twitter
    For Quick Alerts
    ALLOW NOTIFICATIONS  
    For Daily Alerts

    "ಸಿನಿಮಾ ಚೆನ್ನಾಗಿದ್ರೆ ಜನ ನೋಡ್ತಾರೆ.. ಚೋಳ ರಾಜರು ಹಿಂದುಗಳಲ್ಲ": 'ಪೊನ್ನಿಯಿನ್ ಸೆಲ್ವನ್' ನೋಡಿ ಕಮಲ್ ವಿವಾದಾತ್ಮಕ ಹೇಳಿಕೆ

    |

    ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ತಮಿಳು ಪ್ರೇಕ್ಷಕರು ಸಿನಿಮಾ ಸೂಪರ್ ಎಂದು ಕೊಂಡಾಡುತ್ತಿದ್ದಾರೆ. ಆದರೆ ಕೆಲವರು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಜೊತೆಗೆ ಚಿತ್ರವನ್ನು ಹೋಲಿಸಿ ನೋಡುತ್ತಿದ್ದಾರೆ. ಬಾಹುಬಲಿಗೆ ಹೋಲಿಸಿದರೆ ಮಣಿರತ್ನಂ ದೃಶ್ಯಕಾವ್ಯ ಅಷ್ಟೇನು ಚೆನ್ನಾಗಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ನಟ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದು, ಸಿನಿಮಾ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡುತ್ತಾರೆ ಎಂದಿದ್ದಾರೆ. ಜೊತೆಗೆ ಚೋಳ ರಾಜರು ಹಿಂದೂಗಳಲ್ಲ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    Kamal Hassan About mani ratnams Ponniyin Selvan controversy

    ಚಿಯಾನ್ ವಿಕ್ರಂ ಹಾಗೂ ಕಾರ್ತಿ ಜೊತೆಗೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ನೋಡಿ ಉಳಗ ನಾಯಗನ್ ಮೆಚ್ಚಿಕೊಂಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಕಲೆಗೆ ಯಾವುದೇ ಭಾಷೆ, ಜಾತಿ, ಧರ್ಮವಿಲ್ಲ ಎಂದು ಅಭಿಪ್ರಾಯಪಟ್ಟರು. 'ಪೊನ್ನಿಯನ್ ಸೆಲ್ವನ್' ಚಿತ್ರಕ್ಕೆ ತೆಲುಗಿನ ಜೊತೆಗೆ ಬೇರೆ ಭಾಷೆಯಲ್ಲೂ ಬೆಂಬಲವಿಲ್ಲ ಎನ್ನುವ ಪ್ರಶ್ನೆಗೆ ಇದು ಸರಿಯಲ್ಲ, ಯಾರೊ ಕೆಲವರು ಹೀಗೆ ಹೇಳುತ್ತಾರೆ ಅಷ್ಟೇ. ತಮಿಳರು ತೆಲುಗಿನ 'ಶಂಕರಾಭರಣಂ' ಬೆಂಬಲಿಸಿದ್ದರು. ಅದೇ ರೀತಿ ತಮಿಳಿನ 'ಮರೋ ಚರಿತ್ರ' ಚಿತ್ರವನ್ನು ಆಂಧ್ರದ ಜನ ಅಪ್ಪಿ ಒಪ್ಪಿಕೊಂಡಿದ್ದರು. ಸಿನಿಮಾಗೆ ಭಾಷೆ ಎನ್ನುವುದು ಇಲ್ಲ. ಸಿನಿಮಾ ಚೆನ್ನಾಗಿದ್ದರೆ ಭಾಷೆ ಯಾವುದೇ ಆದರೂ ಜನ ನೋಡುತ್ತಾ ಎಂದು ವಿವರಿಸಿದ್ದಾರೆ.

    Kamal Hassan About mani ratnams Ponniyin Selvan controversy

    ಇನ್ನು "ಚೋಳ ರಾಜರು ಹಿಂದೂಗಳಲ್ಲ" ಎಂದು ಕಮಲ ಹಾಸನ್ ಹೇಳಿದ್ದಾರೆ. ರಾಜರಾಜ ಚೋಳನ ಕಾಲದಲ್ಲಿ ಹಿಂದೂ ಧರ್ಮ ಇರಲಿಲ್ಲ, ಶೈವ ಮತ್ತು ವೈಷ್ಣವ ಧರ್ಮ ಮಾತ್ರ ಇತ್ತು. ಬ್ರಿಟಿಷರು ನಮ್ಮ ದೇಶವನ್ನು ಪ್ರವೇಶಿಸಿದ ನಂತರ ನಮ್ಮನ್ನು ಏನೆಂದು ಕರೆಯಬೇಕೆಂದು ಅವರಿಗೆ ತಿಳಿದಿರಲಿಲ್ಲ , ನಂತರ ಅವರು ನಮ್ಮನ್ನು ಹಿಂದೂಗಳು ಎಂದು ಸಂಬೋಧಿಸಿದರು ಎಂದು ಕಮಲ್ ಹಾಸನ್ ಹೇಳಿದ್ದಾರೆ.

    ಬಾಕ್ಸ್‌ ಆಫೀಸ್‌ನಲ್ಲಿ 'ಪೊನ್ನಿಯನ್‌ ಸೆಲ್ವನ್‌' ನಾಗಾಲೋಟ: 200 ಕೋಟಿ ಕ್ಲಬ್ ಸೇರಿದ ಸಿನಿಮಾಬಾಕ್ಸ್‌ ಆಫೀಸ್‌ನಲ್ಲಿ 'ಪೊನ್ನಿಯನ್‌ ಸೆಲ್ವನ್‌' ನಾಗಾಲೋಟ: 200 ಕೋಟಿ ಕ್ಲಬ್ ಸೇರಿದ ಸಿನಿಮಾ

    ಮಣಿರತ್ನಂ ಅವರ ಕನಸಿನ ಚಿತ್ರ 'ಪೊನ್ನಿಯನ್ ಸೆಲ್ವನ್' ಸೆಪ್ಟೆಂಬರ್ 30ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿಅದ್ಧೂರಿಯಾಗಿ ಬಿಡುಗಡೆಯಾಗಿದೆ. 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಐಶ್ವರ್ಯ ರೈ, ತ್ರಿಶಾ, ಪ್ರಕಾಶ್ ರಾಜ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ ಜೊತೆ ಸೇರಿ ಸ್ವತಃ ಮಣಿರತ್ನಂ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ವಿಶ್ವದಾದ್ಯಂತ 280 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ.

    ಮೊದಲ ದಿನ ಬ್ರಹ್ಮಾಸ್ತ್ರಕ್ಕಿಂತ ಹೆಚ್ಚು ಗಳಿಸಿದ ಪೊನ್ನಿಯನ್ ಸೆಲ್ವನ್; ಹಳೆ ದಾಖಲೆಗಳೆಲ್ಲ ಪೀಸ್ ಪೀಸ್!ಮೊದಲ ದಿನ ಬ್ರಹ್ಮಾಸ್ತ್ರಕ್ಕಿಂತ ಹೆಚ್ಚು ಗಳಿಸಿದ ಪೊನ್ನಿಯನ್ ಸೆಲ್ವನ್; ಹಳೆ ದಾಖಲೆಗಳೆಲ್ಲ ಪೀಸ್ ಪೀಸ್!

    English summary
    Kamal Hassan About mani ratnam's Ponniyin Selvan controversy. Ulaga Nayagan Sensational comments on Ponniyin Selvan. Know More.
    Thursday, October 6, 2022, 14:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X