Kanguva Box Office Day 5 ; ಬೆಂಗಳೂರಿನ ಈ ಚಿತ್ರಮಂದಿರದಲ್ಲಿ 'ಕಂಗುವ'ಗೆ ಫುಲ್ ಡಿಮ್ಯಾಂಡ್, ಸೋಮವಾರದ ಕಥೆ ಏನಾಯ್ತು..?

ಕಂಗುವ ಸೂರ್ಯ ಹಣೆಬರಹ ಬದಲಿಸುತ್ತೆ ಎನ್ನುವ ನಂಬಿಕೆ ಕಾಲಿವುಡ್‌ಗೆ ಇತ್ತು. ಆದರೆ, ದುರಾದೃಷ್ಟ... ಕಂಗುವ ಸೂರ್ಯ ವೃತ್ತಿ ಬದುಕಿನಲ್ಲಿನ ತೀರಾ ಕಳಪೆ ಚಿತ್ರ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಟ್ರೋಲಿಗರಿಗೆ ಆಹಾರವೂ ಆಗಿದೆ.

ಆದರೂ ಕೂಡ ಕಂಗುವ ಕುರಿತು ಇವತ್ತು ಒಂದು ವರ್ಗ ಉತ್ತಮವಾದ ಮಾತುಗಳನ್ನಾಡುತ್ತಿದೆ. ಸೂರ್ಯ ಅವರ ಶ್ರದ್ಧೆ ಮತ್ತು ಶ್ರಮಕ್ಕಾದರೂ ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನೊಮ್ಮೆ ನೋಡಿ ಎನ್ನುತ್ತಿದೆ. ಸೂರ್ಯ ಅವರನ್ನು ಸೋಲಿಸಲೆಂದೇ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ವಾದವನ್ನೂ ಈ ವರ್ಗ ಮಾಡುತ್ತಿದೆ. ಖುದ್ದು ಸೂರ್ಯ ಪತ್ನಿ ಜ್ಯೋತಿಕಾ ಕೂಡ ಈ ಮಾತನ್ನು ಹೇಳಿದ್ದಾರೆ. ಜ್ಯೋತಿಕಾ ಮಾತನಾಡಿರುವ ಈ ಮಾತುಗಳಲ್ಲಿ ಸತ್ಯಾಸತ್ಯತೆ ಎಷ್ಟಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯಕ್ಕೆ ಕಂಗುವಗೆ ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಮುಖಭಂಗವಾಗಿದೆ.

Kanguva fails the Monday test at the box office but day 6 tickets are selling fast in a Bengaluru t

ಹೌದು, ಪ್ರೇಕ್ಷಕರ ಅಸಹನೆ, ಅಸಮಾಧಾನ, ಆಕ್ರೋಶದ ಅಲೆಯ ನಡುವೆ ಕಂಗುವ ತೆವಳುತ್ತಾ ನಾಲ್ಕು ದಿನದಲ್ಲಿ ₹50 ಕೋಟಿಯ ಗಡಿಯನ್ನು ತಲುಪಿತ್ತು. ಇನ್ನೂ.. ಶನಿವಾರದ ಗಳಿಕೆಗಿಂತ ಭಾನುವಾರದ ಗಳಿಕೆಯಲ್ಲಿ ತುಸು ಚೇತರಿಕೆ ಕಂಡು ಬಂದ ಹಿನ್ನೆಲೆ ಕಂಗುವ ನೆಗೆಟಿವ್ ರಿವ್ಯೂಗಳಿಗೆ ಸೆಡ್ಡು ಹೊಡೆದು ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಬಹುದು ಎನ್ನುವ ಆಸೆ ಚಿಗುರೊಡೆದಿತ್ತು. ಸೋಮವಾರದಿಂದ ಕಂಗುವ ಪ್ರೇಕ್ಷಕರನ್ನು ತನ್ನತ್ತ ಸೆಳೆಯಬಹುದೆಂದು ಅಂದಾಜಿಸಲಾಗಿತ್ತು.ಆದರೆ, ಸೋಮವಾರ ಕೂಡ ಕಂಗುವಗೆ ನಿರಾಸೆಯಾಗಿದೆ. ಭಾರತದಲ್ಲಿ ಐದನೇ ದಿನ ಅಂದರೆ ನಿನ್ನೆ ಕಂಗುವ ಕೇವಲ ₹3,15 ಕೋಟಿಯನ್ನಷ್ಟೇ ಗಳಿಸಿದೆ. ಈ ಮೂಲಕ ಕಾಲಿವುಡ್‌ಗೆ ಆಘಾತವನ್ನು ನೀಡಿದೆ ಕಂಗುವ.

ಇನ್ನೂ ಇಂದು ಕೂಡ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಯಾವ ಲಕ್ಷಣ ಕಂಡು ಬರುತ್ತಿಲ್ಲ. ಯಾಕೆಂದರೆ ಬುಕ್ ಮೈ ಶೋದಲ್ಲಿ ನಿರಸ ಪ್ರತಿಕ್ರಿಯೆ ಇದೆ. ಚೆನ್ನೈನಲ್ಲಿ ಬಹುತೇಕ ಚಿತ್ರಮಂದಿರಗಳು ಖಾಲಿ ಇವೆ. ಆದರೆ, ವಿಶೇಷ ಅಂದರೆ ಬೆಂಗಳೂರಿನಲ್ಲಿ ಕಂಗುವ ಚಿತ್ರ ಹೌಸ್‌ಫುಲ್ ಪ್ರದರ್ಶನವನ್ನು ಇಂದು ಕಾಣ್ತಿದೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಚಿತ್ರಮಂದಿರದಲ್ಲಿನ ಐದು ಪ್ರದರ್ಶನಗಳ ಟಿಕೆಟ್‌ಗಳು ಬಹುತೇಕ ಸೋಲ್ಡ್ ಔಟ್ ಆಗಿವೆ. ಅಚ್ಚರಿ ಎನಿಸಿದರೂ ಇದು ನಿಜಾ.

Kanguva fails the Monday test at the box office but day 6 tickets are selling fast in a Bengaluru t

ಅಂದ್ಹಾಗೇ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ ₹24 ಕೋಟಿಯನ್ನು ಗಳಿಸಿದ್ದ ಕಂಗುವ ಎರಡನೇ ದಿನ ₹9.5 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಚಿತ್ರದ ಗಳಿಕೆಯಲ್ಲಿ ಎರಡನೇ ದಿನದಂದೇ ಶೇಕಡಾ 61 % ಕುಸಿತ ಕಂಡಿತ್ತು. ಇನ್ನೂ ಮೂರನೇ ದಿನ ₹9.85 ಕೋಟಿಯನ್ನು ಗಳಿಸಿದ ಚಿತ್ರ ಭಾನುವಾರ ₹10.50 ಕೋಟಿಯನ್ನು ಗಳಿಸಿತ್ತು. ನಿನ್ನೆ ಚಿತ್ರದ ಗಳಿಕೆ ₹3,15 ಕೋಟಿಯಾಗಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ ಈಗ ₹56.75 ಕೋಟಿ ಆಗಿದೆ.

ಇನ್ನೂ ಕಂಗುವ ಚಿತ್ರಕ್ಕೆ ನೂರು, ಇನ್ನೂರು ಅಲ್ಲ ಬದಲಿಗೆ ಮುನ್ನೂರೈವತ್ತು ಕೋಟಿಯನ್ನು ಸುರಿಯಲಾಗಿದೆ. ಇಷ್ಟೊಂದು ಹಣ ಮರಳಿ ಬರುತ್ತಾ ಅನ್ನುವ ಪ್ರಶ್ನೆ ಈಗ ಕಾಲಿವುಡ್‌ ಪಂಡಿತರನ್ನು ಕಾಡುತ್ತಿದೆ. ಇನ್ನೂ ಕಂಗುವ ಎರಡು ಭಾಗಗಳಲ್ಲಿ ತೆರೆಗೆ ಬರಬೇಕಿದ್ದ ಸಿನಿಮಾ. ಆದರೆ ಈಗ ಮೊದಲನೇ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಕಥೆ ಏನಾಗಲಿದೆ ಎನ್ನುವ ಕುತೂಹಲ ಕೂಡ ಅನೇಕರಲ್ಲಿದೆ. ಕಂಗುವ 2 ನಿಜಕ್ಕೂ ಬರುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ಒಟ್ನಲ್ಲಿ ಸದ್ಯಕ್ಕೆ ಕಂಗುವ ಬಾಕ್ಸಾಫೀಸ್‌ನಲ್ಲಿ ಈ ಐದು ದಿನದಲ್ಲಿ ₹56.75 ಕೋಟಿಯನ್ನು ದೋಚಿದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ಕಂಗುವ ಬಾಕ್ಸಾಫೀಸ್‌ನಲ್ಲಿ ಎಷ್ಟು ಹಣ ಗಳಿಸುತ್ತೆ ಅನ್ನುವುದು ಸದ್ಯದ ಕುತೂಹಲ.

More from Filmibeat

Read more about: suriya box office kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X