ಕನ್ನಡ ನಟನ ತೆಲುಗು ಚಿತ್ರಕ್ಕೆ ತಮಿಳಿನಲ್ಲಿ ಭರ್ಜರಿ ಬೆಲೆ
ಕಿಚ್ಚ ಸುದೀಪ್ ತೆಲುಗು, ತಮಿಳು ದ್ವಿಭಾಷಾ ಚಿತ್ರ 'ಈಗ'. ಮೈನವಿರೇಳಿಸುವ ಗ್ರಾಫಿಕ್ಸ್‌ನಿಂದ ಕೂಡಿದ ಈ ಚಿತ್ರ ಏಕಕಾಲಕ್ಕೆ ತೆಲುಗು, ತಮಿಳಿನಲ್ಲಿ ಹವಾ ಎಬ್ಬಿಸಲು ಸಿದ್ಧವಾಗಿದೆ. ತಮಿಳಿನಲ್ಲಿ ಚಿತ್ರಕ್ಕೆ ನಾನ್ ಈ ಎಂದು ಹೆಸರಿಡಲಾಗಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ತಮಿಳಿನಲ್ಲಿ ಭರ್ಜರಿ ಬೆಲೆ ಸಿಕ್ಕಿದೆ.
'ಈಗ' ಚಿತ್ರದ ತಮಿಳು ಟಿವಿ ರೈಟ್ಸ್ ತಮಿಳುನಾಡಿನ ಮನೆಮಾತಾಗಿರುವ ಸನ್ ಟಿವಿ ಪಾಲಾಗಿದೆ. ರು.3.5 ಕೋಟಿಗೆ ಕೊಟ್ಟು ಸನ್ ಟಿವಿ 'ಈಗ' ಚಿತ್ರದ ಸ್ಯಾಟಲೈಟ್ ರೈಟ್ಸನ್ನು ಪಡೆದುಕೊಂಡಿದೆ. ಕನ್ನಡ ನಟನೊಬ್ಬನ ತೆಲುಗು ಚಿತ್ರಕ್ಕೆ ತಮಿಳಿನಾಡಿನಲ್ಲಿ ಈ ಬೆಲೆ ಸಿಕ್ಕಿರುವುದು ನಿಜಕ್ಕೂ ಸಂತಸದ ವಿಚಾರ.
ಇನ್ನು 'ಈಗ' ಚಿತ್ರದ ತಮಿಳು ವಿತರಣೆ ಹಕ್ಕುಗಳು ರು. 5 ಕೋಟಿಗೆ ಸೇಲಾಗಿದೆ. ಮೇ 30ರಂದು 'ಈಗ' ಚಿತ್ರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಸುದೀಪ್ ಅವರ ವೃತ್ತಿಜೀವನದಲ್ಲಿ ಹೊಸ ತಿರುವು ನೀಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)
More from Filmibeat
English summary
Kannada actor Sudeep Telugu film Eega Tamil satellite rights sets a new record in Tamilnadu. Sources claims that, Eega Tamil satellite rights are sold for a whooping price of Rs 3.35crores to Sun TV. The movie all set to release on 30th May.


Click it and Unblock the Notifications











