ಏಕಕಾಲಕ್ಕೆ ಎರಡು ಸಿನಿಮಾದ ಚಿತ್ರೀಕರಣಕ್ಕೆ ಮುಂದಾದ ಕಮಲ್ ಹಾಸನ್

ಸೂಪರ್ ಸ್ಟಾರ್ ಕಮಲ್ ಹಾಸನ್ ನಟಿಸಬೇಕಿರುವ 'ಇಂಡಿಯನ್-2' ಸಿನಿಮಾ ಚಿತ್ರೀಕರಣ ತಾತ್ಕಾಲಿಕವಾಗಿ ನಿಂತಿದೆ. ಈ ನಡುವೇ ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರ ಸೆಟ್ಟೇರಿದೆ.

ಆರ್ಥಿಕ ಸಮಸ್ಯೆಯಿಂದ ಇಂಡಿಯನ್ 2 ಚಿತ್ರೀಕರಣ ಪುನರಾರಂಭಿಸಲು ಸಾಧ್ಯವಾಗದ ಕಾರಣ, ವಿಕ್ರಮ್ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಆದ್ರೀಗ, ಎರಡು ಚಿತ್ರದ ಶೂಟಿಂಗ್ ಒಟ್ಟಿಗೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಅಧೀಕೃತ ಮಾಹಿತಿ ಇಲ್ಲವಾದರೂ ಇಂತಹದೊಂದು ಯೋಜನೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ವರದಿಯಾಗಿದೆ. ಇಂಡಿಯನ್-2 ಚಿತ್ರವನ್ನು ಲೈಕಾ ಪ್ರೊಡಕ್ಷನ್ ನಿರ್ಮಿಸುತ್ತಿದ್ದರೇ, ವಿಕ್ರಮ್ ಸಿನಿಮಾವನ್ನು ಸ್ವತಃ ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ.

Kamal Haasan will Start Shooting Of Vikram and Indian-2 simultaneously

ನಿರ್ದೇಶಕ ಲೋಕೇಶ್ ಕನಕರಾಜ್ ಪ್ರಸ್ತುತ ವಿಜಯ್ ನಟಿಸಿರುವ 'ಮಾಸ್ಟರ್' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಬಹುತೇಕ ಮುಗಿಸಿದ್ದು, ವಿಕ್ರಮ್ ಪ್ರಾಜೆಕ್ಟ್ ಆರಂಭಿಸಿದ್ದಾರೆ.

ಈಗಾಗಲೇ ವಿಕ್ರಮ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಉಳಿದಂತೆ ಪಾತ್ರಗಳು ಬಿಡುಗಡೆಯಾಗಿಲ್ಲ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಮತ್ತೊಂದೆಡೆ ಇಂಡಿಯನ್-2 ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್‌ವಾಲ್, ಸಿದ್ಧಾರ್ಥ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಆರ್ ರೆಹಮಾನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

English summary
Tamil superstar Kamal Haasan will start shooting of Vikram and Indian-2 simultaneously.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X