Kanguva Box Office Day 4 ; ಪ್ರಜ್ವಲಿಸದ 'ಸೂರ್ಯ', 'ಕಂಗುವ' ಖೇಲ್ ಖತಂ ಆಯ್ತಾ ?

ಸೂರ್ಯ ದೊಡ್ಡದಾದ ಗೆಲುವನ್ನು ಕಂಡು ಹತ್ ಹತ್ರ ಒಂದು ದಶಕವಾಗುತ್ತ ಬಂದಿದೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಬದುಕಿನ ಹಾದಿಯನ್ನು ಆಧರಿಸಿ ರೂಪಗೊಂಡ ಸೂರರೈ ಪೊಟ್ರು ಚಿತ್ರ ಹೊರತು ಪಡಿಸಿದರೆ 24, ತಾನಾ ಸೇಂದ ಕೂಟ್ಟಂ, ಎನ್.ಜಿ.ಕೆ. ಕಾಪ್ಪನ್ ಸೇರಿದಂತೆ ಸೂರ್ಯ ಅವರ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿವೆ. ಈ ಕಾರಣಕ್ಕೆ ಸೂರ್ಯ ಪಾಲಿಗೆ ಕಂಗುವ ಮಹತ್ವದ್ದಾಗಿತ್ತು. ಚಿತ್ರ ಸೂರ್ಯ ಪಾಲಿಗೆ ಗೆಲ್ಲಲೇಬೇಕಿತ್ತು.

ಆದರೆ.. ಅಂದುಕೊಂಡಿದ್ದು ಒಂದು. ಆಗಿದ್ದು ಮತ್ತೊಂದು. ಬಿಡುಗಡೆಯಾದ ದಿನದಿಂದ ತೆವಳುತ್ತಾ ಸಾಗುತ್ತಿರುವ ಕಂಗುವ ಗಳಿಕೆ ಸದ್ಯ ಭಾರತದಲ್ಲಿ ₹50 ಕೋಟಿಯ ಗಡಿಯನ್ನು ದಾಟಿದೆ. ಹೌದು, ಮೊದಲ ದಿನ ಭಾರತದಲ್ಲಿ ₹24 ಕೋಟಿಯನ್ನು ಗಳಿಸಿದ್ದ ಕಂಗುವ ಎರಡನೇ ದಿನ ₹9.5 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಚಿತ್ರದ ಗಳಿಕೆಯಲ್ಲಿ ಎರಡನೇ ದಿನದಂದೇ ಶೇಕಡಾ 61 % ಕುಸಿತ ಕಂಡಿತ್ತು. ಇನ್ನೂ ಮೂರನೇ ದಿನ ₹9.85 ಕೋಟಿಯನ್ನು ಗಳಿಸಿದ ಚಿತ್ರ ನಿನ್ನೆ ಅಂದರೆ ಭಾನುವಾರ ₹10.50 ಕೋಟಿಯನ್ನು ಗಳಿಸಿದೆ. ಈ ಮೂಲಕ ಚಿತ್ರದ ಗಳಿಕೆ ಈಗ ₹53.85 ಕೋಟಿಗೆ ತಲುಪಿದೆ. ನಿನ್ನೆ ಚಿತ್ರದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂದಿದ್ದು ವಿಶೇಷ.

Kanguva Box Office Collection Day 4 Suriya s Tamil Movie Crosses 50 Crore Milestone

ಹೀಗೆ ನಾಲ್ಕು ದಿನದಲ್ಲಿ ₹53.85 ಕೋಟಿಯನ್ನು ಗಳಿಸಿದ ಕಂಗುವಗೆ ಇಂದು ನಿಜವಾದ ಅಗ್ನಿ ಪರೀಕ್ಷೆ. ಯಾಕೆಂದರೆ ಚಿತ್ರಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ. ಈ ಕಾರಣಕ್ಕೆ ಚಿತ್ರದ ಗಳಿಕೆ ಕುಸಿದಿದೆ. ಇನ್ನೂ ಅನೇಕ ಕಡೆ ಕಂಗುವ ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ. ಹೀಗಾಗಿ ಇಂದು ಸೋಮವಾರದ ಚಿತ್ರದ ಗಳಿಕೆಯ ಆಧಾರದ ಮೇಲೆ ಅಳಿದು ಉಳಿದ ಸ್ಕ್ರೀನ್‌ಗಳಲ್ಲಿ ಕಂಗುವ ಮುಂದುವರೆಯುತ್ತಾ, ಇಲ್ಲವಾ ಎನ್ನುವುದನ್ನು ನಿರ್ಧಾರ ಮಾಡಲಾಗುತ್ತೆ. ಇಂದಿನ ಈ ಪರೀಕ್ಷೆಯಲ್ಲಿ ಕಂಗುವ ಶೇಕಡಾ 50 ಅಂಕಗಳೊಂದಿಗೆ ಪಾಸಾಗದೇ ಇದ್ದರೆ ಈ ಶುಕ್ರವಾರದೊಳಗೆ ಕಂಗುವ ಖೇಲ್ ಬಹುತೇಕ ಖತಂ ಆದಂತೆ.

ಇನ್ನೂ ಕಂಗುವ ಕೇವಲ ಭಾರತದ ಚಿತ್ರಪ್ರೇಮಿಗಳನ್ನಷ್ಟೇ ನಿರಾಸೆ ಮಾಡಿಲ್ಲ. ನಾರ್ಥ್ ಅಮೆರಿಕಾದ ಪ್ರೇಕ್ಷಕರನ್ನು ಕೂಡ ನಿರಾಸೆ ಮಾಡಿದೆ. ಹೌದು, ಅಸಲಿಗೆ ಕಳೆದ ಕೆಲ ವರ್ಷಗಳಿಂದ ಹಿಂದಿ ಹೊರತು ಪಡಿಸಿದರೆ ತಮಿಳು ಚಿತ್ರರಂಗಕ್ಕೆ ನಾರ್ತ್ ಅಮೆರಿಕಾದಲ್ಲಿ ಮಾರುಕಟ್ಟೆ ನಿರ್ಮಾಣವಾಗಿದೆ. ತಮಿಳು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ಆದರೆ.. ಸಿಕ್ಕ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಕಂಗುವ ವಿಫಲವಾಗಿದೆ. ಕೇವಲ ₹4.41 ಕೋಟಿಯನ್ನು ಗಳಿಸುವ ಮೂಲಕ ನಾರ್ತ್ ಅಮೆರಿಕಾದಲ್ಲಿ ಕೂಡ ಕಂಗುವ ನೆಲಕಚ್ಚಿದೆ.

ಅಂದ್ಹಾಗೇ ಕಂಗುವ ಚಿತ್ರಕ್ಕೆ ನೂರು, ಇನ್ನೂರು ಅಲ್ಲ ಬದಲಿಗೆ ಮುನ್ನೂರೈವತ್ತು ಕೋಟಿಯನ್ನು ಸುರಿಯಲಾಗಿದೆ. ಇಷ್ಟೊಂದು ಹಣ ಮರಳಿ ಬರುತ್ತಾ ಅನ್ನುವ ಪ್ರಶ್ನೆ ಈಗ ಕಾಲಿವುಡ್‌ ಪಂಡಿತರನ್ನು ಕಾಡುತ್ತಿದೆ. ಇನ್ನೂ ಕಂಗುವ ಎರಡು ಭಾಗಗಳಲ್ಲಿ ತೆರೆಗೆ ಬರಬೇಕಿದ್ದ ಸಿನಿಮಾ. ಆದರೆ ಈಗ ಮೊದಲನೇ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಕಥೆ ಏನಾಗಲಿದೆ ಎನ್ನುವ ಕುತೂಹಲ ಕೂಡ ಅನೇಕರಲ್ಲಿದೆ. ಕಂಗುವ 2 ನಿಜಕ್ಕೂ ಬರುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.

ಇನ್ನುಳಿದಂತೆ ಕಂಗುವ ಚಿತ್ರಕ್ಕೆ ವ್ಯಕ್ತವಾದ ಟೀಕೆ ಟಿಪ್ಪಣಿಗಳಿಗೆ ಸೂರ್ಯ ಪತ್ನಿ ಜ್ಯೋತಿಕಾ ನಿನ್ನೆ ಉತ್ತರವನ್ನು ನೀಡಿದ್ದರು. ಕಂಗುವ ಚಿತ್ರದಲ್ಲಿ ಒಳ್ಳೆಯ ಅಂಶ ಯಾವುದು ಇಲ್ಲವೇ ಇಲ್ಲವಾ ಎಂದು ಪ್ರಶ್ನೆ ಕೇಳಿದ್ದರು. ನೆಗೆಟಿವ್ ರಿವ್ಯೂಗಳ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಒಟ್ನಲ್ಲಿ ಸದ್ಯಕ್ಕೆ ಕಂಗುವ ಬಾಕ್ಸಾಫೀಸ್‌ನಲ್ಲಿ 50 ಕೋಟಿಯ ಗಡಿಯನ್ನು ದಾಟಿದೆ. ಈ ವಾರಾಂತ್ಯದವರೆಗೆ ಕಂಗುವ ನೂರು ಕೋಟಿಯ ಗಡಿಯನ್ನು ತಲುಪುತ್ತಾ ಅಥವಾ 75 ಕೋಟಿಯ ಹತ್ ಹತ್ರ ಬಂದು ತನ್ನ ಆಟ ನಿಲ್ಸುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: suriya box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X