For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿಯನ್ನು ಮದುವೆ ಆಗುವುದಿಲ್ಲ ಎಂದಿದ್ದ ಕಮಲ್ ಹಾಸನ್: ಕಾರಣ ಏನು?

  |

  ನಟಿ ಶ್ರೀದೇವಿಯ ಸೌಂದರ್ಯಕ್ಕೆ ಕೋಟ್ಯಂತರ ಅಭಿಮಾನಿಗಳು. ಅವರು ಅಗಲಿದ್ದರೂ ಸಹ ಅವರ ಸೌಂದರ್ಯ ಕಣ್ಣಿನಿಂದ ಮರೆಯಾಗಿಲ್ಲ.

  ನಟಿ ಪ್ರಣೀತಾ ಸುಭಾಷ್ ಮತ್ತೊಮ್ಮೆ ಬಡವರ ಹಸಿವಿಗೆ ಸ್ಪಂದಿಸಿದ್ದು ಹೀಗೆ | Oneindia Kannada

  ಶ್ರೀದೇವಿ ಅವರ ಸಿನಿ ಪಯಣದ ಆರಂಭದ ದಿನಗಳಲ್ಲಿ ಅವರ ಸೌಂದರ್ಯಕ್ಕೆ ಮಾರುಹೋದವರೆಷ್ಟೋ. ಕೇವಲ ಸಿನಿ ಪ್ರೇಕ್ಷಕರು ಮಾತ್ರವಲ್ಲ, ನಟ-ನಿರ್ದೇಶಕರೂ ಸಹ ಶ್ರೀದೇವಿ ಅವರ ಅಭಿಮಾನಿಗಳಾಗಿದ್ದರು.

  ಆದರೆ ಅಂತಹ ಸುರ ಸುಂದರಿಯನ್ನು ವಿವಾಹವಾಗುವ ಅವಕಾಶ ತಾನಾಗಿಯೇ ಹುಡುಕಿಕೊಂಡು ಬಂದರೂ ಸಹ ಬೇಡ ಎಂದು ದೂರ ಸರಿದಿದ್ದರಂತೆ ಖ್ಯಾತ ನಟ ಕಮಲ್ ಹಾಸನ್.

  ಕಮಲ್ ಹಾಸನ್-ಶ್ರೀದೇವಿ ಬಹು ಆಪ್ತರಾಗಿದ್ದರು

  ಕಮಲ್ ಹಾಸನ್-ಶ್ರೀದೇವಿ ಬಹು ಆಪ್ತರಾಗಿದ್ದರು

  ಕಮಲ್ ಹಾಸನ್ ಅವರು ಶ್ರೀದೇವಿ ಅವರ ಆಪ್ತ ಸ್ನೇಹಿತರಾಗಿದ್ದರು. ಶ್ರೀದೇವಿ ಅವರ ಆರಂಭದ ದಿನಗಳಲ್ಲಿ ಕಮಲ್ ಹಾಸನ್ ಸಾಕಷ್ಟು ಸಹಾಯ ಮಾಡಿದ್ದರಂತೆ. ಕಮಲ್ ಹಾಸನ್ ಕುಟುಂಬ ಮತ್ತು ಶ್ರೀದೇವಿ ಕುಟುಂಬ ಪರಸ್ಪರ ಆಪ್ತವಾಗಿದ್ದವು.

  ಶ್ರೀದೇವಿ ತಾಯಿ ಕಮಲ್ ಹಾಸನ್ ಅನ್ನು ಕೇಳಿದ್ದರು

  ಶ್ರೀದೇವಿ ತಾಯಿ ಕಮಲ್ ಹಾಸನ್ ಅನ್ನು ಕೇಳಿದ್ದರು

  ಒಮ್ಮೆ ಶ್ರೀದೇವಿ ತಾಯಿ ರಾಜೇಶ್ವರಿ ಅವರು ಕಮಲ್ ಬಳಿ, 'ನನ್ನ ಮಗಳನ್ನು ನೀವು ಮದುವೆ ಏಕಾಗಬಾರದು' ಎಂದು ಕೇಳಿದ್ದರಂತೆ. ಆದರೆ ಈ ಮನವಿಯನ್ನು ಕಮಲ್ ಹಾಸನ್ ನಿರಾಕರಿಸಿದರಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

  ಈ ಕಾರಣಕ್ಕೆ ಶ್ರೀದೇವಿಯನ್ನು ಮದುವೆ ಆಗಲಿಲ್ಲ ಕಮಲ್ ಹಾಸನ್

  ಈ ಕಾರಣಕ್ಕೆ ಶ್ರೀದೇವಿಯನ್ನು ಮದುವೆ ಆಗಲಿಲ್ಲ ಕಮಲ್ ಹಾಸನ್

  'ಶ್ರೀದೇವಿ ನಾನು ಎಷ್ಟು ಒಳ್ಳೆಯ ಗೆಳೆಯರಾಗಿದ್ದೆವೆಂದರೆ ಇಬ್ಬರೂ ಒಂದೇ ಕುಟುಂಬದವರಂತೆ ಇದ್ದೆವು. ಶ್ರೀದೇವಿ ನಮ್ಮ ಕುಟುಂಬದವರೇ ಎಂದು ನಾನು ಅಂದುಕೊಂಡಿದ್ದೆ. 'ನನ್ನದೇ ಕುಟುಂಬದವರನ್ನು ನಾನು ಹೇಗೆ ಮದುವೆ ಆಗಲಿ, ಹಾಗಾಗಿ ಶ್ರೀದೇವಿಯೊಂದಿಗೆ ಮದುವೆ ಆಗುವ ಅವಕಾಶವನ್ನು ನಾನು ಒಪ್ಪಿಕೊಳ್ಳಲಿಲ್ಲ' ಎಂದು ಕಮಲ್ ಹಾಸನ್ ಹೇಳಿದ್ದಾರೆ.

  ಬಹಳ ಆತ್ಮೀಯ ಸ್ನೇಹಿತರಾಗಿದ್ದೆವು ನಾವು: ಕಮಲ್

  ಬಹಳ ಆತ್ಮೀಯ ಸ್ನೇಹಿತರಾಗಿದ್ದೆವು ನಾವು: ಕಮಲ್

  ಶ್ರೀದೇವಿ ಮತ್ತು ಬಹಳ ಆತ್ಮೀಯ ಗೆಳೆಯರಾಗಿದ್ದೆವು. ನಮ್ಮಿಬ್ಬರ ಆತ್ಮೀಯತೆಯಿಂದ ನಮ್ಮ ನಡುವೆ ಪ್ರೇಮವಿದೆ ಎಂದು ಹಲವರು ಅಂದುಕೊಂಡಿದ್ದರು. ಆದರೆ ಅದು ಹಾಗಿರಲಿಲ್ಲ. ಶ್ರೀದೇವಿ ಎಂದೂ ಸಹ ನನ್ನನ್ನು ಹೆಸರಿನಿಂದ ಕರೆದಿದ್ದೇ ಇಲ್ಲ. ಯಾವಾಗಲೂ ಸರ್ ಎಂದೇ ಕರೆಯುತ್ತಿದ್ದರು ಎಂದು ಕಮಲ್ ಹಾಸನ್ ನೆನಪಿಸಿಕೊಂಡಿದ್ದಾರೆ.

  ಶ್ರೀದೇವಿಯನ್ನು ಕೊನೆಯ ಭಾರಿ ನೋಡಿದ ನೆನಪು

  ಶ್ರೀದೇವಿಯನ್ನು ಕೊನೆಯ ಭಾರಿ ನೋಡಿದ ನೆನಪು

  ಶ್ರೀದೇವಿ ಅವರನ್ನು ಕೊನೆಯ ಬಾರಿಗೆ ನೋಡಿದ್ದ ಘಟನೆ ಬಗ್ಗೆ ಮಾತನಾಡಿರುವ ಕಮಲ್, ನಾನೊಂದು ಕಾರ್ಯಕ್ರಮದಲ್ಲಿ ಆಕೆಯನ್ನು ಭೇಟಿಯಾಗಿದ್ದೆ, ಅಂದು ಆಕೆ ನನ್ನನ್ನು ಅಪ್ಪಿಕೊಂಡರು. ಸಾಮಾನ್ಯವಾಗಿ ಹಾಗೆ ಆಕೆ ಮಾಡುತ್ತಿರಲಿಲ್ಲ. ಅದೇ ಕೊನೆ ಶ್ರೀದೇವಿಯನ್ನು ನಾನು ನೋಡಿದ್ದು' ಎಂದು ಕಮಲ್ ಹೇಳಿದ್ದಾರೆ.

  English summary
  Sridevi's mother asked kamal Hassan to marry her daughter. But Kamal Hassan say no to her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X