'ಜಂಟಲ್ ಮನ್' ರೀಮೇಕ್ ರೈಟ್ಸ್ ಗೆ ದಾಖಲೆ ಬೆಲೆ: ತಮಿಳಿನಲ್ಲಿ ಸ್ಟಾರ್ ನಟ ಅಭಿನಯ.?

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ದೇಶಪಾಂಡೆ ನಿರ್ಮಾಣದ ಸಿನಿಮಾ 'ಜಂಟಲ್ ಮನ್'. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಮತ್ತು ಹ್ಯೂಮನ್ ಎಂಬ್ರಿಯೋ ಟ್ರಾಫಿಕ್ಕಿಂಗ್ ಸುತ್ತ ಹೆಣೆದಿರುವ ರೋಚಕ ಕಥೆ 'ಜಂಟಲ್ ಮನ್' ಚಿತ್ರದಲ್ಲಿದೆ.

ಮೊನ್ನೆಮೊನ್ನೆಯಷ್ಟೇ ತೆರೆಕಂಡ 'ಜಂಟಲ್ ಮನ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ವಿಮರ್ಶಕರಿಂದ ಭೇಷ್ ಎನಿಸಿಕೊಂಡಿರುವ 'ಜಂಟಲ್ ಮನ್' ಚಿತ್ರವನ್ನು ಪ್ರೇಕ್ಷಕರು ಕೂಡ ಕೊಂಡಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ವೃತ್ತಿ ಜೀವನದಲ್ಲಿಯೇ 'ಜಂಟಲ್ ಮೆನ್' ದಿ ಬೆಸ್ಟ್ ಸಿನಿಮಾ ಅಂತ ಹೇಳಲಾಗುತ್ತಿದೆ.

ಕನ್ನಡದಲ್ಲಿ ಟಾಕ್ ಆಫ್ ಟೌನ್ ಆಗಿರುವ 'ಜಂಟಲ್ ಮನ್' ಚಿತ್ರದ ರೀಮೇಕ್ ರೈಟ್ಸ್ ಕಾಲಿವುಡ್ ನಲ್ಲಿ ಮಾರಾಟವಾಗುತ್ತಿದೆ. 'ಜಂಟಲ್ ಮನ್' ಚಿತ್ರದ ತಮಿಳು ಅವತರಣಿಕೆಯಲ್ಲಿ ಸ್ಟಾರ್ ನಟ ಅಭಿನಯಿಸುವ ಸಾಧ್ಯತೆ ಇದೆ. ಮುಂದೆ ಓದಿರಿ...

'ಜಂಟಲ್ ಮನ್' ಚಿತ್ರದ ರೀಮೇಕ್ ರೈಟ್ಸ್ ಗೆ ಬೇಡಿಕೆ.!

'ಜಂಟಲ್ ಮನ್' ಚಿತ್ರದ ರೀಮೇಕ್ ರೈಟ್ಸ್ ಗೆ ಬೇಡಿಕೆ.!

ಸ್ಯಾಂಡಲ್ ವುಡ್ ನಲ್ಲಿ ಹೊಸ ಸೇನ್ಸೇಷನ್ ಕ್ರಿಯೇಟ್ ಮಾಡಿರುವ 'ಜಂಟಲ್ ಮನ್' ಚಿತ್ರದ ರೀಮೇಕ್ ರೈಟ್ಸ್ ಗೆ ತಮಿಳು ಸಿನಿ ಅಂಗಳದಲ್ಲಿ ಭಾರಿ ಡಿಮ್ಯಾಂಡ್ ಇದೆ. ವಿಭಿನ್ನ ಕಥಾಹಂದರ ಹೊಂದಿರುವ 'ಜಂಟಲ್ ಮನ್' ಚಿತ್ರದ ತಮಿಳು ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗುವ ಮುನ್ಸೂಚನೆ ನೀಡಿದೆ.

ರೀಮೇಕ್ ಹಕ್ಕು ಖರೀದಿ ಮಾಡುತ್ತಿರುವವರು ಯಾರು.?

ರೀಮೇಕ್ ಹಕ್ಕು ಖರೀದಿ ಮಾಡುತ್ತಿರುವವರು ಯಾರು.?

ತಮಿಳು ನಿರ್ಮಾಪಕ ರಾಮ್ ನಾರಾಯಣ್ ಪುತ್ರ ಮುರಳಿ ಕನ್ನಡದ 'ಜಂಟಲ್ ಮನ್' ಚಿತ್ರವನ್ನು ವೀಕ್ಷಿಸಿದ್ದು, ರೀಮೇಕ್ ರೈಟ್ಸ್ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ನಿರ್ಮಾಪಕ ಗುರು ದೇಶಪಾಂಡೆ ಜೊತೆಗೆ ಮಾತುಕತೆ ನಡೆಸಿರುವ ಮುರಳಿ ಇನ್ನೊಂದು ವಾರದೊಳಗೆ ರೀಮೇಕ್ ರೈಟ್ಸ್ ಖರೀದಿ ಮಾಡಲಿದ್ದಾರೆ.

ಸ್ಟಾರ್ ನಟ ಅಭಿನಯ.?

ಸ್ಟಾರ್ ನಟ ಅಭಿನಯ.?

'ಜಂಟಲ್ ಮನ್' ಚಿತ್ರದ ತಮಿಳು ರೀಮೇಕ್ ನಲ್ಲಿ ಕಾಲಿವುಡ್ ನ ಸ್ಟಾರ್ ನಟರಾದ ವಿಜಯ್ ಸೇತುಪತಿ ಅಥವಾ ಜಯಂ ರವಿ ಅಭಿನಯಿಸುವ ಸಾಧ್ಯತೆ ಇದೆ. ಈ ಹಿಂದೆ ವಿಜಯ್ ಅಭಿನಯದ 'ಮೆರ್ಸಲ್' ಚಿತ್ರಕ್ಕೆ ಬಂಡವಾಳ ಹಾಕಿದ್ದ ಮುರಳಿ, ಇದೀಗ 'ಜಂಟಲ್ ಮನ್' ರೀಮೇಕ್ ನ ತಮಿಳಿನಲ್ಲಿ ನಿರ್ಮಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

'ಜಂಟಲ್ ಮನ್' ಚಿತ್ರದ ಕುರಿತು..

'ಜಂಟಲ್ ಮನ್' ಚಿತ್ರದ ಕುರಿತು..

ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್, ವಿಜಯ್ ಚೆಂಡೂರ್, ಪ್ರಶಾಂತ್ ಸಿದ್ದಿ ಅಭಿನಯದ 'ಜಂಟಲ್ ಮನ್' ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್ ಚಿತ್ರ. ಅಜನೀಶ್ ಲೋಕನಾಥ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಜಡೇಶ್ ಕುಮಾರ್ ಹಂಪಿ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Kannada Movie Gentleman remake rights in Demand in Kollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X