ಭಾವನಾತ್ಮಕ ಟ್ವೀಟ್‌ನೊಂದಿಗೆ 'ತಲೈವಿ' ಮುಗಿಸಿದ ಕಂಗನಾ ರಣೌತ್
ಜಯಲಲಿತಾ ಜೀವನ ಆಧರಿಸಿದ ತಮಿಳು ಸಿನಿಮಾ 'ತಲೈವಿ' ನಲ್ಲಿ ಕಂಗನಾ ರಣೌತ್ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ನಿನ್ನೆಯಷ್ಟೆ (ಡಿಸೆಂಬರ್ 13) ಮುಗಿದಿದೆ.
ಚಿತ್ರೀಕರಣ ಮುಗಿದ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಗನಾ ರಣೌತ್, ಭಾವುಕವಾದ ಸಾಲುಗಳೊಂದಿಗೆ ತಲೈವಿ ಚಿತ್ರತಂಡಕ್ಕೆ ಗುಡ್ ಬಾಯ್ ಹೇಳಿದ್ದಾರೆ.
'ನಾನು ಸಂಪೂರ್ಣವಾಗಿ ತಲೈವಿಯಲ್ಲಿನ ಪಾತ್ರದಲ್ಲಿ ಲೀನಳಾಗಿಬಿಟ್ಟಿದ್ದೆ. ಆ ಪಾತ್ರವನ್ನು ವಿಪರೀತವಾಗಿ ಹಚ್ಚಿಕೊಂಡಿದ್ದೆ ಆದರೆ ಎಲ್ಲಾ ಒಳ್ಳೆಯ ಕ್ಷಣಗಳಿಗೂ ಅಂತ್ಯ ಇದ್ದೇ ಇರುತ್ತದೆ. ಈಗ ಗುಡ್ ಬೈ ಹೇಳುವ ಸಮಯ ಬಂದಾಗಿದೆ, ತಲೈವಿ ಸಿನಿಮಾದ ಚಿತ್ರೀಕರಣ ಮುಗಿದಿದೆ' ಎಂದಿದ್ದಾರೆ ಕಂಗನಾ.

'ಇಂಥಹಾ ಅದ್ಭುತವಾದ ಪಾತ್ರದಲ್ಲಿ ನಟಿಸುವುದು ಜೀವನಮಾನದಲ್ಲಿ ಒಮ್ಮೆ ಮಾತ್ರವೇ ಸಿಗುವ ಅವಕಾಶ. ಈ ಅವಕಾಶ ಕೊಟ್ಟ ನಿರ್ದೇಶಕ ಎಲ್‌ಎ ವಿಜಯ್, ಶೈಲೇಶ್ ಆರ್ ಸಿಂಗ್ ಇನ್ನೂ ಹಲವರಿಗೆ ಧನ್ಯವಾದ ಹೇಳಿದ್ದಾರೆ ನಟಿ ಕಂಗನಾ.
ತಲೈವಿ ಸಿನಿಮಾವು ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಜೀವನ ಆಧಿರಿಸಿದ್ದಾಗಿದೆ. ಸಿನಿಮಾದಲ್ಲಿ ಜಯಲಲಿತಾ ಪಾತ್ರವನ್ನು ಕಂಗನಾ ನಿರ್ವಹಿಸುತ್ತಿದ್ದಾರೆ. ಎಂಜಿಆರ್ ಪಾತ್ರವನ್ನು ಅರವಿಂದ ಸ್ವಾಮಿ, ಶಶಿಕಲಾ ಪಾತ್ರವನ್ನು ಪೂರ್ಣಾ, ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರೈ, ಶೋಬನ್ ಬಾಬು ಪಾತ್ರದಲ್ಲಿ ಜಿಶು ಸೋನ್‌ಗುಪ್ತಾ ನಟಿಸುತ್ತಿದ್ದಾರೆ.
ತಲೈವಿ ಸಿನಿಮಾವು ಕಂಗನಾ ರ ಎರಡನೇ ದಕ್ಷಿಣ ಭಾರತದ ಸಿನಿಮಾ ಆಗಿದೆ. ಈ ಮೊದಲು ಪ್ರಭಾಸ್ 'ಏಕ್ ನಿರಂಜನ್' ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ತಲೈವಿ ಬಳಿಕ ಕಂಗನಾ ರಣೌತ್, ಅಪಾರಿಜಿತ್ ಅಯೋಧ್ಯ, ಧಾಕಡ್, ತೇಜಸ್, ಇಮ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











