For Quick Alerts
  ALLOW NOTIFICATIONS  
  For Daily Alerts

  'ವಿಕ್ರಂ' ಫಸ್ಟ್ ಲುಕ್: ಒಂದು ಪೋಸ್ಟರ್, ಮೂರು ಸ್ಟಾರ್ ನಟರು

  |

  ಸೂಪರ್ ಸ್ಟಾರ್ ಕಮಲ್ ಹಾಸನ್ ನಟಿಸುತ್ತಿರುವ ವಿಕ್ರಂ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹೊಸ ಪೋಸ್ಟರ್‌ನಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಾಹದ್ ಫಾಸಿಲ್ ಮೂವರ ನೋಟ ಅನಾವರಣಗೊಂಡಿದೆ.

  ಈ ಮೂಲಕ ವಿಕ್ರಂ ಸಿನಿಮಾದಲ್ಲಿ ಸ್ಟಾರ್ ನಟರು ಅಭಿನಯಿಸುತ್ತಿರುವುದು ಖಚಿತವಾಗಿದೆ. ಬಹಳ ದಿನದಿಂದಲೂ ವಿಜಯ್ ಸೇತುಪತಿ, ಫಾಹದ್ ಫಾಸಿಲ್ ಇಬ್ಬರು 'ವಿಕ್ರಂ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಅಧಿಕೃತವಾಗಿ ಹೇಳಿರಲಿಲ್ಲ. ಈಗ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಈ ಸುದ್ದಿ ಪಕ್ಕಾ ಆಗಿದೆ.

  ಕಮಲ್ ಹಾಸನ್ 'ವಿಕ್ರಂ' ಚಿತ್ರಕ್ಕೆ ಬಂದ 'ಖೈದಿ' ನಟ ನರೈನ್ಕಮಲ್ ಹಾಸನ್ 'ವಿಕ್ರಂ' ಚಿತ್ರಕ್ಕೆ ಬಂದ 'ಖೈದಿ' ನಟ ನರೈನ್

  ಈ ಹಿಂದೆ ಕಮಲ್ ಹಾಸನ್ ಅವರ ಹುಟ್ಟುಹಬ್ಬದಂದು 'ವಿಕ್ರಂ' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಕಮಲ್ ನಟಿಸುತ್ತಿರುವ 232ನೇ ಚಿತ್ರ ಇದಾಗಿದ್ದು, ಲೋಕೇಶ್ ಕನಕರಾಜ್ ನಿರ್ದೇಶನ ಮಾಡ್ತಿದ್ದಾರೆ.

  ರಾಜ್ ಕಮಲ್ ಫಿಲಂಸ್ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಖುದ್ದು ಕಮಲ್ ಹಾಸನ್ ಬಂಡವಾಳ ಹಾಕುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಆಗಿದ್ದು, ವಿಜಯ್ ಸೇತುಪತಿ, ಫಾಹದ್ ಫಾಸಿಲ್ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿದೆ.

  ಇನ್ನು ಮಲಯಾಳಂ ಇಂಡಸ್ಟ್ರಿಯ ಖ್ಯಾತ ನಟ ನರೈನ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೋವಿಡ್ ಕಾರಣದಿಂದ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈಗ ಶೂಟಿಂಗ್‌ಗೆ ಅನುಮತಿ ಸಿಕ್ಕಿದ್ದು, ಮತ್ತೆ ವಿಕ್ರಂ ಕೆಲಸ ಪ್ರಾರಂಭಿಸಲು ಮುಂದಾಗಿದೆ ಚಿತ್ರತಂಡ.

  ಟೀಮ್ ಇಂಡಿಯಾ ಆಟಗಾರ್ತಿಯ ಅತ್ಯದ್ಭುತ ಕ್ಯಾಚ್ ಫುಲ್ ವೈರಲ್ | Filmibeat Kannada

  ಈ ಚಿತ್ರ ಹೊರತುಪಡಿಸಿ ಶಂಕರ್ ಜೊತೆ ಇಂಡಿಯನ್ 2 ಸಿನಿಮಾ ಮಾಡಬೇಕಿದೆ. ಆದರೆ ನಿರ್ಮಾಪಕ-ನಿರ್ದೇಶಕರ ಕಾರಣದಿಂದ ಈ ಪ್ರಾಜೆಕ್ಟ್ ನಿಂತಿದೆ. ಇನ್ನು ಮಲಯಾಳಂ ಹಿಟ್ ಚಿತ್ರ 'ದೃಶ್ಯಂ-2' ತಮಿಳಿನಲ್ಲಿ ರಿಮೇಕ್ ಆಗಲಿದ್ದು, ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ.

  English summary
  Tamil actor Kamal Hassan starrer Vikram Movie first look release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X