ಅಳುವುದೇ ಇಲ್ಲ ಎಂದಿದ್ದ ಕಂಗನಾ, ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು

ನಟಿ ಕಂಗನಾ ರನೌತ್ ತಮ್ಮ ಬಿಡು-ಬೀಸು ಮಾತುಗಳಿಗೆ, ಫಿಲ್ಟರ್ ಇಲ್ಲದ ಹೇಳಿಕೆಗಳು, ಮೂದಲಿಕೆಗಳಿಗೆ ಖ್ಯಾತರು. ಆದರೆ ಚೆನ್ನೈನನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಕಂಗನಾರ ಭಾವುಕ ಮುಖದ ಪರಿಚಯ ಆಗಿದೆ.

ಕಂಗನಾ ಹುಟ್ಟುಹಬ್ಬವಾದ ಇಂದು (ಮಾರ್ಚ್ 23) ಚೆನ್ನೈನಲ್ಲಿ ಕಂಗನಾ ನಟನೆಯ 'ತಲೈವಿ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಕಂಗನಾ ವೇದಿಕೆ ಮೇಲೆ ಮಾತನಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು.

'ತಲೈವಿ' ಸಿನಿಮಾದ ನಿರ್ದೇಶಕ ವಿಜಯ್‌ಗೆ ಧನ್ಯವಾದ ಹೇಳುತ್ತಾ ಭಾವುಕರಾದ ನಟಿ ಕಂಗನಾ ವೇದಿಕೆ ಮೇಲೆ ಮಾತನಾಡುತ್ತಲೇ ದುಃಖ ತಡೆಯಲಾರದೆ ಕಣ್ಣೀರು ಹಾಕಿದರು. ಕಂಗನಾ ಅಳುತ್ತಾ ಭಾಷಣ ಮಾಡಿದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಸ್ವತಃ ಕಂಗನಾ ಸಹ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತಾವು ಭಾವುಕರಾದ ವಿಡಿಯೋ ಹಂಚಿಕೊಂಡಿರುವ ಕಂಗನಾ, 'ನನ್ನನ್ನು ನಾನು ಹುಲಿ ಎಂದು ಕರೆದುಕೊಳ್ಳುತ್ತೇನೆ. ಏಕೆಂದರೆ ನಾನು ಅಳುವುದಿಲ್ಲ. ನನ್ನನ್ನು ಅಳಿಸಲು ಯಾರಿಗೂ ಅವಕಾಶವೂ ಕೊಡುವುದಿಲ್ಲ. ಈ ಹಿಂದೆ ನಾನು ಯಾವಾಗ ಅತ್ತಿದ್ದೆ ಎಂಬುದು ಸಹ ನನಗೆ ನೆನಪಿಲ್ಲ. ಆದರೆ ಇಂದು ನಾನು ಅತ್ತೆ, ಬಹಳ ಅತ್ತೆ ಆದರೆ ಇದರಿಂದ ನನಗೆ ಸಂತೋಶವೇ ಆಯಿತು' ಎಂದಿದ್ದಾರೆ.

'ನನ್ನ ಜೀವನದಲ್ಲಿ ಇಂಥಹಾ ವ್ಯಕ್ತಿಯನ್ನು ಭೇಟಿಯಾಗಿಲ್ಲ'

'ನನ್ನ ಜೀವನದಲ್ಲಿ ಇಂಥಹಾ ವ್ಯಕ್ತಿಯನ್ನು ಭೇಟಿಯಾಗಿಲ್ಲ'

ಕಾರ್ಯಕ್ರಮದಲ್ಲಿ 'ತಲೈವಿ' ಸಿನಿಮಾದ ನಿರ್ದೇಶಕ ಎ.ಎಲ್.ವಿಜಯ್ ಬಗ್ಗೆ ಮಾತನಾಡುತ್ತಾ, 'ನಾನು ನನ್ನ ಪ್ರತಿಭೆ ಬಗ್ಗೆ ಕೀಳರಿಮೆಯಿಂದ ಇರದಂತೆ ಬದಲಿಗೆ ನನ್ನ ಪ್ರತಿಭೆ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ ನಿರ್ದೇಶಕ ವಿಜಯ್ ಮಾತ್ರ. ಈ ವರೆಗೆ ನನ್ನ ಜೀವನದಲ್ಲಿ ಆ ರೀತಿಯ ವ್ಯಕ್ತಿಯನ್ನು ನಾನು ಭೇಟಿಯಾಗಿಲ್ಲ' ಎಂದರು ಕಂಗನಾ.

ಸೃಜನಶೀಲ ಪಾಲುದಾರಿಕೆ ಬಗ್ಗೆ ನಾನು ಕಲಿತುಕೊಂಡೆ: ಕಂಗನಾ

ಸೃಜನಶೀಲ ಪಾಲುದಾರಿಕೆ ಬಗ್ಗೆ ನಾನು ಕಲಿತುಕೊಂಡೆ: ಕಂಗನಾ

'ಪುರುಷ ನಟರಿಗೆ ನೀಡಲಾಗುವ ಗೌರವವನ್ನು ನಟಿಯರಿಗೆ ನೀಡಲಾಗುವುದಿಲ್ಲ. ಆದರೆ ವಿಜಯ್ ಇಂದ ಹಾಗಲ್ಲ. ನಟ-ನಟಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು. ನಟರು-ನಿರ್ದೇಶಕರ ನಡುವೆ ಸೃಜನಶೀಲ ಪಾಲುದಾರಿಕೆಯಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಅವರಿಂದ ಕಲಿತುಕೊಂಡೆ' ಎಂದು ಕಣ್ಣೀರು ಒರೆಸಿಕೊಳ್ಳುತ್ತಾ ಭಾಷಣ ಮುಗಿಸಿದರು ಕಂಗನಾ.

ಈ ರೀತಿಯ ಅನುಭವ ಇದೇ ಮೊದಲು: ಕಂಗನಾ

ಈ ರೀತಿಯ ಅನುಭವ ಇದೇ ಮೊದಲು: ಕಂಗನಾ

ಸಾಮಾನ್ಯವಾಗಿ ನನ್ನನ್ನು ಸಿನಿಮಾದಿಂದ ಕಿತ್ತೊಗೆಯಲಾಗುತ್ತಿತ್ತು ಆದರೆ ಸಿನಿಮಾಕ್ಕೆ ನನ್ನನ್ನು ರೆಕೆಮೆಂಡ್ ಮಾಡಿ ಪಾತ್ರದಲ್ಲಿ ನಾನೇ ನಟಿಸಬೇಕು ಎಂದು ಒತ್ತಾಯ ಮಾಡಿದ್ದು ವಿಜಯ್. ಈ ರೀತಿಯ ಸಂದರ್ಭ ನನ್ನ ಜೀವನದಲ್ಲಿ ಬಹಳ ಅಪರೂಪ ಎಂದು ಕಂಗನಾ ಅವರು ಕೆಲವು ದಿನಗಳ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು.

Recommended Video

ಚಾಂಪಿಯನ್ ಸಿನಿಮಾದ ಹಾಡಿನಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ | Filmibeat Kannada
ಕಂಗನಾಗೆ ನಾಲ್ಕನೇ ರಾಷ್ಟ್ರಪ್ರಶಸ್ತಿ

ಕಂಗನಾಗೆ ನಾಲ್ಕನೇ ರಾಷ್ಟ್ರಪ್ರಶಸ್ತಿ

ಕಂಗನಾ ನಟಿಸಿರುವ ತಮಿಳು ಸಿನಿಮಾ 'ತಲೈವಿ'ಯ ಟ್ರೇಲರ್ ಇಂದು ಬಿಡುಗಡೆ ಆಗಿದೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಜೀವನ ಕುರಿತಾದ ಈ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಸಿದೆ. ನಿನ್ನೆಯಷ್ಟೆ ಕಂಗನಾಗೆ ನಾಲ್ಕನೇ ಬಾರಿ ನಟನೆಗೆ ರಾಷ್ಟ್ರ ಪ್ರಶಸ್ತಿ ಘೊಷಣೆ ಆಗಿದೆ. ಮಣಿಕರ್ಣಿಕಾ, ಪಂಗಾ ಸಿನಿಮಾಗಳ ನಟನೆಗಾಗಿ ಕಂಗನಾಗೆ ರಾಷ್ಟ್ರಪ್ರಶಸ್ತಿ ದೊರೆತಿದೆ.

More from Filmibeat

English summary
Actress Kangana Ranaut became emotional in Thalaivi trailer launch event today in Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X