For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ನಿರ್ದೇಶಿಸಲು ಹೊರಟಿದ್ದರೇ ಆದಿತ್ಯ?

  |
  <ul id="pagination-digg"><li class="next"><a href="/gossips/kannada-actor-aditya-acts-kannada-tamil-movies-067713.html">Next »</a></li></ul>

  ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ, ಹಿಂದೊಮ್ಮೆ ನಟನೆ ಬಿಟ್ಟು ನಿರ್ದೇಶನ ಮಾಡುತ್ತೇನೆ ಎಂದು ಹೊರಟಿದ್ದು ಗೊತ್ತೇ ಇದೆ. ಆದರೆ ನಟ ಆದಿತ್ಯ ನಿರ್ದೇಶನದ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ಅಷ್ಟೇ ಅಲ್ಲ, ನಟರಾಗಿಯೇ ಅವರು ಈಗಲೂ ಬಿಜಿಯಾಗಿದ್ದಾರಲ್ಲ! ಹೌದು, ನಟ ಆದಿತ್ಯ 'ಹೇಳಿದ್ದೇ ಒಂದು, ಮಾಡಿದ್ದು ಇನ್ನೊಂದು. ನಿರ್ದೇಶನ ಮಾಡುತ್ತೇನೆ ಅಂದವರ ಚಿತ್ರವೇ ಪತ್ತೆಯಿಲ್ಲ'.

  ಹೀಗೆ ಆದಿತ್ಯರ ಮೇಲೆ ಅಪವಾದ ಹೊರಿಸುವುದಕ್ಕಿಂತ ಅವರು 'ಅಂದುಕೊಂಡಿದ್ದೇ ಒಂದು, ಆಗಿದ್ದು ಇನ್ನೊಂದು' ಅನ್ನುವುದೇ ಹೆಚ್ಚು ಸೂಕ್ತ. ಯಾಕೆಂದರೆ ನಾಯಕರಾಗಿ ನೆಲೆನಿಲ್ಲಲು ಕಷ್ಟವಾಗಿದ್ದ ಸಂದರ್ಭದಲ್ಲಿ ಆದಿತ್ಯ ನಿರ್ದೇಶನಕ್ಕೆ ಅಣಿಯಾಗಿದ್ದು ಹೌದು. ಆದರೆ ನಿರ್ದೇಶನ ಮಾಡಬೇಕೆಂದು ಅವರಂದುಕೊಂಡಿದ್ದ ಚಿತ್ರಕ್ಕೆ ನಾಯಕನಟರೇ ಸಿಗಲಿಲ್ಲವಂತೆ. ಆಶ್ಚರ್ಯ ಬೇಡ, ಅದನ್ನು ಸ್ವತಃ ಆದಿತ್ಯರೇ ಹೇಳಿಕೊಂಡಿದ್ದಾರೆ.

  "ನನ್ನ ಚಿತ್ರಕ್ಕ ನಾಯಕರು ಸೂಪರ್ ಸ್ಟಾರ್ ಉಪೇಂದ್ರ" ಎಂದಿದ್ದ ಆದಿತ್ಯ, ತಮ್ಮ ಚಿತ್ರಕ್ಕೆ ಮುಹೂರ್ತದ ದಿನವನ್ನು ಸಹ ಘೋಷಿಸಿದ್ದರು. ಆದರೆ ನಂತರ ಆದಿತ್ಯ, ಆ ಪ್ರಾಜೆಕ್ಟ್ ನಿಂದ ಹಿಂದೆ ಸರಿದುಬಿಟ್ಟರು. ಇದಾಗಿ ಅದೆಷ್ಟೋ ಕಾಲವಾಯ್ತು. ಆದಿತ್ಯರನ್ನೇ ಹೆಚ್ಚು ಕಡಿಮೆ ಮರೆತಿರುವ ಜನರು ಅವರ ಮಾತುಗಳು ಹಾಗೂ ನಿರ್ದೇಶನ ಮಾಡಬೇಕಿದ್ದ ಪ್ರಾಜೆಕ್ಟ್ ಸಂಗತಿಯನ್ನು ಸಂಪೂರ್ಣ ಮರೆತೇ ಬಿಟ್ಟಿದ್ದರು.

  ಆದರೆ ಅಲ್ಲೇ ಆಗಿದ್ದು ಯಡವಟ್ ಎಂಬಂತೆ, ಆದಿತ್ಯ ಮಾತ್ರ ಅದನ್ನು ಮರೆತಿರಲಿಲ್ಲ. ಇದೀಗ ವೃತ್ತಿಜೀವನದಲ್ಲಿ ಮೇಲೇರುತ್ತಿರುವ, ಕೈತುಂಬಾ ಚಿತ್ರಗಳನ್ನು ಹಿಡಿದಿರುವ ಆದಿತ್ಯ, ಹಳೆಯದನ್ನು ನೆನಪಿಸಿಕೊಂಡು ಮಾಧ್ಯಮವೊಂದರ ಸಂದರ್ಶನದಲ್ಲಿ ತಾವು ನಿರ್ದೇಶಿಸಬೇಕಿದ್ದ ಪ್ರಾಜೆಕ್ಟ್ ಬಿದ್ದು ಹೋದ ಕಾರಣವನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ನೇರ ಆರೋಪದ ಮೂಲಕ ಚಿತ್ರರಂಗದ ಇನ್ನೊಂದು ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/gossips/kannada-actor-aditya-acts-kannada-tamil-movies-067713.html">Next »</a></li></ul>
  English summary
  Kannada Actor, director Rajendra Singh Babu son Aditya told that he dropped his direction Dream Project because of Kannada Super Stars. He also added that now he is busy with acting himself. As a further information, he is acting in a Tamil movie too. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X