ಸೀರೆಯಲ್ಲಿ ಪುಲ್‌ಅಪ್ಸ್ ಮಾಡಿ ಸ್ಟಾರ್ ನಟನ ಚಿತ್ರಕ್ಕೆ ಸಂಯುಕ್ತಾ ಹೆಗ್ಡೆ ಆಯ್ಕೆ

'ಕಿರಿಕ್ ಪಾರ್ಟಿ' ಸಿನಿಮಾ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ ಭರ್ಜರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತಮಿಳಿನ ದೊಡ್ಡ ನಟನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಕೆ ಸೀರೆಯಲ್ಲಿ ಪುಶ್‌ಅಪ್ಸ್ ಮಾಡಿದ್ದ ವಿಡಿಯೋ ನೋಡಿ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ. ಸ್ವತಃ ಸಂಯುಕ್ತಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಫಿಟ್‌ನೆಸ್ ಫ್ರೀಕ್ ಆಗಿರುವ ಸಂಯುಕ್ತಾ ಜಿಮ್, ಜಿಮ್ಯಾಸ್ಟಿಕ್ ಮಾಡುತ್ತಾರೆ. ಜಾಗಿಂಗ್, ಸ್ವಿಮ್ಮಿಂಗ್ ಅಂತ ಬಹಳ ಆಕ್ಟೀವ್ ಆಗಿ ಇರ್ತಾರೆ. 'ಕಿರಿಕ್ ಪಾರ್ಟಿ' ಬಳಿಕ ಕನ್ನಡದಲ್ಲಿ ಯಾವುದೇ ಹಿಟ್ ಆಕೆಗೆ ಸಿಗಲಿಲ್ಲ. ತಮಿಳು, ತೆಲುಗು ಸಿನಿಮಾಗಳಲ್ಲಿ ಮಾತ್ರವಲ್ಲದೇ ಹಿಂದಿ ಸಿನಿಮಾಗಳಲ್ಲಿ ವೆಬ್ ಸೀರಿಸ್‌ನಲ್ಲಿ ಕೂಡ ಬೆಂಗಳೂರು ಬೆಡಗಿ ನಟಿಸಿ ಬಂದಿದ್ದಾರೆ.

Kannada Actress Samyuktha Hegde on board for Chiyaan Vikram s Next film

ತಮಿಳಿನಲ್ಲಿ ಚಿಯಾನ್ ವಿಕ್ರಮ್ ನಟನೆಯ 63ನೇ(ಇನ್ನು ಹೆಸರಿಟ್ಟಿಲ್ಲ) ಚಿತ್ರದಲ್ಲಿ ಈಗ ಸಂಯುಕ್ತಾ ಹೆಗ್ಡೆ ಬಣ್ಣ ಹಚ್ಚುತ್ತಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಕಿರಿಕ್ ಬೆಡಗಿ ಮಾತನಾಡಿದ್ದಾರೆ. 7 ವರ್ಷಗಳ ಹಿಂದೆ 'ಕೋಮಲಿ' ಎಂಬ ತಮಿಳು ಚಿತ್ರದಲ್ಲಿ ಸಂಯುಕ್ತಾ ನಟಿಸಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಬಳಿಕ ಯಾವುದೇ ದೊಡ್ಡ ಅವಕಾಶ ಸಿಕ್ಕಿರಲಿಲ್ಲ. ಇದೀಗ ಚಿಯಾನ್ ವಿಕ್ರಮ್ ಜೊತೆ ನಟಿಸೋಕೆ ತಯಾರಿ ನಡೆಸಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಸಂತೋಷ್ ನಾರಾಯಣ್ ಸಂಗೀತ, ಆರ್‌ಡಿ ರಾಜಶೇಖರ್ ಛಾಯಾಗ್ರಹಣ ಚಿತ್ರಕ್ಕಿದೆ.

ನಾನು ಸೀರೆ ಉಟ್ಟು ಪುಲ್ ಅಪ್ಸ್ ಮಾಡುವ ವೀಡಿಯೋವನ್ನು ನೋಡಿ ವಿಕ್ರಮ್ ಅವರ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾಗಿ ಚಿತ್ರತಂಡ ಹೇಳಿತು ಎಂದು ಸಂಯುಕ್ತಾ ತಿಳಿಸಿದ್ದಾರೆ. 'ಇರು ಮುಗನ್', 'ಅರಿಮಾ ನಂಬಿ', 'ನೋಟಾ' ಹಾಗೂ 'ಎನಿಮಿ' ರೀತಿಯ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದ ಆನಂದ್ ಶಂಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಾನು ನಿರ್ವಹಿಸುವ ಪಾತ್ರ ನನ್ನ ನಿಜ ಜೀವನದ ವ್ಯಕ್ತಿತ್ವಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕ್ಯಾಟರಿಂಗ್ ನಡೆಸುವ ಕುಟುಂಬದಿಂದ ಬಂದ ಹುಡುಗಿ ಪಾತ್ರ. ನಿರ್ದೇಶಕರು ಆ ಪಾತ್ರವನ್ನು ಕಲ್ಪಿಸಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. "ಚಿತ್ರೀಕರಣ ಆರಂಭವಾಗಿದೆ. ನಾನು ಮೊದಲ ದಿನ ವಿಕ್ರಮ್ ಸರ್ ಅವರನ್ನು ಭೇಟಿಯಾದೆ. ಆ ದಿನ ಅವರ ಚಿತ್ರೀಕರಣ ಇರಲಿಲ್ಲ, ಆದ್ರು ಸೆಟ್‌ಗೆ ಬಂದಿದ್ರು. ಅವರು ಎಷ್ಟು ಸರಳ ಮತ್ತು ನಿಷ್ಠುರ ಎನ್ನುವುದು ಇಷ್ಟವಾಯಿತು" ಎಂದಿದ್ದಾರೆ.

ಕೇರಳ ಕಸವು ಸೀರೆ ಉಟ್ಟು ಸಂಯುಕ್ತಾ ಪುಲ್‌ಅಪ್ಸ್ ಮಾಡಿದ್ದ ವೀಡಿಯೋ ಕಳೆದ ವರ್ಷ ವೈರಲ್ ಆಗಿತ್ತು. ಸಾಕಷ್ಟು ಲೈಕ್ಸ್, ವೀವ್ಸ್ ಗಿಟ್ಟಿಸಿತ್ತು. ಅದೇ ವಿಡಿಯೋ ಬಗ್ಗೆ ಆಕೆ ಹೇಳಿದ್ದಾರೆ. ಭೂಗತಲೋಕದ ಕಥೆಯನ್ನು ವಿಕ್ರಮ್ 63 ಸಿನಿಮಾದಲ್ಲಿ ಹೇಳಲಾಗ್ತಿದೆ. ರಿಯಾ ಶಿಬು ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಶಾನ್ ಕರುಪ್ಪುಸಾಮಿ ಜೊತೆ ಸೇರಿ ನಿರ್ದೇಶಕ ಆನಂದ್ ಶಂಕರ್ ಚಿತ್ರಕ್ಕೆ ಕಥೆ ಬರೆದಿದ್ದಾರೆ.

'ರಾಣಾ' ಚಿತ್ರದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದ ಸಂಯುಕ್ತಾ ಬಳಿಕ 'ತುರ್ತು ನಿರ್ಗಮನ' ಹಾಗೂ 'ಕ್ರೀಮ್' ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಎರಡು ವರ್ಷಗಳಿಂದ ಯಾವುದೇ ಕನ್ನಡ ಚಿತ್ರದಲ್ಲಿ ಆಕೆ ನಟಿಸಿಲ್ಲ. ಕೆಲ ಹಿಂದಿ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಕೂಡ ಭಾಗಿ ಆಗಿದ್ದರು.

'ಕಾಲೇಜ್ ಕುಮಾರ', 'ಒಮ್ಮೆ ನಿಶಬ್ಧ ಒಮ್ಮೆ ಯುದ್ಧ' ಕನ್ನಡದಲ್ಲಿ ಆಕೆ ನಟಿಸಿದ ಮತ್ತೆರಡು ಕನ್ನಡ ಸಿನಿಮಾಗಳು. 'ಕೋಮಲಿ'ಗೂ ಮೊದ್ಲು 'ವಾಚ್‌ಮನ್' ಸಿನಿಮಾ ಮೂಲಕ ಕಾಲಿವುಡ್ ಪ್ರವೇಶಿಸಿದ್ದರು. 'ಪಪ್ಪಿ', 'ಥೀಲ್', 'ಮನ್ಮಥ ಲೀಲೈ' ಎಂಬ ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದರು.

Read more about: samyuktha hegde vikram kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X