'ವಿಕ್ರಂ' ನಂತರ ಸ್ಟಾರ್ ನಿರ್ದೇಶಕನ ಜೊತೆ ಕಮಲ್ ಹಾಸನ್ ಹೊಸ ಪ್ರಾಜೆಕ್ಟ್

'ವಿಶ್ವರೂಪಂ' ಸಿನಿಮಾ ಆದ್ಮೇಲೆ ನಟ ಕಮಲ್ ಹಾಸನ್ ರಾಜಕೀಯದ ಕಡೆ ಹೆಚ್ಚು ಒಲವು ತೋರಿದರು. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದರು. ಆದರೆ, ಕಮಲ್ ಪಕ್ಷಕ್ಕೆ ತಮಿಳು ಜನರು ಮತ ಹಾಕಲಿಲ್ಲ. ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಮಲ್ ಮತ್ತೆ ಚಿತ್ರರಂಗಕ್ಕೆ ಮರಳಿದರು. ಹಲವು ದಿನದ ನಂತರ ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿದ ಕಮಲ್ ಹಾಸನ್ ಯುವ ನಿರ್ದೇಶಕರ ಜೊತೆ ಕೆಲಸ ಮಾಡುವ ಬಯಕೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಯುವ ನಿರ್ದೇಶಕರೊಂದಿಗೆ ಹೆಚ್ಚು ಸಿನಿಮಾ ಮಾಡ್ತೇನೆ ಎಂದು ಭರವಸೆ ಕೊಟ್ಟರು.

ಅದರಂತೆ ಲೋಕೇಶ್ ಕನಕರಾಜ್ ಜೊತೆ ವಿಕ್ರಂ ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಶೂಟಿಂಗ್ ಹಂತದಲ್ಲಿದೆ. ರಾಜ್ ಕಮಲ್ ಫಿಲಂಸ್ ಬ್ಯಾನರಸ್‌ನಲ್ಲಿ ಈ ಪ್ರಾಜೆಕ್ಟ್ ತಯಾರಾಗುತ್ತಿದ್ದು, ಹೆಚ್ಚು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ನಂತರ ಕಮಲ್ ಹಾಸನ್ ಹೊಸ ಪ್ರಾಜೆಕ್ಟ್ ಯಾವುದು ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ತಮಿಳಿನ ಕೆಲವು ಮಾಧ್ಯಮಗಳು ವರದಿ ಮಾಡಿರುವಂತೆ, ಸ್ಟಾರ್ ನಿರ್ದೇಶಕ ವೆಟ್ರಿಮಾರನ್ ಜೊತೆ ಕಮಲ್ ಚಿತ್ರ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಟೈಮ್ಸ್ ಆಫ್ ಇಂಡಿಯಾ ಜೊತೆ ನೀಡಿದ ಸಂದರ್ಶನದಲ್ಲಿ ನಟಿ-ನಿರ್ಮಾಪಕಿ ಶ್ರೀಪ್ರಿಯಾ ಈ ವಿಚಾರವನ್ನು ಬಹಿರಂಗಪಡಿಸಿರುವುದಾಗಿ ವರದಿಯಾಗಿದೆ. ಕಮಲ್ ಹಾಸನ್ ಮತ್ತು ವೆಟ್ರಿಮಾರನ್ ಒಟ್ಟಿಗೆ ಸಿನಿಮಾ ಮಾಡುವ ತಯಾರಿ ನಡೆಯುತ್ತಿದೆ ಎಂಬ ಸುಳಿವು ಕೊಟ್ಟಿದ್ದಾರೆ ಎನ್ನಲಾಗಿದೆ. ಮಲಯಾಳಂ ಹಿಟ್ ಚಿತ್ರ ದೃಶ್ಯಂ 2 ತಮಿಳಿನಲ್ಲೂ ರಿಮೇಕ್ ಆಗಲಿದೆ. ತಮಿಳಿನಲ್ಲಿ ಕಮಲ್ ಹಾಸನ್ ಅಭಿನಯಿಸುವ ಸಾಧ್ಯತೆ ಇದೆ. ಆದರೆ ಇದುವರೆಗೂ ಶೂಟಿಂಗ್ ಆರಂಭಿಸಿಲ್ಲ. ಈ ಕುರಿತು 'ಪಾಪನಾಸಂ' ನಿರ್ಮಾಪಕಿ ಶ್ರೀಪ್ರಿಯಾ ಅವರು ಮಾತನಾಡುವ ಸಂದರ್ಭದಲ್ಲಿ ಕಮಲ್ ಹಾಸನ್ ಮತ್ತು ವೆಟ್ರಿಮಾರನ್ ಪ್ರಾಜೆಕ್ಟ್‌ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿ....

ಕಮಲ್ ಚಿತ್ರದ ಬಗ್ಗೆ ಶ್ರೀಪ್ರಿಯಾ ಹೇಳಿದ್ದೇನು?

ಕಮಲ್ ಚಿತ್ರದ ಬಗ್ಗೆ ಶ್ರೀಪ್ರಿಯಾ ಹೇಳಿದ್ದೇನು?

''ಕಮಲ್ ಹಾಸನ್ ಅವರಿಂದ ಮಾತ್ರ ಪಾಪನಾಸಂ ಸೀಕ್ವೆಲ್ ಮಾಡಲು ಸಾಧ್ಯ. ಆದರೆ ಅವರ ಬ್ಯುಸಿ ಶೆಡ್ಯೂಲ್‌ನಿಂದ ಅದಕ್ಕೆ ಸಮಯ ನೀಡಲು ಆಗುತ್ತಿಲ್ಲ. ಸ್ಥಳೀಯ ಚುನಾವಣೆ ಬರ್ತಿದೆ, ಆ ಬಗ್ಗೆ ಕಮಲ್ ಹಾಸನ್ ಹೆಚ್ಚು ಯೋಚಿಸುತ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಸೀಸನ್ 5 ಆರಂಭಿಸಿದ್ದಾರೆ. ಇದರ ಜೊತೆಗೆ ಎರಡು ಚಿತ್ರಗಳು ಅವರ ಕೈಯಲ್ಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಂ ಹಾಗೂ ವೆಟ್ರಿಮಾರನ್ ಜೊತೆ ಹೊಸ ಸಿನಿಮಾ'' ಎಂದು ನಟಿ ಶ್ರೀಪ್ರಿಯಾ ಹೇಳಿದ್ದಾರೆ.

ಹುಟ್ಟುಹಬ್ಬಕ್ಕೆ ಘೋಷಣೆಗೆ ತಯಾರಿ

ಹುಟ್ಟುಹಬ್ಬಕ್ಕೆ ಘೋಷಣೆಗೆ ತಯಾರಿ

ಕಮಲ್ ಹಾಸನ್ ಮತ್ತು ವೆಟ್ರಿಮಾರನ್ ಸಿನಿಮಾ ಅಧಿಕೃತವಾಗಿಲ್ಲ. ಆದ್ರೀಗ ಶ್ರೀಪ್ರಿಯಾ ಅವರ ಬಹಿರಂಗಪಡಿಸಿರುವ ಹಿನ್ನೆಲೆ ಈ ಕಾಂಬಿನೇಷನ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸದ್ಯಕ್ಕೆ ವರದಿಗಳನ್ನು ನಂಬುವುದಾದರೆ ಇನ್ನು ಹೆಸರಿಡದ ಈ ಚಿತ್ರವನ್ನು ಗೋಪುರಂ ಫಿಲಂಸ್ ಸಂಸ್ಥೆ ನಿರ್ಮಿಸಲು ಮುಂದಾಗಿದೆ. ಕಮಲ್ ಹಾಸನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರ ಅಧಿಕೃತವಾಗಿ ಘೋಷಣೆ ಮಾಡಲು ಸಿದ್ಧವಾಗುತ್ತಿದೆಯಂತೆ.

ಪೊಲಿಟಿಕಲ್ ಥ್ರಿಲ್ಲರ್ ವಿಕ್ರಂ

ಪೊಲಿಟಿಕಲ್ ಥ್ರಿಲ್ಲರ್ ವಿಕ್ರಂ

ವಿಕ್ರಂ ಚಿತ್ರದ ಬಗ್ಗೆ ಹೇಳುವುದಾದರೆ ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಆಗಿದೆ. ವಿಜಯ್-ವಿಜಯ್ ಸೇತುಪತಿ ನಟನೆಯ ಮಾಸ್ಟರ್ ಚಿತ್ರ ನಿರ್ದೇಶಿಸಿದ್ದ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ರಾಜ್ ಕಮಲ್ ಫಿಲಂಸ್ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಖುದ್ದು ಕಮಲ್ ಹಾಸನ್ ಬಂಡವಾಳ ಹಾಕುತ್ತಿದ್ದಾರೆ. ವಿಜಯ್ ಸೇತುಪತಿ, ಫಾಹದ್ ಫಾಸಿಲ್ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿದೆ. ಇನ್ನು ಮಲಯಾಳಂ ಇಂಡಸ್ಟ್ರಿಯ ಖ್ಯಾತ ನಟ ನರೈನ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ತಯಾರಾಗುತ್ತಿರುವ 'ವಿಕ್ರಂ' ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಈಗಾಗಲೇ ಮಾರಾಟವಾಗಿರುವ ಬಗ್ಗೆ ವರದಿಯಾಗಿದೆ. ಚಿತ್ರೀಕರಣ ಮುಗಿಯುವುದಕ್ಕೂ ಮುಂಚೆಯೇ ಹಿಂದಿ ಡಬ್ಬಿಂಗ್ ಹಕ್ಕು ಸೇಲ್ ಆಗಿದ್ದು, ಗೋಲ್ಡ್‌ಮೈನ್ಸ್ ಟೆಲಿಫಿಲಂ ಸಂಸ್ಥೆ 37 ಕೋಟಿ ನೀಡಿ ಹಕ್ಕು ಖರೀದಿ ಮಾಡಿದೆ ಎಂದು ಹೇಳಲಾಗಿದೆ.

ಮುಗಿಯದ ಇಂಡಿಯನ್ ವಿವಾದ

ಮುಗಿಯದ ಇಂಡಿಯನ್ ವಿವಾದ

ವಿಕ್ರಂ ಹೊರತುಪಡಿಸಿ ಶಂಕರ್ ಜೊತೆ ಇಂಡಿಯನ್-2 ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಚಿತ್ರದ ಅರ್ಧದಷ್ಟು ಚಿತ್ರೀಕರಣ ಮಾಡಿರುವ ಈ ಸಿನಿಮಾ ನಿರ್ಮಾಪಕ-ನಿರ್ದೇಶಕರ ನಡುವಿನ ವ್ಯವಹಾರಿಕ ವಿವಾದಿಂದ ತಾತ್ಕಾಲಿಕವಾಗಿ ನಿಂತಿದೆ. ಚಿತ್ರದ ನಿರ್ಮಾಪಕ ಲೈಕಾ ಪ್ರೊಡಕ್ಷನ್ ಸಂಸ್ಥೆ ನಿರ್ದೇಶಕ ಶಂಕರ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ಸಿನಿಮಾ ಮುಗಿಸಿಕೊಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಸಂಬಂಧ ಮದ್ರಾಸ್ ಮತ್ತು ಹೈದರಾಬಾದ್‌ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

More from Filmibeat

English summary
Superstar Kamal Hassan will Join's hands with successful director Vetrimaaran for his next: report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X