ಕನ್ನಡದ ಸೂಪರ್ ಸ್ಟಾರ್ ಗಳ ಮಧ್ಯೆ ಸರಿಯಿಲ್ಲ!
ಇಷ್ಟೇ ಅಲ್ಲ, ದೊಡ್ಡ ನಾಯಕರ ಡೇಟ್ಸ್‌ಗಳನ್ನು ಹೊಂದಿಸಲು ಭಾರಿ ಪ್ರಯತ್ನ ಪಡೋಣವೆಂದರೆ ನನ್ನ ಮಿತ್ರರೂ ಕೂಡ ಸಾಕಷ್ಟು ಬಿಜಿಯಾಗಿದ್ದರು. ಈ ಎಲ್ಲ ಕಾರಣಗಳಿಂದ ನನ್ನ ಚಿತ್ರದ ಕಥೆಗೆ ಬೇಕಾಗಿದ್ದ ಐವರು ಸೂಪರ್ ಸ್ಟಾರ್ ಗಳಲ್ಲಿ ನನಗಾಗ ಒಬ್ಬರೂ ಸಿಗಲಿಲ್ಲ. ಹಾಗಾಗಿ ನನ್ನ ಕನಸಿನ ಪ್ರಾಜೆಕ್ಟ್ ಕೈ ಬಿಡಬೇಕಾಗಿ ಬಂತು. ಆದರೆ ಈಗ ಕಾಲ ಮೊದಲಿನಂತಿಲ್ಲ. ಹದಗೆಟ್ಟ ಸಂಬಂಧಗಳು ಸರಿಯಾಗುತ್ತಿವೆ. ಆದರೆ ಈಗ ನಾನೇ ನಟನಾಗಿ ಬಿಜಿಯಾಗಿದ್ದೇನೆ" ಎಂದು ಹಳೆಯ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ.
ಸದ್ಯಕ್ಕೆ ನಿರ್ದೇಶನದ ಆಸೆಯನ್ನು ಕಡೆಗಣಿಸಿ ನಟನೆಯಲ್ಲಿ ಬಿಜಿಯಾಗಿದ್ದಾರೆ ಆದಿತ್ಯ. ಇತ್ತೀಚಿಗಷ್ಟೇ ಅಗ್ನಿ ಶ್ರೀಧರ್ ಹಾಗೂ ಸುಮನಾ ಕಿತ್ತೂರು ಸಂಗಮದ ಚಿತ್ರ 'ಎದೆಗಾರಿಕೆ' ಶೂಟಿಂಗ್ ಮುಗಿಸಿದ್ದಾರೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ರೆಬೆಲ್', ಕೆ ಮಾದೇಶ್ ನಿರ್ದೇಶನದ 'ರಾಸ್ಕಲ್' ಗಳು ಕೊನೆಯ ಹಂತದ ಚಿತ್ರೀಕರಣದಲ್ಲಿವೆ. ನಂತರ ಎಂ.ಎಸ್. ರಮೇಶ್ ನಿರ್ದೇಶನದ 'ಖಾಕಿ', ಪಿ.ಎನ್. ಸತ್ಯ ಅವರದೊಂದು ಚಿತ್ರ ಹಾಗೂ ನಂತರ ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರಗಳು ಆದಿತ್ಯ ಕೈನಲ್ಲಿವೆ.
ಕನ್ನಡ ಹೊರತುಪಡಿಸಿಯೂ ಆದಿತ್ಯ ಗುರುತಿಸಿಕೊಳ್ಳುತ್ತಿದ್ದಾರೆ. ನೆರೆಭಾಷೆ ತಮಿಳಿನ 'ವಾಲು' ಎಂಬ ಚಿತ್ರದಲ್ಲಿ ಆದಿತ್ಯ ವಿಲನ್ ರೋಲ್ ಮಾಡುತ್ತಿದ್ದಾರೆ. ಅದೊಂದೇ ಅಲ್ಲದೇ ಪರಭಾಷೆಯಿಂದ ಸಾಕಷ್ಟು ಅವಕಾಶಗಳು ಆದಿತ್ಯ ಪಾಲಿಗಿದೆಯಂತೆ. ಆದರೆ ಕನ್ನಡಕ್ಕೇ ಹೆಚ್ಚು ಪ್ರಾಶಸ್ತ್ಯ ನೀಡಲು ಬಯಸಿರುವ ಆದಿತ್ಯ, ಪರಭಾಷೆ ಚಿತ್ರಗಳ ಆಫರ್ ಕಡೆ ಅಷ್ಟೇನೂ ಗಮನ ನೀಡುತ್ತಿಲ್ಲವಂತೆ. ಒಟ್ಟಿನಲ್ಲಿ ಬಹಳ ದಿನಗಳಿಂದ ಹೃದಯದಲ್ಲೇ ಬಿಚ್ಚಿಟ್ಟಿದ್ದ ಗುಟ್ಟೊಂದು ಇದೀಗ ಆದಿತ್ಯ ಬಾಯಿಂದ ಬಹಿರಂಗವಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












