For Quick Alerts
  ALLOW NOTIFICATIONS  
  For Daily Alerts

  35 ವರ್ಷಗಳ ನಂತರ ಖ್ಯಾತ ನಿರ್ದೇಶಕನ ಜೊತೆ ಕೈ ಜೋಡಿಸಿದ ಕಮಲ್ ಹಾಸನ್: ಯಾವ ಸಿನಿಮಾ?

  |

  ಒಬ್ಬರು ಭಾರತೀಯ ಚಿತ್ರರಂಗವೇ ಮೆಚ್ಚಿಕೊಂಡ ಅದ್ಭುತ ನಟ. ಮತ್ತೊಬ್ಬರು ಭಾರತೀಯ ಚಿತ್ರರಂಕ ಕಂಡ ಅದ್ಭುತ ನಿರ್ದೇಶಕ. ಇವರಿಬ್ಬರು ಒಂದೇ ಸಿನಿಮಾದಲ್ಲಿ ಮತ್ತೆ ಕೆಲಸ ಮಾಡುವ ಸುದ್ದಿ ಬಂದಿದೆ. ಕಮಲ್ ಹಾಸನ್ ಹಾಗೂ ಮಣಿರತ್ನಂ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ.

  35 ವರ್ಷಗಳ ಹಿಂದೆ ಮಣಿರತ್ನಂ ನಿರ್ದೇಶನದ 'ನಾಯಗನ್' ಚಿತ್ರದಲ್ಲಿ ಕಮಲ್ ಹಾಸನ್ ನಟಿಸಿದ್ದರು. ನಂತರ ಇಬ್ಬರು ಮತ್ತೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಪೊನ್ನಿಯನ್ ಸೆಲ್ವನ್ ನಂತರ ಕಮಲ್ ಹಾಸನ್ ಚಿತ್ರವನ್ನು ಮಣಿರತ್ನಂ ಕೈಗೆತ್ತಿಕೊಂಡಿದ್ದಾರೆ. 'ವಿಕ್ರಂ' ಸಕ್ಸಸ್ ಬೆನ್ನಲ್ಲೇ ಉಳಗ ನಾಯಗನ್ 'ಇಂಡಿಯನ್ - 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ನಂತರ ಹೊಸ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ವಿಶೇಷ ಅಂದರೆ ಎ. ಆರ್ ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಒಂದೇ ಸಿನಿಮಾದಲ್ಲಿ ತ್ರಿಮೂರ್ತಿಗಳ ಸಮಾಗಮವಾಗುತ್ತಿರುವುದು ವಿಶೇಷ.

  ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಮಲ್ ಹಾಸನ್ 'ವಿಕ್ರಂ' ಆಗಿ ಭರ್ಜರಿ ಕಂಬ್ಯಾಕ್ ಮಾಡಿದ್ದರು. ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದರು. ಸಾಲದ ಸುಳಿಗೆ ಸಿಲುಕಿದ್ದ ನಟ ಸಾಲ ತೀರಿಸಿ ಹೊಸ ಹುರಿಪಿನಿಂದ ಮತ್ತೆ ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ.

  ಕಮಲ್ ಹಾಸನ್ 234ನೇ ಸಿನಿಮಾ

  ಕಮಲ್ ಹಾಸನ್ 234ನೇ ಸಿನಿಮಾ

  ಈಗಾಗಲೇ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ. ಇದು ಕಮಲ್ ನಟನೆಯ 234ನೇ ಸಿನಿಮಾ. ಇನ್ನು ಟೈಟಲ್ ಫೈನಲ್ ಆಗದ ಕಾರಣ KH234 ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಘೋಷಣೆಯಾಗಿದೆ. ನಟಿಸೋದರ ಜೊತೆಗೆ ಕಮಲ್ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ನಿರ್ದೇಶನದ ಜೊತೆಗೆ ಮಣಿರತ್ನಂ ಕೂಡ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಆರ್‌. ಮಹೇಂದ್ರನ್, ಶಿವ ಅನಂತ್ ಕೂಡ ಸಹ ನಿರ್ಮಾಪಕರಾಗಿದ್ದಾರೆ. 2024ಕ್ಕೆ ಈ ಕ್ರೇಜಿ ಕಾಂಬಿನೇಷನ್‌ ಸಿನಿಮಾ ತೆರೆಗೆ ಬರಲಿದೆ.

  'ನಾಯಗನ್' ಆಗಿ ಗೆದ್ದಿದ್ದ ಕಮಲ್

  'ನಾಯಗನ್' ಆಗಿ ಗೆದ್ದಿದ್ದ ಕಮಲ್

  1987ರ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ನಾಯಗನ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಣಿರತ್ನಂ ಟೇಕಿಂಗ್, ಕಮಲ್ ಹಾಸನ್ ಪರ್ಫಾರ್ಮೆನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಬರೋಬ್ಬರಿ 175 ದಿನಗಳ ಪ್ರದರ್ಶನ ಕಂಡು ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಉಳಗ ನಾಯಗನ್ ತಮ್ಮ ಅದ್ಭುತ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅದೇ ಕಾರಣಕ್ಕೆ ಇವರಿಬ್ಬರ ಕಾಂಬಿನೇಷನ್‌ನ ಹೊಸ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.

  ಗೆದ್ದು ಬೀಗಿದ 'ವಿಕ್ರಂ'

  ಗೆದ್ದು ಬೀಗಿದ 'ವಿಕ್ರಂ'

  ಜೂನ್ 3ರಂದು ಬಿಡುಗಡೆಯಾಗಿದ್ದ ಲೋಕೇಶ್ ಕನಗರಾಜ್ ನಿರ್ದೇಶನದ 'ವಿಕ್ರಂ' ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆದು ಸದ್ದು ಮಾಡಿತ್ತು. ಕಮಲ್ ಹಾಸನ್ ಕಥೆ ಮುಗಿದೇ ಹೋಯಿತು ಎನ್ನುವ ಸಮಯದಲ್ಲಿ ಈ ಸಿನಿಮಾ ಗೆಲುವಿನ ಟಾನಿಕ್ ನೀಡಿತ್ತು. ಏಜೆಂಟ್ ವಿಕ್ರಂ ಆಗಿ ಕಮಲ್ ಆರ್ಭಟಿಸಿದರು. ಚಿತ್ರದಿಂದ ಬಂದ ಲಾಭದಲ್ಲಿ ನಿರ್ದೇಶಕರಿಗೆ ಸಹ ನಿರ್ದೇಶಕರಿಗೆ ಉಡುಗೊರೆ ನೀಡಿದ್ದರು. ಆಡಿಕೊಳ್ಳುವವರ ಮುಂದೆ ಗೆದ್ದು ಬೀಗಿದ್ದರು.

  'ಪೊನ್ನಿಯಿನ್ ಸೆಲ್ವನ್' ದಾಖಲೆ

  'ಪೊನ್ನಿಯಿನ್ ಸೆಲ್ವನ್' ದಾಖಲೆ

  ಸೆಪ್ಟೆಂಬರ್ 30ಕ್ಕೆ ತೆರೆಗಪ್ಪಳಿಸಿದ 'ಪೊನ್ನಿಯಿನ್ ಸೆಲ್ವನ್' 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಐತಿಹಾಸಿಕ ಕಥಾಹಂದರದ ಚಿತ್ರವನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟು ಮಣಿರತ್ನಂ ಗೆದ್ದಿದ್ದಾರೆ. ಚಿಯಾನ್ ವಿಕ್ರಮ್, ಐಶ್ವರ್ಯ ರೈ, ಕಾರ್ತಿ, ತ್ರಿಷಾ ಸೇರಿದಂತೆ ದೊಡ್ಡ ತಾರಾಗಣ ಈ ಕಾಸ್ಟ್ಯೂಮ್ ಡ್ರಾಮದಲ್ಲಿದೆ. ಚಿತ್ರಕ್ಕೆ ಕಮಲ್ ಹಾಸನ್ ವಾಯ್ಸ್ ಓವರ್ ಕೂಡ ಕೊಟ್ಟಿದ್ದರು. ಕಮಲ್ ದಶಕಗಳ ಹಿಂದೆಯೇ ಈ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. ಆದರೆ ಸಾಧ್ಯವಾಗಿರಲಿಲ್ಲ.

  English summary
  2 Icons of indian cinema Kamal Hassan and director Mani Ratnam reunite for a new film after 35 years For KH234. A R Rahman scores music for this movie.movie is set to hit screens in 2024. Know more.
  Sunday, November 6, 2022, 19:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X