ಲೋಕಸಭೆ ಚುನಾವಣೆ 2024 ; ಉಳಗನಾಯಗನ್ ಕಮಲ್ ಹಾಸನ್ ನಡೆ ಯಾವ ಕಡೆ..?

ಸಕಲ ಕಲಾ ವಲ್ಲಭ, ವಿಶ್ವರೂಪಿ, ಉಳಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವವರು ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದವರಲ್ಲಿ ಇವರು ಕೂಡ ಒಬ್ಬರು.

ಇಂಥಹ ಕಮಲ್ ಹಾಸನ್ ಗೆ ರಾಜಕೀಯದ ಕಡೆ ಒಲವು ಶುರುವಾಗಿ ವರ್ಷಗಳೇ ಕಳೆದಿವೆ. ಇನ್ನೂ ಲೋಕಸಭಾ ಚುನಾವಣೆಯ ಕಾವು ಇನ್ನೇನು ಹೆಚ್ಚಾಗಲಿದೆ. ಎಲ್ಲ ಪಕ್ಷದಲ್ಲಿ ಮೈತ್ರಿ ಬಗ್ಗೆ ಮಾತು ಕಥೆ ನಡೆಯುತ್ತಿದೆ. ಹೀಗಾಗಿ ಕಮಲ್ ಹಾಸನ್ ನಡೆ ಯಾವ ಕಡೆ ಎಂಬ ಕುತೂಹಲ ಹುಟ್ಟುವುದು ಸಹಜ. ಈ ಕುತೂಹಲಕ್ಕೆ ಕಮಲ್ ಹಾಸನ್ ಸದ್ಯಕ್ಕೆ ಉತ್ತರ ಕೊಟ್ಟಿದ್ದಾರೆ.

Kamal Haasan Yet To Decide On Alliance With INDIA Bloc

ತಮ್ಮ ಪಕ್ಷ ಮಕ್ಕಳ್ ನೀದಿ ಮೈಯಂ' (ಎಂಎನ್ಎಂ)ನ 7ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಮಲ್ ಹಾಸನ್ ಒಂದಿಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಇಂಡಿಯಾ ಬಣದೊಂದಿಗೆ ಸೇರಿಕೊಳ್ಳುವುದಿಲ್ಲವೆಂದು ಖಂಡ ತುಂಡವಾಗಿ ಮಾತನಾಡಿದ್ದಾರೆ.

ಹೌದು, ಇಂಡಿಯಾ ಮೈತ್ರಿಕೂಟಕ್ಕೆ ಎಂಎನ್ಎಂ ಸೇರ್ಪಡೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕಮಲ್ ಹಾಸನ್ ನಾನು ನಿಮಗೆ ಈಗಾಗಲೇ ಹೇಳಿದ್ದೇನೆ, ಇದು ಪಕ್ಷ ರಾಜಕೀಯವನ್ನು ಬದಿಗಿರಿಸಿ ದೇಶದ ಬಗ್ಗೆ ಚಿಂತಿಸುವ ಸಮಯ. ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಚಿಂತಿಸುವ ಯಾವುದೇ ಪಕ್ಷದೊಂದಿಗೆ ನನ್ನ ಪಕ್ಷ ಕೈ ಜೋಡಿಸುತ್ತೆ. ಆದರೆ ಊಳಿಗಮಾನ್ಯ ರಾಜಕೀಯ ಮಾಡುವ ಪಕ್ಷದೊಂದಿಗೆ ಎಂಎನ್ಎಂ ಕೈಜೋಡಿಸುವುದಿಲ್ಲ ಎಂದಿದ್ದಾರೆ

Kamal Haasan Yet To Decide On Alliance With INDIA Bloc

ಇನ್ನೂ ಇದೇ ಸಮಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಸುದ್ದಿ ಇದೆಯೆಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್ ಮೈತ್ರಿ ಕುರಿತು ಮಾತುಕಥೆ ನಡೆಯುತ್ತಿರುವುದು ನಿಜಾ, ಒಂದು ವೇಳೆ ಯಾವುದಾದರೂ ಶುಭ ಸುದ್ದಿ ಇದ್ದರೆ ನಾನೇ ನಿಮ್ಮೆಲ್ಲರಿಗೂ ತಿಳಿಸುತ್ತೇನೆ ಎಂದಿದ್ದಾರೆ

ಕಾರ್ಯಕ್ರಮ ಮುಗಿಸುವ ಮುನ್ನ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿರುವುದನ್ನ ಸ್ವಾಗತಿಸಿದ ಕಮಲ್, ಸಣ್ಣ ಪಕ್ಷವಾಗಿರುವ ಹೊರತಾಗಿಯೂ ಎಂಎನ್ಎಂಗೆ 'ಟಾರ್ಚ್ಲೈಟ್' ಚಿಹ್ನೆಯನ್ನು ಮಂಜೂರು ಮಾಡಿರುವ ಚುನಾವಣಾ ಆಯೋಗಕ್ಕೆ ಕಮಲ್ ಹಾಸನ್ ಕೃತಜ್ಞತೆ ಸಲ್ಲಿಸಿದ್ದಾರೆ.

More from Filmibeat

English summary
Actor-politician Kamal Haasan on Wednesday said discussions were on to form an alliance ahead of the upcoming Lok Sabha elections, asserting his Makkal Needhi Maiam (MNM) will support any coalition that “selflessly” thinks about the nation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X