ತಮಿಳುನಾಡಿನಲ್ಲಿ 4ನೇ ದಿನ ಬೆಳಗ್ಗೆ 3ಕ್ಕೆ ಶೋ, ಚೆನ್ನೈನಲ್ಲಿ ಸೋಮವಾರ 300 ಶೋಗಳಲ್ಲಿ 'ಕಾಂತಾರ-1' ಕಿಚ್ಚು

ಬೆಳ್ಳಿತೆರೆಯಲ್ಲಿ 'ಕಾಂತಾರ- 1' ಸಿನಿಮಾ ಅಕ್ಷರಶಃ ಮ್ಯಾಜಿಕ್ ಮಾಡ್ತಿದೆ. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಹೊಸ ದೇಶಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ 4 ದಿನಕ್ಕೆ 50 ಲಕ್ಷಕ್ಕೂ ಅಧಿಕ ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ವಿಶ್ವದಾದ್ಯಂತ ಸಿನಿಮಾ ಕಲೆಕ್ಷನ್ 300 ಕೋಟಿ ರೂ. ದಾಟಿದೆ.

ತಮಿಳುನಾಡು, ತೆಲಂಗಾಣ, ಆಂಧ್ರ, ಕೇರಳದಲ್ಲಿ 'ಕಾಂತಾರ- 1' ಕಿಚ್ಚ ಜೋರಾಗಿದೆ. ಬೇಡಿಕೆಗೆ ತಕ್ಕಂತೆ ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ತಮಿಳು ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡಿದ್ದಾರೆ. ನೋಡಿದವರೆಲ್ಲಾ ಮೆಚ್ಚಿ ಕೊಂಡಾಡುತ್ತಿದ್ದಾರೆ. ಮನೆಮಂದಿಯೆಲ್ಲಾ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದಕ್ಕೆ ಭಾನುವಾರ ಬೆಳಗ್ಗೆ 3.30 ಹಾಗೂ 4 ಗಂಟೆಗೆ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿದ್ದು ಸ್ಪಷ್ಟ ಉದಾಹರಣೆ.

Kantara-1 Mania 300 Crore in Just 4 Days Tamil Nadu Hosts Early Morning Shows

ಬೆಳಗ್ಗೆ 3.30ಕ್ಕೆ ಶೋ

ತಮಿಳುನಾಡು- ಕರ್ನಾಟಕ ಗಡಿಭಾಗದ ಹೊಸೂರಿನ ಗ್ರ್ಯಾಂಡ್ ಸಿನಿಮಾಸ್ ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲಿನಿಂದಲೂ ಕನ್ನಡ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಈ ಹಿಂದೇ 'ಕಾಟೇರ' ಸೇರಿ ಕೆಲ ಕನ್ನಡ ಸಿನಿಮಾಗಳು ಅಲ್ಲಿ ಬಿಡುಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದವು. ಇದೀಗ 'ಕಾಂತಾರ- 1' ಆರ್ಭಟ ಜೋರಾಗಿದೆ. ಕನ್ನಡ ವರ್ಷನ್ ಶೋಗಳಿಗೆ ಭಾರೀ ಬೇಡಿಕೆಯಿದೆ. ತಮಿಳುನಾಡಿನ ಕೆಲ ಭಾಗಗಳಲ್ಲಿ ಬೆಳಗ್ಗೆ 9 ಗಂಟೆಗೆ ಮುನ್ನ ಸಿನಿಮಾ ಪ್ರದರ್ಶನಕ್ಕೆ ಅನುಮತಿ ಇಲ್ಲ. ಆದರೆ ಹೊಸೂರಿನಲ್ಲಿ ಭಾನುವಾರ(ಅಕ್ಟೋಬರ್ 5) ಬೆಳಗ್ಗೆ 3.30 ಬಳಿಕ 4 ಗಂಟೆಗೆ ಹಾಗೂ 5.45ಕ್ಕೆ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿದ್ದರು.

ಚೆನ್ನೈನಲ್ಲಿ 250 ಶೋಗಳು

ಸಾಮಾನ್ಯವಾಗಿ ಫಸ್ಟ್ ವೀಕೆಂಡ್ ಬಳಿಕ ಸೋಮವಾರ ಯಾವುದೇ ಸಿನಿಮಾ ಕ್ರೇಜ್ ಕಮ್ಮಿ ಆಗಿರುತ್ತದೆ. ವಾರದ ದಿನ ಆಗಿರುವುದರಿಂದ ಜನ ಆಫೀಸ್ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಬೇಕಿರುತ್ತದೆ. ಆದರೆ ಸೋಮವಾರವೂ 'ಕಾಂತಾರ'-1 ಕಿಚ್ಚು ಕಮ್ಮಿ ಆಗ್ತಿಲ್ಲ. ಧನುಷ್ ನಟನೆಯ 'ಇಡ್ಲಿ ಕಡೇ' ಚಿತ್ರದ ಎದುರು ರಿಷಬ್ ಶೆಟ್ಟಿ ಸಿನಿಮಾ ದಾಖಲೆ ಬರೆಯುತ್ತಿದೆ. ಸೋಮವಾರ ಒಂದೇ ದಿನ ಚೆನ್ನೈನಲ್ಲಿ 300 ಶೋಗಳಲ್ಲಿ 'ಕಾಂತಾರ- 1' ಚಿತ್ರ ಸದ್ದು ಮಾಡ್ತಿದೆ. ಕನ್ನಡ ಶೋಗಳಿಗೂ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.

Kantara-1 Mania 300 Crore in Just 4 Days Tamil Nadu Hosts Early Morning Shows

ಪುಷ್ಪ-2 ದಾಖಲೆ ಉಡೀಸ್

ಕೇರಳದಲ್ಲಿ ಕೂಡ 'ಕಾಂತಾರ- 1' ದರ್ಬಾರ್ ಜೋರಾಗಿದೆ. ಸೋಮವಾರ ಕೂಡ ಕೊಚ್ಚಿಯಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪೃಥ್ವಿರಾಜ್ ಸುಕುಮಾರನ್ ಚಿತ್ರವನ್ನು ಅಲ್ಲಿ ಬಿಡುಗಡೆ ಮಾಡಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ವಿಶ್ವದಾದ್ಯಂತ 1700 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಹೇಳಿತ್ತು. ಆದರೆ ಕೇರಳದಲ್ಲಿ ಚಿತ್ರಕ್ಕೆ ಹಿನ್ನಡೆ ಆಗಿತ್ತು. ಬಾಕ್ಸಾಫೀಸ್ ಪಂಡಿತರ ಪ್ರಕಾರ ಅಲ್ಲಿ 18 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗ್ತಿದೆ. 'ಕಾಂತಾರ- 1' ಸಿನಿಮಾ ಕೇರಳದಲ್ಲಿ 4 ದಿನಕ್ಕೆ 20 ಕೋಟಿ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಅಲ್ಲಿಗೆ 'ಪುಷ್ಪ- 2' ದಾಖಲೆ ಮುರಿದಂತಾಗಿದೆ.

ಎಲ್ಲೆಲ್ಲೂ ದಾಖಲೆ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಸಿನಿಮಾ 2D, ICE, IMAX 2D ಹಾಗೂ 4DX ವರ್ಷನ್‌ಗಳಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ಇದೆ. ಕೆಲವರು ಬೇಕೆಂದೇ ಚಿತ್ರದ ಬಗ್ಗೆ ನೆಗೆಟಿವ್ ಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಗೆಲ್ಲುತ್ತಿದೆ. ಒಳ್ಳೆ ಸಿನಿಮಾ ಗೆಲುವನ್ನು ಏನೇ ಮಾಡಿದರೂ ತಡೆಯಲು ಸಾಧ್ಯವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

More from Filmibeat

English summary
Kantara-1 Hits ₹300 Crore Mark in 4 Days, Special Early Morning Shows in tamilnadu Prove Fan Frenzy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X