twitter
    For Quick Alerts
    ALLOW NOTIFICATIONS  
    For Daily Alerts

    ನಾನು ಬದುಕಿರೋವರೆಗೂ ರಾಜಕೀಯ ಬಿಡಲ್ಲ: ಕಮಲ್ ಹಾಸನ್

    |

    ಮಕ್ಕಳ್ ನೀಧಿ ಮಯಮ್ ಎಂಬ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಇತ್ತೀಚಿಗಷ್ಟೆ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಇದೀಗ ರಾಜಕೀಯದ ಬಗ್ಗೆ ಮಾತನಾಡಿರುವ ಕಮಲ್ ನಾನು ಬದುಕಿರುವ ವರೆಗೂ ರಾಜಕೀಯದಲ್ಲೇ ಇರುವುದಾಗಿ ಎಂದಿದ್ದಾರೆ.

    ನಟನಾಗಿ ಖ್ಯಾತಿಗಳಿಸಿದ್ದ ನಟ ಕಮಲ್ ಹಾಸನ್ ಕಳೆದ ಮೂರು ವರ್ಷಗಳ ಹಿಂದೆ ತನ್ನದೆ ಆದ ಹೊಸ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಇಳಿದಿದ್ದರು. ಸಿನಿಮಾ ಜೊತೆಗೆ ಕಮಲ್ ರಾಜಕೀಯದಲ್ಲೂ ಸಕ್ರೀಯರಾಗಿದ್ದರು. ಈ ಬಾರಿ ಚುನಾವಣೆಯಲ್ಲಿ ತಾನು ಸೇರಿದಂತೆ ಪಕ್ಷದ ಎಲ್ಲರೂ ಸೋತು ಹೋಗಿದ್ದರು. ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಾಣುತ್ತಿದ್ದಂತೆ ಅನೇಕರು ಪಕ್ಷ ತೊರೆದರು.

    ತಂದೆ-ತಾಯಿ ವಿಚ್ಛೇದನ ಪಡೆದು ದೂರ ಆದಾಗ ಸಂತೋಷ ಪಟ್ಟಿದ್ದೆ; ಶ್ರುತಿ ಹಾಸನ್ತಂದೆ-ತಾಯಿ ವಿಚ್ಛೇದನ ಪಡೆದು ದೂರ ಆದಾಗ ಸಂತೋಷ ಪಟ್ಟಿದ್ದೆ; ಶ್ರುತಿ ಹಾಸನ್

    ಕಮಲ್ ಹಾಸನ್ ಕೂಡ ರಾಜಕೀಯದಲ್ಲಿ ಹೆಚ್ಚುದಿನ ಇರುವುದಿಲ್ಲ, ರಾಜಕೀಯ ತೊರೆಯುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಇದೀಗ ಈ ಕುರಿತು ಮಾತನಾಡಿರುವ ಕಮಲ್, 'ಪಾರ್ಟಿ ಸಮಾಜದಲ್ಲಿ ನಾಯಕರನ್ನು ಮತ್ತು ಸ್ಟಾರ್ ಗಳನ್ನು ಸೃಷ್ಟಿಸಿದೆ' ಎಂದಿದ್ದಾರೆ.

    Kamal Haasan says I will be in politics as long as I am alive

    'ಕೆಲವರಿಗೆ ಇದು ಸರ್ವಾಧಿಕಾರ. ಪಕ್ಷದಲ್ಲಿ ಹೊಸಬರಾಗಿದ್ದರೂ ಅವರ ಪ್ರತಿಭೆ ಆಧಾರದ ಮೇಲೆ ಜನರಿಗೆ ದೊಡ್ಡ ಜವಾಬ್ದಾರಿ ನೀಡಿದಾಗ ಅದು ಪ್ರಜಾಪ್ರಭುತ್ವದ ಉತ್ತುಂಗ ಎಂದಿದ್ದಾರೆ. ನಾನು ಎಷ್ಟು ಪಾರದರ್ಶಕನಾಗಿದ್ದೆ ಮತ್ತು ಎಲ್ಲರಿಗೂ ನಾನು ಹೇಗೆ ಅಧಿಕಾರ ನೀಡಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿದೆ' ಎಂದಿದ್ದಾರೆ.

    'ಇಂಥ ಕೆಟ್ಟ ಫಲಿತಾಂಶದ ಜವಾಬ್ದಾರಿ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದ ಅಭ್ಯಾಸ ಎಂದಿದ್ದಾರೆ. ನಾವು ಮತ್ತೆ ಇದನ್ನು ಸಂಭವಿಸಲು ಬಿಡುವುದಿಲ್ಲ. ಆಧಾರ ರಹಿತ ಆರೋಪಗಳಿಗೆ ನಾವು ಪ್ರತಿಕ್ರಿಯಿಸಬೇಕಿಲ್ಲ. ಸತ್ಯ ತಿಳಿದ್ದದ್ದರೂ ನಾವು ಸುಮ್ಮನಿರಬೇಕೆ ಎಂದು ಕೇಳುವವರಿಗೆ ಸತ್ಯವನ್ನು ತಿಳಿಸಿ ಮತ್ತು ವಾದಿಸಿ ಆದರೆ ಅಸಭ್ಯ ಭಾಷೆ ಬಳಸಬೇಡಿ ಎನ್ನುತ್ತೇನೆ' ಎಂದಿದ್ದಾರೆ.

    Recommended Video

    ತಂದೆ-ತಾಯಿ ವಿಚ್ಛೇದನ ಪಡೆದು ದೂರವಾಗಿದ್ದಾಗ ಖುಷಿಯಾಗಿತ್ತು ಎಂದ ಶ್ರುತಿ ಹಾಸನ್ | Filmibeat Kannada

    ನಾನು ಬದುಕಿರುವವರೆಗೂ ನಾನು ರಾಜಕೀಯದಲ್ಲಿ ಇರುತ್ತೇನೆ ಎಂದಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡುವವರಿಗೆ ಅಧಿಕಾರ ನೀಡಲಾಗುವುದು. ಎಲ್ಲರೂ ಶೀಘ್ರದಲ್ಲೇ ಮಕ್ಕಳ್ ನೀಧಿ ಮಯಮ್ ನ ಪುನರುಜ್ಜೀವನಗೊಳಿಸಿ ಹೊಸ ಆವೃತ್ತಿ ಮೂಲಕ ಬರುವುದಾಗಿ ಹೇಳಿದ್ದಾರೆ.

    English summary
    Actor, Politician Kamal Haasan says I will be in politics as long as I am alive.
    Wednesday, May 26, 2021, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X