For Quick Alerts
  ALLOW NOTIFICATIONS  
  For Daily Alerts

  ಕಮಲ್- ಶಂಕರ್ ಜುಗಲ್ಬಂದಿ: ಸೇನಾಪತಿ ಆಗಿ ಬಣ್ಣ ಹಚ್ಚಿದ ಉಳಗ ನಾಯಗನ್

  |

  ಕೊನೆಗೂ ಕಮಲ್ ಹಾಸನ್ 'ಇಂಡಿಯನ್ - 2' ಸಿನಿಮಾ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ನಿಂತೇ ಹೋಯ್ತು ಎಂದುಕೊಂಡಿದ್ದ ಚಿತ್ರಕ್ಕೆ ಕೆಲ ದಿನಗಳ ಹಿಂದೆ ಜೀವ ಬಂದಿತ್ತು. ರಾಮ್‌ಚರಣ್ ಸಿನಿಮಾ ಜೊತೆ ಜೊತೆಗೆ ಶಂಕರ್ ಈ ಸಿನಿಮಾ ಶೂಟಿಂಗ್ ಮಾಡಿ ಮುಗಿಸುವ ಪ್ರಯತ್ನದಲ್ಲಿದ್ದಾರೆ. 2 ವರ್ಷಗಳ ಹಿಂದೆ 'ಇಂಡಿಯನ್ - 2' ಸೆಟ್‌ನಲ್ಲಿ ನಡೆದ ದುರಂತದಿಂದ ಸಿನಿಮಾ ನಿಂತು ಹೋಗಿತ್ತು.

  2020 ಫೆಬ್ರವರಿಯಲ್ಲಿ ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ 'ಇಂಡಿಯನ್'-2 ಚಿತ್ರೀಕರಣ ನಡೆಯುತ್ತಿತ್ತು. ಸೆಟ್‌ನಲ್ಲಿ ಲೈಟಿಂಗ್ ವ್ಯವಸ್ಥೆ ಮಾಡುವಾಗ 150 ಅಡಿ ಎತ್ತರದಿಂದ ಕ್ರೇನ್ ಮುರಿದು ಚಿತ್ರತಂಡ ಉಳಿದುಕೊಂಡಿದ್ದ ಟೆಂಟ್ ಮೇಲೆ ಬಿದ್ದಿತ್ತು. ಈ ದುರಂತದಲ್ಲಿ ನಿರ್ದೇಶಕ ಶಂಕರ್ ಆಪ್ತ ಸಹಾಯಕ ಮಧು (29), ಸಹಾಯಕ ನಿರ್ದೇಶಕ ಸಾಯಿಕೃಷ್ಣ (34), ಮತ್ತೊಬ್ಬ ಸಹಾಯಕ ಚಂದ್ರನ್ ಸ್ಥಳದಲ್ಲೇ ಮೃತಟ್ಟಿದ್ದರು. ಅವಘಡದಲ್ಲಿ 10 ಜನ ಸಿನಿಮಾ ಕಾರ್ಮಿಕರು ಗಾಯಗೊಂಡಿದ್ದರು. ಹಾಗಾಗಿ ಸಿನಿಮಾ ಚಿತ್ರೀಕರಣ ನಿಂತು ಹೋಗಿತ್ತು. ನಂತರ ಶಂಕರ್ ಆ ಸಿನಿಮಾ ಕೈಬಿಟ್ಟು ರಾಮ್‌ಚರಣ್ ನಟನೆಯ ತೆಲುಗು ಸಿನಿಮಾ ಆರಂಭಿಸಿದ್ದರು.

  ಯಶ್ - ಶಂಕರ್ ಕಾಂಬಿನೇಷನ್‌ ಚಿತ್ರಕ್ಕೆ ನೆಟ್‌ಫ್ಲಿಕ್ಸ್- ಕರಣ್ ಜೋಹರ್ ಬಂಡವಾಳ?ಯಶ್ - ಶಂಕರ್ ಕಾಂಬಿನೇಷನ್‌ ಚಿತ್ರಕ್ಕೆ ನೆಟ್‌ಫ್ಲಿಕ್ಸ್- ಕರಣ್ ಜೋಹರ್ ಬಂಡವಾಳ?

  'ಇಂಡಿಯನ್'- 2 ಸಿನಿಮಾ ಮುಗಿಸದೇ ಶಂಕರ್ ಮತ್ತೊಂದು ಸಿನಿಮಾ ಶುರು ಮಾಡಿದ್ದು, ನಿರ್ಮಾಪಕರಿಗೆ ಬೇಸರ ತಂದಿತ್ತು. ಈ ಸಂಬಂಧ ಸಿನಿಮಾ ನಿರ್ಮಿಸುತ್ತಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಮದ್ರಾಸ್ ಕೋರ್ಟ್ ಮೆಟ್ಟಿಲೇರಿತ್ತು. ಕಮಲ್ ಹಾಸನ್ ನಟಿಸಿದ ವಿಕ್ರಮ್ ಸಿನಿಮಾ ಸೂಪರ್ ಹಿಟ್ ಬೆನ್ನಲ್ಲೇ ಮತ್ತೆ 'ಇಂಡಿಯನ್'- 2 ಸಿನಿಮಾ ಆರಂಭಿಸಿವ ಪ್ರಯತ್ನ ಶುರುವಾಯ್ತು. ನಿರ್ದೇಶಕ ಶಂಕರ್ ಸಹ ಒಪ್ಪಿದ್ದರು. ಕಳೆದ ತಿಂಗಳು ಪೂಜೆ ಮಾಡಿ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿತ್ತು.

  ಕೆಲ ದಿನಗಳಿಂದ ಕಾಜಲ್ ಅಗರ್‌ವಾಲ್, ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್, ಸಮುದ್ರ ಖಣಿ 'ಇಂಡಿಯನ್'- 2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೀಗ ಕಮಲ್ ಹಾಸನ್ ಕೂಡ ಚಿತ್ರೀಕರಣಕ್ಕೆ ಹಾಜರಾಗಿದ್ದು, ಈ ಬಗ್ಗೆ ಫೋಟೊ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 1996ರಲ್ಲಿ ತೆರೆಕಂಡಿದ್ದ 'ಇಂಡಿಯನ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಮಲ್ ಹಾಸನ್ ಡಬಲ್ ರೋಲ್‌ನಲ್ಲಿ ಅಬ್ಬರಿಸಿ ಬಾಕ್ಸಾಫೀಸ್ ಶೇಕ್ ಮಾಡಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಮತ್ತೆ ಸೀಕ್ವೆಲ್ ಸಿನಿಮಾ ಮೂಡಿ ಬರ್ತಿದೆ. 200 ಕೋಟಿ ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ.

  English summary
  Kamal Haasan resumes shooting for Indian 2. Know More.
  Thursday, September 22, 2022, 16:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X