೊಸವೇನೂ ಅಲ್ಲ. 'ಪ್ಯಾನ್ ಇಂಡಿಯಾ' ಎಂಬ ಹೆಸರಷ್ಟೆ ಹೊಸದು. ಈ ಮೊದಲೂ ಸಹ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬಂದಿವೆ. ನಮ್ಮದು ಬಹಳ ಭಿನ್ನವಾದ ದೇಶ, ಅಮೆರಿಕದ ರೀತಿ ನಮ್ಮ ದೇಶ ಇಲ್ಲಿ. ಇಲ್ಲಿ ನಾವು ಹಲವು ಭಾಷೆಗಳನ್ನು ಮಾತನಾಡುತ್ತೇವೆ, ಆದರೂ ಏಕತೆಯನ್ನು ಉಳಿಸಿಕೊಂಡಿದ್ದೇವೆ. ಇದು ನಮ್ಮ ದೇಶದ ಹೆಚ್ಚುಗಾರಿಕೆ'' ಎಂದಿದ್ದಾರೆ ಕಮಲ್ ಹಾಸನ್.

    ''ನಾವು ಆಗಾಗ್ಗೆ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಲೇ ಬಂದಿದ್ದೇವೆ. ಮಲಯಾಳಂನ 'ಚಮ್ಮೇನ್' ಸಹ ಪ್ಯಾನ್ ಇಂಡಿಯಾ ಸಿನಿಮಾ. ಆ ಸಿನಿಮಾವನ್ನು ಅವರು ಇತರೆ ಭಾಷೆಗಳಿಗೆ ಡಬ್ ಸಹ ಮಾಡಲಿಲ್ಲ. ಆದರೂ ಜನ ಆ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದರು. ಅದೊಂದು ಅದ್ಭುತವಾದ ಸಿನಿಮಾ'' ಎಂದರು ಕಮಲ್ ಹಾಸನ್.

    'ಬಾಲಿವುಡ್ v/s ದಕ್ಷಿಣ ಭಾರತ ಸಿನಿಮಾ' ಚರ್ಚೆಯ ಬಗ್ಗೆ ಮಾತನಾಡಿದ ಕಮಲ್ ಹಾಸನ್, ''ನಾನು ಭಾರತೀಯ, ನೀವು ಯಾರು?' ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ''ತಾಜ್ ಮಹಲ್ ನನ್ನದು, ಮಧುರೈ ಮೀನಾಕ್ಷಿ ದೇವಾಲಯ, ಕನ್ಯಾಕುಮಾರಿ ನನ್ನದು ಎಷ್ಟೋ ಅಷ್ಟೇ ನಿನ್ನದು ಸಹ. ಕಾಶ್ಮೀರವೂ ನಮ್ಮದೇ'' ಎಂದಿದ್ದಾರೆ ಕಮಲ್ ಹಾಸನ್.

    'ವಿಕ್ರಂ' ಸಿನಿಮಾ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, ''ನನ್ನ ಗುರು ಕೆ ಬಾಲ್‌ಚಂದರ್ ನನಗೆ ಹೇಳಿದ್ದಾರೆ. ಹೇಗೆ ಇತರ ನಟರೊಟ್ಟಿಗೆ ತೆರೆ ಹಂಚಿಕೊಳ್ಳಬೇಕು ಮತ್ತು ಲೈಮ್ ಲೈಟ್ ಅನ್ನು ನಿನ್ನ ಮೇಲೆ ಮಾತ್ರವೇ ಬೀಳದಂತೆ ನೋಡಿಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ. 'ವಿಕ್ರಂ' ಸಿನಿಮಾದಲ್ಲಿ ನಟಿಸಿರುವ ಇಬ್ಬರು ಸಹೋದರರು ನನ್ನ ಕೆಲಸವನ್ನು ಇಷ್ಟಪಟ್ಟವರೇ ಹಾಗಾಗಿ ನನಗೆ ಅವರೊಟ್ಟಿಗೆ ಕೆಲಸ ಮಾಡುವುದು ನನಗೆ ಕಷ್ಟ ಎನಿಸಲಿಲ್ಲ'' ಎಂದಿದ್ದಾರೆ.

    ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾ ಜೂನ್ 3 ರಂದು ಬಿಡುಗಡೆ ಆಗಲಿದ್ದು, ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ಮಲಯಾಳಂನ ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನದ ಮಾಡಿರುವುದು ಲೋಕೇಶ್ ಕನಕರಾಜ್.

    English summary
    Actor Kamal Haasan said old movies like Padosan, Mughal E Azam also pan India movies. His movie Vikram releasing on June 03.
    Friday, May 27, 2022, 9:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X