For Quick Alerts
  ALLOW NOTIFICATIONS  
  For Daily Alerts

  ಹೊಸ ಫೋಟೋಶೂಟ್ ನಲ್ಲಿ ನಟಿ ಸಂಯುಕ್ತಾ ಹೆಗ್ಡೆ ಮಿಂಚಿಂಗ್

  |

  ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಂಯುಕ್ತಾ ಅಭಿನಯದ ತಮಿಳಿನ ಕೋಮಲಿ ಸಿನಿಮಾ ಇತ್ತೀಚಿಗೆಷ್ಟೆ ತೆರೆಕಂಡಿದೆ. ಸಿನಿಮಾ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ ಅಂದ್ರು ಸಂಯುಕ್ತಾ ಮಾತ್ರ ತಮಿಳು ಚಿತ್ರರಂಗದಲ್ಲಿ ಶೈನ್ ಆಗುತ್ತಿದ್ದಾರೆ.

  ಸದ್ಯ ಪಪ್ಪಿ ಸಿನಿಮಾದಲ್ಲಿ ನಿರತರಾಗಿರುವ ಸಂಯುಕ್ತಾ ಹೋಸ ಫೋಟೋ ಶೂಟ್ ಮೂಲಕ ದರ್ಶನ ನೀಡಿದ್ದಾರೆ. ಯಾವಾಗಲು ಬಿಕಿನಿ ಧರಿಸಿ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸಂಯುಕ್ತಾ, ಈ ಬಾರಿ ಹಸಿರು ಬಣ್ಣದ ಗೌನ್ ನಲ್ಲಿ ಕಂಗೊಳಿಸುತ್ತಿದ್ದಾರೆ. ತರಹೇವಾರಿ ಫೋಸ್ ಗಳನ್ನು ನೀಡಿರುವ ವೈರೈಟಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

  ಟ್ರಾಫಿಕ್ ಶುಲ್ಕ ಹೆಚ್ಚಳ ವಿರೋಧಿಸಿ ಸಂಯುಕ್ತಾ ಹೆಗ್ಡೆ ಟ್ವೀಟ್ಟ್ರಾಫಿಕ್ ಶುಲ್ಕ ಹೆಚ್ಚಳ ವಿರೋಧಿಸಿ ಸಂಯುಕ್ತಾ ಹೆಗ್ಡೆ ಟ್ವೀಟ್

  ಪ್ರಿಯಕರನ ಜೊತೆ ಫಾರಿನ್ ಟ್ರಿಪ್, ಮೋಜು ಮಸ್ತಿ ಅಂತ ಎಂಜಾಯ್ ಮಾಡುತ್ತಿರುವ ಸಂಯುಕ್ತಾ ಅಪರೂಪಕ್ಕೊಂದು ಸಿನಿಮಾನು ಮಾಡುತ್ತಿದ್ದಾರೆ. ಸದ್ಯ ಹೊಸ ಫೋಟೋಶೂಟ್ ಮೂಲಕ ದರ್ಶನ ನೀಡುವ ಮೂಲಕ ಮತ್ತೆ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಕಿರಿಕ್ ಸುಂದರಿಯ ಫೋಟೋಗೆ ಸಾಕಷ್ಟು ಲೈಕ್ಸ್ ಕೂಡ ಹರಿದು ಬಂದಿದೆ.

  ಮೊನ್ನೆ ಮೊನ್ನೆಯಷ್ಟೆ ಹೊಸ ಟ್ರಾಫಿಕ್ ರೂಲ್ಸ್ ವಿರುದ್ಧ ಸಿಡಿದೆದ್ದಿದ್ದ ಸಂಯುಕ್ತಾ ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದರು. "ಪೊಲೀಸರು ಲಂಚ ಪಡೆದುಕೊಳ್ಳುವುದರಲ್ಲಿ ಬದಲಾಗಿದೆ. ನಿಮ್ಮ ಅಧಿಕಾರಿಗಳು ಮೊದಲು ನಿಯಮವನ್ನು ಪಾಲಿಸಲಿ" ಎಂದು ಟ್ವೀಟ್ ಮಾಡಿದ್ದರು. ಆಗಾಗ ಸದ್ದು ಮಾಡುತ್ತಿರುವ ಸಂಯಕ್ತಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.

  English summary
  Kannada actress Samyukta Hegde new Photoshoot went viral on social media. She is busy in Tamil Film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X