For Quick Alerts
  ALLOW NOTIFICATIONS  
  For Daily Alerts

  ಜಯಲಲಿತಾ 4ನೇ ವರ್ಷದ ಪುಣ್ಯ ತಿಥಿ: ರೆಬೆಲ್ ಸಿಎಂ ಸ್ಮರಿಸಿದ ಕಂಗನಾ

  |

  ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಇಹಲೋಕ ತ್ಯಜಿಸಿ ಇಂದಿಗೆ ನಾಲ್ಕು ವರ್ಷ ಕಳೆದಿದೆ. ನಾಲ್ಕನೇ ವರ್ಷದ ಪುಣ್ಯ ತಿಥಿ ಸಂದರ್ಭದಲ್ಲಿ ತಮಿಳುನಾಡಿನ ರೆಬೆಲ್ ಮುಖ್ಯಮಂತ್ರಿ ಬಾಲಿವುಡ್ ನಟಿ ಕಂಗನಾ ರಣಾವತ್ ನಮನ ಸಲ್ಲಿಸಿದ್ದಾರೆ.

  ಜಯಲಲಿತಾ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿರುವ ನಟಿ ಕಂಗನಾ, ಚಿತ್ರದ ಮೇಕಿಂಗ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಪವರ್‌ಫುಲ್‌ ಸಿಎಂಗೆ ಟ್ರಿಬ್ಯೂಟ್ ನೀಡಿದ್ದಾರೆ.

  ಜಯಲಲಿತಾ ಜನ್ಮ ವಾರ್ಷಿಕೋತ್ಸವ: ರಿಲೀಸ್ ಆಯ್ತು 'ತಲೈವಿ' ಹೊಸ ಲುಕ್ಜಯಲಲಿತಾ ಜನ್ಮ ವಾರ್ಷಿಕೋತ್ಸವ: ರಿಲೀಸ್ ಆಯ್ತು 'ತಲೈವಿ' ಹೊಸ ಲುಕ್

  ''ಜಯ ಅಮ್ಮನ ಪುಣ್ಯ ತಿಥಿಯಂದು ನಮ್ಮ ತಲೈವಿ ಚಿತ್ರತಂಡದಿಂದ ಕೆಲವು ಮೇಕಿಂಗ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಅದಕ್ಕಾಗಿ ನಮ್ಮ ತಂಡಕ್ಕೆ ಹಾಗೂ ವಿಶೇಷವಾಗಿ ಈ ಚಿತ್ರವನ್ನು ಬೇಗ ಮುಗಿಸಬೇಕು ಎಂಬ ಉದ್ದೇಶದಿಂದ ಸೂಪರ್ ಮ್ಯಾನ್ ಅಂತೆ ಕೆಲಸ ಮಾಡುತ್ತಿರುವ ವಿಜಯ್ ಸರ್‌ಗೆ ವಿಶೇಷ ಧನ್ಯವಾದಗಳು'' ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ, ತಲೈವಿ ಸಿನಿಮಾದ ಚಿತ್ರೀಕರಣ ಕೇವಲ ಇನ್ನೊಂದು ವಾರ ಮಾತ್ರ ಬಾಕಿ ಇದೆ. ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರವನ್ನು ಎಎಲ್ ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ.

  ಜಯಲಲಿತಾ ಕುರಿತ ಚಿತ್ರ ಅಮೆಜಾನ್, ನೆಟ್ ಫ್ಲಿಕ್ಸ್ ಎರಡಕ್ಕೂ ಸೇಲ್: ನಿರ್ಮಾಪಕರು ಸೇಫ್ಜಯಲಲಿತಾ ಕುರಿತ ಚಿತ್ರ ಅಮೆಜಾನ್, ನೆಟ್ ಫ್ಲಿಕ್ಸ್ ಎರಡಕ್ಕೂ ಸೇಲ್: ನಿರ್ಮಾಪಕರು ಸೇಫ್

  ಪ್ರಸ್ತುತ, ಕಂಗನಾ ರಣಾವತ್ ಅವರು ಹೈದರಾಬಾದ್‌ನಲ್ಲಿ ತಲೈವಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ.

  ಇನ್ನು ಅರವಿಂದ್ ಸ್ವಾಮಿ ಅವರು ಎಂಜಿಆರ್ ಪಾತ್ರದಲ್ಲಿ ಹಾಗೂ ಪ್ರಕಾಶ್ ರೈಅವರು ಕರುಣಾನಿಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಷ್ಣು ವರ್ಧನ ಇಂಧುರಿ ಮತ್ತು ಶೈಲೇಶ್ ಆರ್ ಸಿಂಗ್ ಸಿನಿಮಾ ನಿರ್ಮಿಸುತ್ತಿದ್ದಾರೆ.

  ಜೆ.ಜಯಲಲಿತಾ ಕುರಿತು

  ಮಂಡ್ಯದಲ್ಲೂ ನಡೆದೇ ಹೋಯ್ತು ಅಮಾನವೀಯ ಘಟನೆ | Filmibeat Kannada

  ತಮಿಳುನಾಡು ಕಂಡ ರೆಬೆಲ್ ನಾಯಕಿ ಜಯಲಲಿತಾ ಆರು ಬಾರಿ ಸಿಎಂ ಆಗಿದ್ದಾರೆ. 1991 ರಿಂದ 2016ರವರೆಗೂ 14 ವರ್ಷದ ಅವಧಿಯಲ್ಲಿ ತಮಿಳುನಾಡಿನ ಜನರ ಪಾಲಿಗೆ ಅಮ್ಮ ಆಗಿದ್ದರು. ಸಿನಿಮಾ ನಟಿಯೂ ಆಗಿದ್ದ ಜಯಲಲಿತಾ 2016ರ ಡಿಸೆಂಬರ್ 5 ರಂದು ಇಹಲೋಕ ತ್ಯಜಿಸಿದರು.

  English summary
  Bollywood actress Kangana ranaut pays tribute to the Late Jayalalithaa on Her 4th Death Anniversary by sharing some unseen stills.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X