For Quick Alerts
  ALLOW NOTIFICATIONS  
  For Daily Alerts

  ಏಕಕಾಲಕ್ಕೆ ಎರಡು ಸಿನಿಮಾದ ಚಿತ್ರೀಕರಣಕ್ಕೆ ಮುಂದಾದ ಕಮಲ್ ಹಾಸನ್

  |

  ಸೂಪರ್ ಸ್ಟಾರ್ ಕಮಲ್ ಹಾಸನ್ ನಟಿಸಬೇಕಿರುವ 'ಇಂಡಿಯನ್-2' ಸಿನಿಮಾ ಚಿತ್ರೀಕರಣ ತಾತ್ಕಾಲಿಕವಾಗಿ ನಿಂತಿದೆ. ಈ ನಡುವೇ ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರ ಸೆಟ್ಟೇರಿದೆ.

  ಆರ್ಥಿಕ ಸಮಸ್ಯೆಯಿಂದ ಇಂಡಿಯನ್ 2 ಚಿತ್ರೀಕರಣ ಪುನರಾರಂಭಿಸಲು ಸಾಧ್ಯವಾಗದ ಕಾರಣ, ವಿಕ್ರಮ್ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಆದ್ರೀಗ, ಎರಡು ಚಿತ್ರದ ಶೂಟಿಂಗ್ ಒಟ್ಟಿಗೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

  ಶತ್ರುಗಳ ಜೊತೆ ಕಮಲ್ ಹಾಸನ್ ಭರ್ಜರಿ ಭೋಜನ: ವಿಕ್ರಂ ಟೀಸರ್ಶತ್ರುಗಳ ಜೊತೆ ಕಮಲ್ ಹಾಸನ್ ಭರ್ಜರಿ ಭೋಜನ: ವಿಕ್ರಂ ಟೀಸರ್

  ಈ ಕುರಿತು ಅಧೀಕೃತ ಮಾಹಿತಿ ಇಲ್ಲವಾದರೂ ಇಂತಹದೊಂದು ಯೋಜನೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ವರದಿಯಾಗಿದೆ. ಇಂಡಿಯನ್-2 ಚಿತ್ರವನ್ನು ಲೈಕಾ ಪ್ರೊಡಕ್ಷನ್ ನಿರ್ಮಿಸುತ್ತಿದ್ದರೇ, ವಿಕ್ರಮ್ ಸಿನಿಮಾವನ್ನು ಸ್ವತಃ ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ.

  ನಿರ್ದೇಶಕ ಲೋಕೇಶ್ ಕನಕರಾಜ್ ಪ್ರಸ್ತುತ ವಿಜಯ್ ನಟಿಸಿರುವ 'ಮಾಸ್ಟರ್' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಬಹುತೇಕ ಮುಗಿಸಿದ್ದು, ವಿಕ್ರಮ್ ಪ್ರಾಜೆಕ್ಟ್ ಆರಂಭಿಸಿದ್ದಾರೆ.

  ಈಗಾಗಲೇ ವಿಕ್ರಮ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಉಳಿದಂತೆ ಪಾತ್ರಗಳು ಬಿಡುಗಡೆಯಾಗಿಲ್ಲ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

  ಕಮಲ್ ಹಾಸನ್ 'ಇಂಡಿಯನ್-2' ಚಿತ್ರ ಮತ್ತೆ ಮುಂದೂಡಿಕೆ!ಕಮಲ್ ಹಾಸನ್ 'ಇಂಡಿಯನ್-2' ಚಿತ್ರ ಮತ್ತೆ ಮುಂದೂಡಿಕೆ!

  ನನ್ನ ಅಭಿಮಾನಿಗಳು ಎಷ್ಟು ಸುಂದರ ಅಲ್ವಾ ಎಂದ ರಶ್ಮಿಕಾ | Filmibeat Kannada

  ಮತ್ತೊಂದೆಡೆ ಇಂಡಿಯನ್-2 ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್‌ವಾಲ್, ಸಿದ್ಧಾರ್ಥ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಆರ್ ರೆಹಮಾನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

  English summary
  Tamil superstar Kamal Haasan will start shooting of Vikram and Indian-2 simultaneously.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X