For Quick Alerts
  ALLOW NOTIFICATIONS  
  For Daily Alerts

  ತಡವಾದರೂ 12ನೇ ತರಗತಿ ಪರೀಕ್ಷೆ ನಡೆಸಿ; ಕಮಲ್ ಹಾಸನ್

  |

  ತಡವಾದರೂ ಪರವಾಗಿಲ್ಲ ತಮಿಳುನಾಡು ಸರ್ಕಾರ 12ನೇ ತರಗತಿ ಪರೀಕ್ಷೆ ನಡೆಸಬೇಕೆಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ. ಎಂ.ಕೆ ಸ್ಟಾಲಿನ್ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.

  ಈಗಾಗಲೆ ಕೇಂದ್ರ ಸರ್ಕಾರ CBSC ಮತ್ತು ICSE 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದು ಮಾಡಿದೆ. ಕೇಂದ್ರದ ಈ ನಿರ್ಧಾರವನ್ನು ಹಲವು ಶಿಕ್ಷಣ ತಜ್ಞರು ಟೀಕಿಸುತ್ತಿದ್ದಾರೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಸರಿಯಾದ ಪ್ಲಾನ್ ಪ್ರಕಾರ ಪರೀಕ್ಷೆಗಳನ್ನು ನಡೆಸುವುದು ಉತ್ತಮ ವಿಧಾನವಾಗಿದೆ. ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ್ ಪಡೆಯಲು 12ನೇ ತರಗತಿ ಪರೀಕ್ಷೆಯ ಅಂಕಗಳು ಬಹಳ ಮುಖ್ಯ ಎಂದು ಕಮಲ್ ಹಾಸನ್ ಅಭಿಪ್ರಾಯ ಪಟ್ಟಿದ್ದಾರೆ.

  ನಾನು ಬದುಕಿರೋವರೆಗೂ ರಾಜಕೀಯ ಬಿಡಲ್ಲ: ಕಮಲ್ ಹಾಸನ್ನಾನು ಬದುಕಿರೋವರೆಗೂ ರಾಜಕೀಯ ಬಿಡಲ್ಲ: ಕಮಲ್ ಹಾಸನ್

  ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿ, ಪಠ್ಯಕ್ರಮವನ್ನು ಕಡಿಮೆ ಮಾಡಬೇಕು ಎಂದಿದ್ದಾರೆ. ಕೇರಳ ಸರ್ಕಾರದ ಉದಾಹರಣೆ ನೀಡಿದ ಕಮಲ್, ಕೇರಳ ಸರ್ಕಾರ ಪರೀಕ್ಷೆ ನಡೆಸಿದ ವಿಧಾನವನ್ನು ನಿರ್ವಾಹಕರು ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

  ಕೊಟ್ಟ ಮಾತನ್ನು ಎರಡೇ ದಿನದಲ್ಲಿ ಉಳಿಸಿಕೊಂಡ ಯಶ್ | Filmibeat Kannada

  ಕರ್ನಾಟಕ ಸರ್ಕಾರ ಈಗಾಗಲೇ 12ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ವಿಧಾನದಲ್ಲಿ ಬದಲಾವಣೆ ಮಾಡಿ, ಎರಡು ದಿನಗಳಲ್ಲಿ ಪರೀಕ್ಷೆ ನಡೆಯುವ ಬಗ್ಗೆ ಸರ್ಕಾರ ಪ್ಲಾನ್ ಮಾಡಿದೆ. ಪರೀಕ್ಷೆ ರದ್ದು ಮಾಡಿದ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಗೆ ವಿರುದ್ಧವಾಗಿದೆ ಎನ್ನುತ್ತಿದ್ದಾರೆ.

  English summary
  Kamal Haasan says Tamil Nadu Government must conduct class 12 board Examination.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X