For Quick Alerts
  ALLOW NOTIFICATIONS  
  For Daily Alerts

  ಚುನಾವಣೆ ಮುಗಿದ ತಕ್ಷಣ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡ ಕಮಲ್ ಹಾಸನ್

  |

  ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದಿದೆ. 'ಮಕ್ಕಳ್ ನೀಧಿ ಮಯಮ್' ಪಕ್ಷದ ಪರವಾಗಿ ನಟ ಕಮಲ್ ಹಾಸನ್ ನಿರಂತರ ಪ್ರಚಾರ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದ ಸಿನಿಮಾ ಕೆಲಸಗಳನ್ನು ಬದಿಗಿಟ್ಟು ತಿಂಗಳುಗಟ್ಟಲೆ ಜನರ ಮುಂದೆ ನಿಂತಿದ್ದರು.

  ತಮಿಳುನಾಡಿನ ಚುಕ್ಕಾಣಿ ಹಿಡಿಯಲು ಎಐಎಡಿಎಂಕೆ, ಡಿಎಂಕೆ, ಬಿಜೆಪಿ, ಕಾಂಗ್ರೆಸ್, ಕಮಲ್ ಹಾಸನ್ ಪಕ್ಷ, ಶರತ್ ಕುಮಾರ್ ಪಕ್ಷ, ವಿಜಯಕಾಂತ್ ಪಕ್ಷ ಸೇರಿದಂತೆ ಹಲವರು ಪೈಪೋಟಿ ನಡೆಸಿದ್ದಾರೆ. ಮೇ 2 ರಂದು ಎಲ್ಲರ ಹಣೆ ಬರಹ ಹೊರಬೀಳಲಿದೆ. ಮತದಾನ ಮುಗಿಸಿದ ಅಭ್ಯರ್ಥಿಗಳು, ಸ್ಟಾರ್ ಪ್ರಚಾಕರು ಈಗ ರಿಲ್ಯಾಕ್ಸ್ ಮೂಡ್‌ಗೆ ತೆರಳಿದ್ದಾರೆ. ಆದರೆ, ಕಮಲ್ ಹಾಸನ್ ಮಾತ್ರ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸುತ್ತಿದ್ದಾರೆ. ಮುಂದೆ ಓದಿ...

  'ವಿಕ್ರಂ' ಶೂಟಿಂಗ್ ಆರಂಭ

  'ವಿಕ್ರಂ' ಶೂಟಿಂಗ್ ಆರಂಭ

  'ಮಾಸ್ಟರ್' ಚಿತ್ರದ ಖ್ಯಾತಿಯ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ಕಮಲ್ ಹಾಸನ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ 'ವಿಕ್ರಂ' ಎಂದು ಹೆಸರಿಡಲಾಗಿದ್ದು, ಚುನಾವಣೆಗೂ ಮೊದಲೇ ಟೀಸರ್ ಬಿಡುಗಡೆಯಾಗಿತ್ತು. ಈಗ ಎಲೆಕ್ಷನ್ ಮುಗಿಸಿರುವ ಕಮಲ್ ಹಾಸನ್ 'ವಿಕ್ರಂ' ಸಿನಿಮಾದ ಶೂಟಿಂಗ್ ಆರಂಭಿಸುತ್ತಿದ್ದಾರೆ. ಈ ಕುರಿತು ನಿರ್ದೇಶಕ ಲೋಕೇಶ್ ಸುಳಿವು ನೀಡಿದ್ದಾರೆ.

  ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ದೂರು ನೀಡಿದ ನಿರ್ಮಾಣ ಸಂಸ್ಥೆಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ದೂರು ನೀಡಿದ ನಿರ್ಮಾಣ ಸಂಸ್ಥೆ

  ವಿವಾದದಲ್ಲಿ 'ಇಂಡಿಯನ್-2'

  ವಿವಾದದಲ್ಲಿ 'ಇಂಡಿಯನ್-2'

  ಚುನಾವಣೆ ದಿನಾಂಕ ಘೋಷಣೆಗೂ ಮುಂಚೆ ಇಂಡಿಯನ್ 2 ಚಿತ್ರದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದರು. ಎಲೆಕ್ಷನ್ ಕಾರಣಕ್ಕೆ ಕಮಲ್ ಹಾಸನ್ ಶೂಟಿಂಗ್ ನಿಲ್ಲಿಸಿ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾದರು. ಆ ಕಡೆ ಇಂಡಿಯನ್ 2 ಸಿನಿಮಾ ಬದಿಗಿಟ್ಟ ಶಂಕರ್ ತೆಲುಗು ನಟ ರಾಮ್ ಚರಣ್ ಜೊತೆ ಹೊಸ ಸಿನಿಮಾ ಪ್ರಕಟಿಸಿದರು. ಇದರಿಂದ ಕೋಪಗೊಂಡ ಲೈಕಾ ಪ್ರೊಡಕ್ಷನ್ ಸಂಸ್ಥೆ ಇಂಡಿಯನ್ 2 ಚಿತ್ರ ಬಿಟ್ಟು ಇನ್ನೊಂದು ಸಿನಿಮಾ ಮಾಡದಂತೆ ಶಂಕರ್ ವಿರುದ್ಧ ಮದ್ರಾಸ್ ಹೈ ಕೋರ್ಟ್‌ ಮೊರೆ ಹೋಗಿದೆ.

  ರಿಲ್ಯಾಕ್ಸ್ ಮೂಡ್‌ನಲ್ಲಿ ಖುಷ್ಬೂ

  ರಿಲ್ಯಾಕ್ಸ್ ಮೂಡ್‌ನಲ್ಲಿ ಖುಷ್ಬೂ

  ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಚೆನ್ನೈ ವಿಧಾನಸಭೆ ಕ್ಷೇತ್ರದಿಂದ ನಟಿ ಖುಷ್ಬೂ ಕಣಕ್ಕೆ ಇಳಿದಿದ್ದರು. ಚುನಾವಣೆ ಘೋಷಣೆ ದಿನದಿಂದ ನಿನ್ನೆಯವರೆಗೂ ಖುಷ್ಬೂ ಸಿಕ್ಕಾಪಟ್ಟೆ ಬ್ಯುಸಿ ಇದ್ದರು. ಚುನಾವಣೆ ಮುಗಿಯುತ್ತಿದ್ದಂತೆ ರಿಲ್ಯಾಕ್ಸ್ ಮೂಡ್‌ಗೆ ತೆರಳಿರುವ ನಟಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಚಾರದ ವೇಳೆ ನಿರಂತರವಾಗಿ ಮುಖಕ್ಕೆ ಮಾಸ್ಕ್ ಧರಿಸಿದ್ದ ಖುಷ್ಬೂ ಈಗ ಮನೆಮದ್ದಿನ ಮೂಲಕ ಚಿಕಿತ್ಸೆ ಪಡೆದಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಸೈಕಲ್ ನಲ್ಲಿ ಬಂದು ಮತಚಲಾಯಿಸಿ ಸಂಚಲನ ಮೂಡಿಸಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ನಟ ವಿಜಯ್ಸೈಕಲ್ ನಲ್ಲಿ ಬಂದು ಮತಚಲಾಯಿಸಿ ಸಂಚಲನ ಮೂಡಿಸಿದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ನಟ ವಿಜಯ್

  ನಟ ಕಾರ್ತಿ ಹೇಳಿದ ಯಾವ ಮಾತಿಗೆ ರಶ್ಮಿಕಾಗೆ ಅಳು ಬಂತು | Filmibeat Kannada
  ವಿದೇಶಕ್ಕೆ ಹಾರಿದ ನಟ ವಿಜಯ್

  ವಿದೇಶಕ್ಕೆ ಹಾರಿದ ನಟ ವಿಜಯ್

  ಸೈಕಲ್‌ನಲ್ಲಿ ತೆರಳಿ ಮತದಾನ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ನಟ ವಿಜಯ್, ಚುನಾವಣೆ ಮುಗಿಯುತ್ತಿದ್ದಂತೆ ವಿದೇಶಕ್ಕೆ ಹಾರಿದ್ದಾರೆ. ವಿಜಯ್ 65ನೇ ಚಿತ್ರೀಕರಣಕ್ಕಾಗಿ ನಿನ್ನೆ ರಾತ್ರಿಯೇ ವಿಜಯ್ ಜಾರ್ಜಿಯಾಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.

  English summary
  After Tamilnadu Assembly Election, Kamal Hassan And Lokesh kanagaraj Set To start Vikram Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X