For Quick Alerts
  ALLOW NOTIFICATIONS  
  For Daily Alerts

  'ಕಾಂಚನಾ 3' ನಟಿ ಅಲೆಕ್ಸಾಂಡ್ರಾ ಮೃತ: ಶವ ಗೋವಾದಲ್ಲಿ ಪತ್ತೆ

  |

  'ಕಾಂಚನಾ 3' ಸಿನಿಮಾದಲ್ಲಿ ನಟಿಸಿದ್ದ ರಷ್ಯನ್ ನಟಿ, ಮಾಡೆಲ್ ಅಲೆಕ್ಸಾಂಡ್ರಾ ಮೃತಪಟ್ಟಿದ್ದಾರೆ. ಆಕೆಯ ಶವ ಗೋವಾದಲ್ಲಿನ ಅವರ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

  ಉತ್ತರ ಗೋವಾದ ಪಟ್ಟಣವೊಂದರಲ್ಲಿ ನಟಿ ಅಲೆಕ್ಸಾಂಡ್ರಾ ಬಾಡಿಗೆ ಪಡೆದು ವಾಸಿಸುತ್ತಿದ್ದರು. ಆಕೆಯ ನೆರೆಹೊರೆಯವರು ಹೇಳಿರುವಂತೆ ಕೆಲವು ದಿನಗಳ ಹಿಂದೆ ಆಕೆಯ ಬಾಯ್‌ಫ್ರೆಂಡ್ ಆಕೆಯ ಮನೆಯಿಂದ ಹೊರಗೆ ಬಂದ ಆ ನಂತರ ಆಕೆ ತೀವ್ರ ಖಿನ್ನತೆಯಲ್ಲಿದ್ದಳು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದಿದ್ದಾರೆ.

  ಅಲೆಕ್ಸಾಂಡ್ರಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದು ಈ ನಿಟ್ಟಿನಲ್ಲಿ ತನಿಖೆ ಜಾರಿಯಲ್ಲಿದೆ. ರಷ್ಯಾ ಮೂಲದವರಾದ ಅಲೆಕ್ಸಾಂಡ್ರಾ ಕುಟುಂಬದವರು ರಷ್ಯಾದಲ್ಲಿ ನೆಲೆಸಿದ್ದು ಅವರಿಗೆ ಮಾಹಿತಿ ನೀಡಲಾಗಿದೆ.

  ಅಲೆಕ್ಸಾಂಡ್ರಾ ರಾಘವ್ ಲಾರೆನ್ಸ್ ನಟಿಸಿದ್ದ 'ಕಾಂಚನಾ 3' ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಮಯದಲ್ಲಿ ಫೊಟೊಗ್ರಾಫರ್ ವಿರುದ್ಧ ಲೈಂಗಿಕ ಹಿಂಸೆ ದೂರು ಸಹ ನೀಡಿದ್ದರು. ಫೊಟೊಗ್ರಾಫರ್ ಒಬ್ಬ ತನ್ನ ಅಶ್ಲೀಲ ಚಿತ್ರಗಳನ್ನು ತೆಗೆದು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆಂದು ಈ ನಟಿ ದೂರು ನೀಡಿದ್ದರು. ಪೊಲೀಸರು ಫೊಟೊಗ್ರಾಫರ್ ಅನ್ನು ಬಂಧಿಸಿದ್ದರು ಸಹ.

  Kanchana 3 Actress Alexandra Djavi Died In Goa

  ಇದೀಗ ನಟಿಯ ಸಾವು ಹಲವು ಪ್ರಶ್ನೆಗಳನ್ನು ಎಬ್ಬಿಸಿದ್ದು ಅಲೆಕ್ಸಾಂಡ್ರಾ ಸಾವಿಗೆ ಆಕೆಯ ಬಾಯ್‌ಫ್ರೆಂಡ್ ಕಾರಣವಾ ಅಥವಾ ಬೇರೆ ಕಾರಣಗಳು ಏನಾದರೂ ಇವೆಯೇ ಎಂಬುದನ್ನು ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  English summary
  Actress, Model Alexandra Djavi died in Goa. She acted in Kanchana 3 movie with Raghava Lawrence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X