For Quick Alerts
  ALLOW NOTIFICATIONS  
  For Daily Alerts

  'ತಲೈವಿ' ಬಿಡುಗಡೆಗೆ ವಿಘ್ನ: ಥಿಯೇಟರ್ ಮಾಲೀಕರು ವಿರುದ್ಧ ಕಂಗನಾ ಅಸಮಾಧಾನ

  |

  ಬಹುನಿರೀಕ್ಷೆಯ ತಲೈವಿ ಸಿನಿಮಾ ಸೆಪ್ಟೆಂಬರ್ 10 ರಂದು ವರ್ಲ್ಡ್‌ವೈಡ್ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ಎಲ್ಲಾ ತಯಾರಿ ನಡೆದಿದ್ದು, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿದೆ. ತಲೈವಿ ಸಿನಿಮಾ ರಿಲೀಸ್ ಹಿನ್ನೆಲೆ ಚೆನ್ನೈಗೆ ಭೇಟಿ ನೀಡಿದ ಕಂಗನಾ ರಣಾವತ್, ಮರೀನಾ ಬೀಚ್‌ನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿದ ಪುಷ್ಪನಮನ ಸಲ್ಲಿಸಿದರು.

  ಜಯಲಲಿತಾ ಅವರ ಬಯೋಪಿಕ್ ಆಗಿರುವ ಕಾರಣ ತಮಿಳುನಾಡಿನಲ್ಲಿ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿರುವ ಈ ಸಮಯದಲ್ಲಿ ಕೆಲವು ಮಲ್ಟಿಪ್ಲಿಕ್ಸ್‌ ಥಿಯೇಟರ್‌ಗಳು ಚಿತ್ರವನ್ನು ರಿಲೀಸ್ ಮಾಡದಿರಲು ನಿರ್ಧರಿಸಿದೆ. ಇದು ಸಹಜವಾಗಿ ಚಿತ್ರತಂಡಕ್ಕೆ ತಲೆಬಿಸಿ ಮಾಡಿದೆ. ಈ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ನಟಿ ಕಂಗನಾ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಸಿನಿಮಾ ಬಿಡುಗಡೆಗೂ ಮುನ್ನ ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ನಟಿ ಕಂಗನಾ ರಣಾವತ್ಸಿನಿಮಾ ಬಿಡುಗಡೆಗೂ ಮುನ್ನ ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ನಟಿ ಕಂಗನಾ ರಣಾವತ್

  ಪ್ರಭಾವಿ ಮಲ್ಟಿಪ್ಲಿಕ್ಸ್‌ಗಳು ನಕಾರ

  ಪ್ರಭಾವಿ ಮಲ್ಟಿಪ್ಲಿಕ್ಸ್‌ಗಳು ನಕಾರ

  ಎಲ್‌ವಿಜಯ್ ನಿರ್ದೇಶಿಸಿ ಹಾಗೂ ವಿಷ್ಣು ಇಂದುರಿ ನಿರ್ಮಾಣ ಮಾಡಿರುವ ತಲೈವಿ ಸಿನಿಮಾದಲ್ಲಿ ಕಂಗನಾ ರಣಾವತ್, ಜಯಲಲಿತಾ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಹಾಡುಗಳು, ಟೀಸರ್, ಮೇಕಿಂಗ್ ಎಲ್ಲದರಿಂದಲೂ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಸೆಪ್ಟೆಂಬರ್ 10ಕ್ಕೆ ರಿಲೀಸ್ ಆಗುವುದಾಗಿ ಪ್ರಕಟಿಸಿದೆ. ಆದ್ರೀಗ, ರಾಷ್ಟ್ರ ಮಟ್ಟದ ಮೂರು ಪ್ರಭಾವಿ ಮಲ್ಟಿಪ್ಲಿಕ್ಸ್‌ ಸಂಸ್ಥೆಗಳು ಚಿತ್ರವನ್ನು ಬಿಡುಗಡೆ ಮಾಡಲ್ಲ ಎಂದು ಹೇಳುತ್ತಿವೆ. ಒಟಿಟಿ ಪ್ರೀಮಿಯರ್ ಹಾಗೂ ಥಿಯೇಟರ್ ರಿಲೀಸ್ ನಡುವಿನ ಅಂತರಕ್ಕೆ ಸಂಬಂಧಪಟ್ಟಂತೆ ಮಲ್ಟಿಪ್ಲಿಕ್ಸ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕಂಗನಾ ಇನ್ಸ್ಟಾಗ್ರಾಂನಲ್ಲಿ ಟೀಕಿಸಿ ಪೋಸ್ಟ್ ಹಾಕಿದ್ದಾರೆ.

  'ಬಿಳಿಕೋತಿಗಳ ಗುಲಾಮರಂತೆ ಭಾಸವಾಗುತ್ತಿದೆ': ಇನ್ಸ್ಟಾಗ್ರಾಂ ವಿರುದ್ದ ಕಂಗನಾ ಗರಂ'ಬಿಳಿಕೋತಿಗಳ ಗುಲಾಮರಂತೆ ಭಾಸವಾಗುತ್ತಿದೆ': ಇನ್ಸ್ಟಾಗ್ರಾಂ ವಿರುದ್ದ ಕಂಗನಾ ಗರಂ

  ಒಬ್ಬರಿಗೊಬ್ಬರು ಸಹಾಯ ಮಾಡಬೇಕಿರುವ ಸಮಯ

  ಒಬ್ಬರಿಗೊಬ್ಬರು ಸಹಾಯ ಮಾಡಬೇಕಿರುವ ಸಮಯ

  ''ಈಗಿನ ಪರಿಸ್ಥಿತಿಯಲ್ಲಿ ಯಾವ ಸಿನಿಮಾಗಳು ಚಿತ್ರಮಂದಿರವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಆದರೆ ಸಿನಿಮಾ ಮೇಲಿನ ಪ್ರೀತಿಗಾಗಿ ನಮ್ಮ ನಿರ್ಮಾಪಕರಾದ ವಿಷ್ಣುಇಂದುರಿ ಮತ್ತು ಶೈಲೇಶ್ವರ್ ಸಿಂಗ್ ತಮ್ಮ ಲಾಭದಲ್ಲಿ ರಾಜಿ ಮಾಡಿಕೊಂಡು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳಬೇಕಿದೆ. ಅದನ್ನು ಬಿಟ್ಟು ಈ ಕಿರುಕುಳ, ತೊಂದರೆ ಮಾಡುವುದಲ್ಲ. ಚಿತ್ರಕ್ಕಾಗಿ ನಾನು ಖರ್ಚು ಮಾಡಿದ ಹಣವನ್ನು ಹಿಂಪಡೆಯುವುದು ನಮ್ಮ ಮೂಲಭೂತ ಹಕ್ಕು. ಇನ್ನು ಹಿಂದಿ ಸಿನಿಮಾಗೆ ಎರಡು ವಾರಗಳ ಅಂತರ ಇದೆ, ಸೌತ್ ಸಿನಿಮಾಗಳಿಗೆ ನಾಲ್ಕು ವಾರ ಅಂತರ ಇದೆ. ಆದರೂ ಮಲ್ಟಿಪ್ಲಿಕ್ಸ್‌ಗಳು ಗುಂಪು ಸೇರಿ ನಮ್ಮ ಬಿಡುಗಡೆಯನ್ನು ನಿಲ್ಲಿಸುತ್ತಿವೆ. ಮಹಾರಾಷ್ಟ್ರ ಅಂತಹ ಪ್ರಮುಖ ನಗರದಲ್ಲಿ ಚಿತ್ರಮಂದಿರ ಮುಚ್ಚಿರುವ ಈ ಸಮಯದಲ್ಲಿ ಇದು ಕ್ರೂರ ಮತ್ತು ಅನ್ಯಾಯವಾಗಿದೆ. ಚಿತ್ರಮಂದಿರಗಳನ್ನು ಉಳಿಸಲು ಪರಸ್ಪರ ಸಹಾಯ ಮಾಡೋಣ'' ಎಂದು ಕಂಗನಾ ಪೋಸ್ಟ್ ಹಾಕಿದ್ದಾರೆ.

  'ತಲೈವಿ' ಸೆನ್ಸಾರ್ ಪಾಸ್: ಈ ಸಲ ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ!'ತಲೈವಿ' ಸೆನ್ಸಾರ್ ಪಾಸ್: ಈ ಸಲ ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ!

  55 ಕೋಟಿಗೆ ತಲೈವಿ ಮಾರಾಟ

  55 ಕೋಟಿಗೆ ತಲೈವಿ ಮಾರಾಟ

  ಸದ್ಯದ ವರದಿಗಳ ಪ್ರಕಾರ ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಯಲ್ಲೇ ರಿಲೀಸ್ ಮಾಡುವಂತೆ ತಲೈವಿ ಚಿತ್ರಕ್ಕೆ ಆಫರ್ ಮಾಡಲಾಗಿತ್ತು. ಆದರೆ, ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದ ಚಿತ್ರತಂಡ ಥಿಯೇಟರ್‌ನಲ್ಲಿ ರಿಲೀಸ್ ಮಾಡುತ್ತಿದೆ. ಜೊತೆಗೆ ಒಟಿಟಿಗೂ ಸಿನಿಮಾ ಮಾರಾಟ ಮಾಡಿದೆ. ಥಿಯೇಟರ್‌ನಲ್ಲಿ ಬಂದ ಕೆಲವು ವಾರಗಳ ಬಳಿಕ ಒಟಿಟಿಯಲ್ಲಿ ಪ್ರೀಮಿಯರ್ ಮಾಡುವಂತೆ ಒಪ್ಪಂದ ಮಾಡಿಕೊಂಡಿದೆ. ಬಾಲಿವುಡ್ ಲೈಫ್ ವೆಬ್‌ಸೈಟ್ ವರದಿ ಮಾಡಿರುವಂತೆ ಅಮೇಜಾನ್ ಮತ್ತು ನೆಟ್‌ಪ್ಲಿಕ್ಸ್ ಎರಡೂ ಒಟಿಟಿಗಳು ತಲೈವಿ ಸಿನಿಮಾ ಖರೀದಿಸಿದ್ದು 55 ಕೋಟಿ ನೀಡಿದೆಯಂತೆ.

  ನಾವು ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ

  ನಾವು ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ

  ಮಲ್ಟಿಪ್ಲಿಕ್ಸ್ ಮಾಲೀಕರ ಜೊತೆಗಿನ ಮನಸ್ತಾಪದ ಬಗ್ಗೆ ತಲೈವಿ ನಿರ್ಮಾಪಕಿ ವಿಷ್ಣುಇಂದುರಿ ಇ-ಟೈಮ್ಸ್‌ಗೆ ಪ್ರತಿಕ್ರಿಯಿಸಿದ್ದು, ''ಇದು ಸಂಭವಿಸುತ್ತದೆ. ನಾವು ಇನ್ನೂ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಮೊದಲು ನಾವು ನಮ್ಮ ಬಂಡವಾಳವನ್ನು ವಾಪಸ್ ಗಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಚಿತ್ರಮಂದಿರಗಳು ಸಂಕಷ್ಟದಲ್ಲಿದ್ದರೂ ನಾವು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ. ಇಂತಹ ಸಮಯದಲ್ಲಿ ಥಿಯೇಟರ್ ಮಾಲೀಕರು ನಮ್ಮನ್ನು ಬೆಂಬಲಿಸಬೇಕು.'' ಎಂದಿದ್ದಾರೆ.

  English summary
  Bollywood Actress Kangana Ranaut Upset over Multiplex Theatres owners who refuse to release thalaivi movie.
  Saturday, September 4, 2021, 16:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X