twitter
    For Quick Alerts
    ALLOW NOTIFICATIONS  
    For Daily Alerts

    "ನನಗೆ ನಿಮ್ಮ ಹಣ ಬೇಡ..." 'ಜೈ ಭೀಮ್' ಚಿತ್ರತಂಡಕ್ಕೆ ಹಣ ಹಿಂದಿರುಗಿಸಿದ ಸಂಭಾಷಣೆಕಾರ

    |

    ಭಾರತೀಯ ಪ್ರೇಕ್ಷಕವರ್ಗ ಇತ್ತೀಚಿನ ದಿನಗಳಲ್ಲಿ ಏಕ ಮತದಿಂದ ಮತ್ತು ಮುಕ್ತಕಂಠದಿಂದ ಪ್ರಶಂಸಿದ್ದ ಚಿತ್ರ 'ಜೈ ಭೀಮ್'. ಸಾಮಾನ್ಯ ಪ್ರೇಕ್ಷಕರಿಂದ ಮೊದಲುಗೊಂಡು ಅಸಮಾನ್ಯ ವಿಮರ್ಶಕರವರಿಗೆ ಎಲ್ಲರನ್ನೂ ಮೆಚ್ಚಿಸಿದ ಚಿತ್ರ 'ಜೈ ಭೀಮ್'. ಚಿತ್ರದ ಸಾಮಾಜಿಕ ಕಳಕಳಿಗೆ ವ್ಯಾಪಕವಾದ ಪ್ರಶಂಸೆ ಕೂಡ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ. ಹೀಗೆ ಚಿತ್ರ ಒಂದೆಡೆ ವ್ಯಾಪಕವಾಗಿ ಜನಸಾಮಾನ್ಯರಿಂದ, ವಿಮರ್ಶಕರಿಂದ, ಸಾಮಾಜಿಕ ಕಾರ್ಯಕರ್ತರಿಂದ ಮೆಚ್ಚುಗೆ ಪಡೆಯುತ್ತಿರುವಾಗಲೇ ಚಿತ್ರ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡಿನ ಹಿಂದುಳಿದ ವರ್ಗಕ್ಕೆ ಸೇರಿದ 'ವನ್ನಿಯಾರ್' ಸಮಾಜವನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಿದ್ದಾರೆ ಎಂಬ ಆರೋಪವನ್ನು ಕೂಡ ವನ್ನಿಯಾರ್ ಸಮಾಜದವರು ಮಾಡಿದ್ದಾರೆ ಜೊತೆಗೆ ವಿವಾದಾತ್ಮಕವಾದ ಹೇಳಿಕೆಗಳನ್ನು ನೀಡುತ್ತಾ ಬಂದಿರುವುದು ಅಲ್ಲದೆ ಈ ವಿಚಾರವಾಗಿ ನಿರ್ಮಾಪಕ ಮತ್ತು ನಟ ಸೂರ್ಯ ವಿರುದ್ಧ ಕಾನೂನಿನ ಹೋರಾಟಕ್ಕೆ ಮುಂದಾಗಿದ್ದಾರೆ.

    ಪಟಾಲ್ ಮಕ್ಕಳ್ ಕಚ್ಚಿ (ಪಿಎಂಕೆ) ನಾಯಕ ರಾಮದಾಸ್ ವನ್ನಿಯಾರ್ ಸಮುದಾಯವನ್ನು 'ಜೈ ಭೀಮ್' ಚಿತ್ರ ಅತ್ಯಂತ ಕೆಟ್ಟ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದೆ ಅಂತ ಆರೋಪಿಸಿದ್ದಾರೆ. ಇದು ಅಲ್ಲದೆ ವನ್ನಿಯಾರ್ ಸಮುದಾಯ ಕೂಡ ಇದರ ವಿರುದ್ಧ ಸಿಡಿದೆದ್ದಿದೆ. ಈಡೋರ್,ಸೇಲಂ,ಕೃಷ್ಣಗಿರಿ ಪ್ರಾಂತದಲ್ಲಿ ಅತ್ಯಂತ ಬಲಾಢ್ಯವಾದ ಈ 'ವನ್ನಿಯಾರ್' ಸಮಾಜ ಈಗಾಗಲೇ ಸೂರ್ಯ ಚಿತ್ರಗಳನ್ನು ಚಿತ್ರಮಂದಿರಗಳಿಂದ ಬಹಿಷ್ಕರಿಸಿದೆ ಜೊತೆಗೆ ಸೂರ್ಯ ಮೇಲೆ ಹಲ್ಲೆ ಮಾಡುವವರಿಗೆ ಒಂದು ಲಕ್ಷ ಬಹುಮಾನ ಕೂಡ ಘೋಷಿಸಿದೆ. ಈ ನಡುವೆ ಸೂರ್ಯ ಅವರ ಬೆಂಬಲಕ್ಕೆ ದಲಿತ ಸಂಘಟನೆಗಳು ಹಾಗೂ ಇತರ ಸಾಮಾಜಿಕ ಸಂಘಟನೆಗಳು ನಿಂತಿದೆ. ಅಲ್ಲದೆ ತಮಿಳುನಾಡು ಸರ್ಕಾರ ಸೂರ್ಯ ಕುಟುಂಬಕ್ಕೆ ಹೆಚ್ಚಿನ ಭದ್ರತೆಯನ್ನು ಸಹ ಒದಗಿಸಿದೆ.

    ಇನ್ನು ಚಿತ್ರದ ನಿರ್ದೇಶಕ ಜ್ಞಾನವೇಲ್ "ಯಾವುದೇ ಸಮಾಜವನ್ನು ಅಗೌರಿಸುವ ಉದ್ದೇಶವನ್ನು ಚಿತ್ರ ಹೊಂದಿರಲಿಲ್ಲ" ಅಂತ ಸ್ಪಷ್ಟಪಡಿಸಿದ್ದಾರೆ. ವನ್ನಿಯಾರ್ ಸಮುದಾಯದ ಪಂಜಿನ ಕಳಸ ವಿವಾದಕ್ಕೆ ಕಾರಣವಾಗುತ್ತದೆ ಅಂತ ಗೊತ್ತಿದ್ದರೆ ಮೊದಲೇ ತೆಗೆದು ಬಿಡುತ್ತಿದ್ದೆ. ಅದು ಕೇವಲ ಕಣ್ತಪ್ಪಿನಿಂದ ಕೆಲವು ಸೆಕೆಂಡ್‌ಗಳಿಗೆ ಮಾತ್ರ ಗೋಡೆಮೇಲೆ ಕಾಣುತ್ತದೆ. ಇದರಲ್ಲಿ ಸೂರ್ಯ ಅವರ ಯಾವುದೇ ತಪ್ಪಿಲ್ಲ. ನಿರ್ದೇಶಕನಾದ ನಾನು ಇದಕ್ಕೆ ಹೊಣೆಗಾರ ಅಂತ ಹೇಳಿದ್ದಾರೆ.

    ಸಂಭಾವನೆ ಹಿಂದಿರುಗಿಸಿ, ಸೂರ್ಯ ಅವರಿಗೆ ಪತ್ರ ಬರೆದ ಕಣ್ಮಣಿ ಗುಣಶೇಖರನ್

    'ಜೈ ಭೀಮ್' ವಿವಾದಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ, ಅದೇ ಚಿತ್ರದ ಸಂಭಾಷಣೆಗಳನ್ನು ಪ್ರಾದೇಶಿಕ ಆಡುಭಾಷೆಗೆ (ಮಧ್ಯ ತಮಿಳುನಾಡು)ಬದಲಾಯಿಸುವಲ್ಲಿ "ಜೈ ಭೀಮ್" ತಯಾರಕರಿಗೆ ಸಹಾಯ ಮಾಡಿದ ಬರಹಗಾರ ಕಣ್ಮಣಿ ಗುಣಶೇಖರನ್ ಬರೆದ ಪತ್ರವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿದೆ. ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಪಡೆದ ಸಂಭಾವನೆಯನ್ನು ಹಿಂದಿರುಗಿಸಿರುವ ಬರಹಗಾರ ಗುಣಶೇಖರನ್, ನಿರ್ಮಾಪಕರು "ವನ್ನಿಯಾರ್" ಗಳನ್ನು ಕೆಟ್ಟ ರೀತಿಯಲ್ಲಿ ತೋರಿಸಿರುವ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. 'ಎಲಿ ವೆಟ್ಟೈ' (ಇಲಿ ಬೇಟೆ) ಎಂದು ಹೆಸರಿಟ್ಟಿದ್ದ ಸಿನಿಮಾವನ್ನು 'ಜೈ ಭೀಮ್' ಎಂದು ಬದಲಿಸಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.

     ಪತ್ರದಲ್ಲಿ ಉಲ್ಲೇಖ

    ಪತ್ರದಲ್ಲಿ ಉಲ್ಲೇಖ

    ಕಣ್ಮಣಿ ಗುಣಶೇಖರನ್ ಅವರು ತಮ್ಮ ಪತ್ರದಲ್ಲಿ 'ನಾನು ಹಳ್ಳಿಯ ಪರಿಸರದಲ್ಲಿ ಕೃಷಿ, ಬರವಣಿಗೆ ಮತ್ತು ಇತರ ಕೆಲಸಗಳನ್ನು ಮಾಡುತ್ತಾ ಬದುಕುವ ವ್ಯಕ್ತಿ' ಎಂದು ಬರೆದಿದ್ದಾರೆ ಮತ್ತು ಅವರ ಓದುಗರಾದ ಸೆಂಥಿಲ್ ಅವರು ಜುಲೈ, 2019 ರಲ್ಲಿ ನಿರ್ದೇಶಕ ಜ್ಞಾನವೇಲ್ ಅವರೊಂದಿಗೆ ಮನಕೊಲ್ಲೈನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಆನಂತರ ನಡೆದ ವಿಚಾರಗಳನ್ನು ಕೂಡ ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ...

    ಪತ್ರದ ಪೂರ್ಣ ವಿವರಣೆ

    ಪತ್ರದ ಪೂರ್ಣ ವಿವರಣೆ

    "ಮನೆಗೆ ಬಂದಾಗ ಜ್ಞಾನವೇಲ್ ಹೇಳಿದ್ದು, ನಿಮ್ಮ 'ಅಂಜಲೈ" ಕಾದಂಬರಿ ಸಂಭಾಷಣೆಯು, ನನ್ನ ಮುಂದಿನ ಚಿತ್ರಕ್ಕೆ ಬೇಕಾದ ಸಂಭಾಷಣೆಗೆ ತೀರ ಹತ್ತಿರವಾಗಿದೆ. ಕಮ್ಮಪುರಂ ಪೊಲೀಸ್ ಠಾಣೆಯ ಘಟನೆಯ ಬಗ್ಗೆ ನಿಮಗೆ ತಿಳಿದಿದೆ ಮತ್ತು ಚಿತ್ರದ ಕಥೆಯನ್ನು ವಿರುತಾಚಲಂ ಮತ್ತು ಕಮ್ಮಪುರಂನಲ್ಲಿ ಹೊಂದಿಸಿರುವುದರಿಂದ ಪ್ರಾದೇಶಿಕ ಆಡುಭಾಷೆಯಲ್ಲಿ ಸಂಭಾಷಣೆಗಳನ್ನು ಪುನಃ ಬರೆಯಲು ನನ್ನನ್ನು ಕೇಳಿಕೊಂಡರು "ಎಂದು ಗುಣಶೇಖರನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

    ಸಂಭಾಷಣೆ ಬರೆಯಲು ಹಿಂಜರಿದಿದ್ದೆ

    ಸಂಭಾಷಣೆ ಬರೆಯಲು ಹಿಂಜರಿದಿದ್ದೆ

    "ಸಿನಿಮಾ ಕ್ಷೇತ್ರ ನನಗೆ ಹೊಸದು ಎಂದು ನಾನು ಮೊದಲಿಗೆ ಹಿಂಜರಿಯುತ್ತಿದ್ದೆ. ಆದರೆ ನಿರ್ದೇಶಕರೇ ನನ್ನ ಮನೆಗೆ ಬಂದಿದ್ದರಿಂದ ವಿರೋಧಿಸಲು ಸಾಧ್ಯವಾಗಲಿಲ್ಲ ಮತ್ತು ಇದು ಗಿರಿಜನರ ಸಾಮಾಜಿಕ ಹೋರಾಟದ ಬಗ್ಗೆ ಮಾತನಾಡುವ ಚಿತ್ರವಾಗಿದೆ ಅಂತ ಸಂಭಾಷಣೆ ರಚನೆಗೆ ಒಪ್ಪಿಗೆ ಸೂಚಿಸಿದೆ.

    'ಜೈಭೀಮ್' ಚಿತ್ರದ ಮೂಲ ಹೆಸರು 'ಎಲಿ ವೆಟ್ಟೈ'

    'ಜೈಭೀಮ್' ಚಿತ್ರದ ಮೂಲ ಹೆಸರು 'ಎಲಿ ವೆಟ್ಟೈ'

    ಇನ್ನು ಪತ್ರದಲ್ಲಿ ಮತ್ತೊಂದು ಆಸಕ್ತಿದಾಯಕ ಸಂಗತಿಯನ್ನು ಕೂಡ ಅವರು ಉಲ್ಲೇಖಿಸಿದ್ದಾರೆ, ಅದು ಚಿತ್ರದ ಶೀರ್ಷಿಕೆಯ ಬದಲಾವಣೆಯ ಬಗ್ಗೆ. "ನನಗೆ ನೀಡಿದ ಸಂಭಾಷಣೆ ಪ್ರತಿಯಲ್ಲಿ, ಚಿತ್ರದ ಶೀರ್ಷಿಕೆ "ಎಲಿ ವೆಟ್ಟೈ" ಅಂತ ಹೆಸರಿಡಲಾಗಿತ್ತು. ಆಡುಭಾಷೆಯನ್ನು ಬದಲಾಯಿಸುವಲ್ಲಿ ಕೆಲವು ಬದಲಾವಣೆಗಳ ಅಗತ್ಯವಿತ್ತು ಮತ್ತು ಚಿತ್ರದ ಕೆಲವು ಪಾತ್ರಗಳ ಹೆಸರುಗಳು ಸಮಸ್ಯಾತ್ಮಕವೆಂದು ತೋರುತ್ತಿತ್ತು ಮತ್ತು ಅದನ್ನು ಸರಿಪಡಿಸುವ ಭರವಸೆ ನಿರ್ದೇಶಕರು ನನಗೆ ಭರವಸೆ ನೀಡಿರುತ್ತಾರೆ. ನನಗೆ ಸಾವಿನ ಹಾಡನ್ನೂ ಬರೆಯಲು ಸಹ ಹೇಳಿದ್ದರು ಮತ್ತು ನಾನು ಕೊಟ್ಟದ್ದಕ್ಕಿಂತ ಆಳವಾದ ಹಾಡನ್ನು ನೀವು ನಿರೀಕ್ಷಿಸಿದ್ದರಿಂದ ನಾನು ಅದರಿಂದ ಹಿಂದೆ ಸರಿದಿದೆ. ನೀವು ಜನರ ಗ್ರಾಮ್ಯ ಸಂಭಾಷಣೆಯ ಬದಲಾವಣೆಗೆ ಸಂಬಂಧಿಸಿದಂತೆ ನಾನು ಮಾಡಿದ ಕೆಲಸಕ್ಕೆ 50,000 ರೂ. ಹಣ ಸಂದಾಯ ಮಾಡಿರುತ್ತೀರಿ. ಕಮ್ಮಪುರಂ ಹಸಿರಿನಿಂದ ಕೂಡಿರುವ ಕಾರಣ ಚಿತ್ರದ ಶೂಟಿಂಗ್ ವಿಜುಪುರಂನಲ್ಲಿ ನಡೆದಿದೆ ಎಂಬ ಮಾಹಿತಿ ನನಗೂ ಬಂತು. ನಾನು "ಎಲಿ ವೆಟ್ಟೈ" ಗಾಗಿ "ಜೈ ಭೀಮ್" ಎಂಬ ಬದಲಾದ ಶೀರ್ಷಿಕೆಯೊಂದಿಗೆ ಜಾಹೀರಾತನ್ನು ನೋಡಲಾರಂಭಿಸಿದೆ. ಇದು ನನಗೆ ನಿಜಕ್ಕೂ ಆಶ್ಚರ್ಯವನ್ನು ಮತ್ತು ಆಘಾತವನ್ನು ತಂದಿತ್ತು. ಕವಿಗಳು,ಕಲಾವಿದರಿಗೆ ಮತ್ತು ಬರವಣಿಗೆಗಾರರಿಗೆ ಒಂದು ವಿಚಾರ ಬದ್ಧತೆ ಇರಬೇಕು. ಆದರೆ ಅಂತಹ ಬದ್ಧತೆ ನಿಮ್ಮ ತಂಡದಲ್ಲಿ ಕಾಣಲಿಲ್ಲ..

    ವನ್ನಿಯಾರ್ ಕಲಸಂ ನೋಡಿ ಆಘಾತವಾಯಿತು

    ವನ್ನಿಯಾರ್ ಕಲಸಂ ನೋಡಿ ಆಘಾತವಾಯಿತು

    ಗುಣಶೇಖರನ್, ಚಿತ್ರದಲ್ಲಿನ ವನ್ನಿಯಾರ್ ಉಲ್ಲೇಖದ ಬಗ್ಗೆ ತಮ್ಮ ಆಘಾತವನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. "ಮೂಲ ಚಿತ್ರದ ಪ್ರತಿಯಲ್ಲಿ, "ವನ್ನಿಯಾರ್ ಕಲಸಂ" ಬಗ್ಗೆ ಯಾವುದೇ ಉಲ್ಲೇಖವನ್ನು ನಾನು ನೋಡಲಿಲ್ಲ. ನಾನು ಎಂದಾದರೂ ಅದರ ಬಗ್ಗೆ ತಿಳಿದುಕೊಂಡಿದ್ದರೆ ನಾನು ಖಂಡಿತ ಈ ಚಿತ್ರಕ್ಕೆ ಸಂಭಾಷಣೆ ಸಹಕಾರ ನೀಡುತ್ತಿರಲಿಲ್ಲ. "ಎಂದು ಗುಣಶೇಖರ್ ಹೇಳಿದ್ದಾರೆ ಮತ್ತು 'ವನ್ನಿಯಾರ್' ಉಲ್ಲೇಖಗಳಿಗಾಗಿ "ಜೈ ಭೀಮ್" ವಿರುದ್ಧ ತಮ್ಮ ಭಾವನೆಗಳನ್ನು ಹೊರಹಾಕಿದರು.

    ''ಇಡೀ ಸಿನಿಮಾ ವನ್ನಿಯಾರ್ ಸಮುದಾಯದ ವಿರುದ್ಧ ಇದೆ''

    ''ಇಡೀ ಸಿನಿಮಾ ವನ್ನಿಯಾರ್ ಸಮುದಾಯದ ವಿರುದ್ಧ ಇದೆ''

    "ನೀವು ಕ್ಯಾಲೆಂಡರ್ ಉಲ್ಲೇಖವನ್ನು ಬದಲಾಯಿಸಿದ್ದರೂ, ಇಡೀ ಚಿತ್ರವು ವನ್ನಿಯಾರ್ ಸಮುದಾಯದ ವಿರುದ್ಧ ಮಾತನಾಡುತ್ತದೆ" ಎಂದು ಕಣ್ಮಣಿ ಗುಣಶೇಖರನ್ ಆ ಪತ್ರದಲ್ಲಿ ಹೇಳಿಕೊಂಡು ಬಂದಿದ್ದಾರೆ ಮತ್ತು ಅನ್ಬುಮಣಿ ರಾಮದಾಸ್ ಅವರ ಟಿಪ್ಪಣಿಗೆ ಸೂರ್ಯ ಅವರ ಪ್ರತಿಕ್ರಿಯೆಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ"ಬೇರೆ ಟೈಟಲ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ಮೂಲಕ ನನಗೆ ದ್ರೋಹ ಬಗೆದಿದ್ದೀರಿ. ಅಲ್ಲದೇ ನೆಗೆಟಿವ್ ಪಾತ್ರಕ್ಕೆ ಕಾಡುವಟ್ಟಿ ಗುರು ಹೆಸರನ್ನು ಇಟ್ಟು ಅವಮಾನ ಮಾಡಿದ್ದೀರಿ. ನಡೆಯುತ್ತಿರುವ ಎಲ್ಲದರ ಬಗ್ಗೆ ಮೌನವಾಗಿ ನೋಡುವುದು ಖಿನ್ನತೆಯನ್ನುಂಟುಮಾಡುತ್ತದೆ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನೀವು ಮನುಷ್ಯರಾಗಬೇಕು. ಕಲೆ-ಕಲಾವಿದ ಎಂಬುವುದಕ್ಕಿಂತ ಮಾನವತ್ವ ದೊಡ್ಡದು "ಎಂದು ಅವರ ತಮ್ಮ ಭಾವನೆಗಳನ್ನು ಹೊರಹಾಕಿದ ನಂತರ, ಕಣ್ಮಣಿ ಗುಣಶೇಖರನ್ ಅವರು "ಜೈ ಭೀಮ್" ನಲ್ಲಿ ಕೆಲಸ ಮಾಡಿದ್ದಕ್ಕಾಗಿ ಪಡೆದ ಸಂಭಾವನೆಯನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ. ಸಂಭಾವನೆಯಾಗಿ ಪಡೆದ 50 ಸಾವಿರ ರೂಪಾಯಿಗಳನ್ನು ಚೆಕ್ ಮೂಲಕ ನಿರ್ಮಾಪಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

    ರಾಜಕಾರಣಿಗಳಿಂದ 'ಜೈಭೀಮ್' ಗೆ ಬೆಂಬಲ

    ರಾಜಕಾರಣಿಗಳಿಂದ 'ಜೈಭೀಮ್' ಗೆ ಬೆಂಬಲ

    ಬಿಡುಗಡೆಯಾದಾಗಿನಿಂದ, ಸೂರ್ಯ ಅವರ "ಜೈ ಭೀಮ್" ಸಾರ್ವಜನಿಕ ಮತ್ತು ರಾಜಕೀಯ ಪಕ್ಷದ ನಾಯಕರಿಂದ ಪ್ರಶಂಸೆ ಮತ್ತು ವಿವಾದಗಳನ್ನು ಎದುರಿಸುತ್ತಿದೆ. ಸಿಎಂ ಎಂ.ಕೆ. ಸ್ಟಾಲಿನ್, ಎಂಎನ್‌ಎಂ ನಾಯಕ ಕಮಲ್ ಹಾಸನ್, ವಿಸಿಕೆ ನಾಯಕ ತಿರುಮಾವಳವನ್ ಸಿನಿಮಾ ವೀಕ್ಷಿಸಿ, ಇಂತಹ ವಿಷಯವನ್ನು ಆಯ್ದುಕೊಂಡು ಯಶಸ್ವಿಯಾಗಿ ಜನರಿಗೆ ತಲುಪಿಸಿರುವ ಸೂರ್ಯ ಅವರನ್ನು ಶ್ಲಾಘಿಸಿದ್ದಾರೆ. ಆದರೆ, ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಅವರು ಚಿತ್ರವನ್ನು ವೀಕ್ಷಿಸಿ ಮತ್ತು ಪತ್ರ ಮುಖೇನ ಸೂರ್ಯ ಅವರಿಗೆ 9 ಪ್ರಶ್ನೆಗಳನ್ನು ಕೇಳಿದರು. ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಸೂರ್ಯ, "ಜೈ ಭೀಮ್" ಅನ್ನು ರಾಜಕೀಯಕ್ಕೆ ಸೀಮಿತಗೊಳಿಸಬೇಡಿ ಎಂದು ವಿನಂತಿಸಿದ್ದಾರೆ.

     ಸೂರ್ಯಗೆ ಒಂಬತ್ತು ಪ್ರಶ್ನೆ

    ಸೂರ್ಯಗೆ ಒಂಬತ್ತು ಪ್ರಶ್ನೆ

    ಎಸ್. ರಾಮದಾಸ್ ನೇತೃತ್ವದ "ಪಟ್ಟಲ್ ಮಕ್ಕಳ ಕಚ್ಚಿ" ಇತ್ತೀಚೆಗೆ ಬಿಡುಗಡೆಯಾದ "ಜೈ ಭೀಮ್" ಚಿತ್ರಕ್ಕಾಗಿ ನಟ ಸೂರ್ಯ ಅವರಿಗೆ ತೊಂದರೆ ನೀಡುತ್ತಿದೆ. ಅನ್ಬುಮಣಿ ರಾಮದಾಸ್ ಅವರು ಸೂರ್ಯ ಅವರಿಗೆ 9 ಪ್ರಶ್ನೆಗಳನ್ನು ಕೇಳಿ ಪತ್ರ ಬರೆದ ಮೇಲೆ ವನ್ನಿಯಾರ್ ಸಂಗಮ್ ಚಿತ್ರದ ನಟ ಮತ್ತು ನಿರ್ಮಾಪಕರ ಮೇಲೆ ಅಲ್ಲದೆ ನಿರ್ದೇಶಕರ ಮೇಲೂ ಕೂಡ ಕಾನೂನು ನೋಟಿಸ್ ಜಾರಿ ಮಾಡಿತು, ಬೇಷರತ್ ಕ್ಷಮೆಯಾಚಿಸುವಂತೆ ಮತ್ತು ವನ್ನಿಯಾರ್ ಸಮುದಾಯವನ್ನು ದೂಷಿಸುವ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಹೋರಾಟವನ್ನು ಮುಂದುವರೆಸುವೆ.

    English summary
    "I don't want your money ..." said Kanmani Gunasekaran, who had returned the money to Jai Bhim's team.Writer Kanmani Gunasekaran has return the remuneration he received for penning the dialects for the film Jai bhim, He had sent a cheque for 50,000 rs to 2 D Entertainment Private and added that he felt betrayed by the film crew.
    Monday, November 22, 2021, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X