For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ತಮಿಳು ಸಿನಿಮಾದ ಲುಕ್ ರಿಲೀಸ್

  |

  ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾಗಳ ಜೊತೆಗೆ ತಮಿಳು ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ಹೌದು, ಸುಲ್ತಾನ್ ಸಿನಿಮಾ ಮೂಲಕ ರಶ್ಮಿಕಾ ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಮೊದಲ ತಮಿಳು ಸಿನಿಮಾದಲ್ಲಿ ರಶ್ಮಿಕಾ ನಟ ಕಾರ್ತಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಸುಲ್ತಾನ್ ಹೆಸರೇ ಹೇಳುವ ಹಾಗೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಲಾಕ್ ಡೌನ್ ಬಳಿಕ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭ ಮಾಡಿ ಯಶಸ್ವಿಯಾಗಿ ಮುಗಿಸಿದ್ದಾರೆ. ಇತ್ತೀಚಿಗೆ ಚಿತ್ರೀಕರಣ ಮುಗಿದ ಖುಷಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಎರಡನೇ ಬಾರಿ ತಂದೆಯಾದ ಸಂತಸದಲ್ಲಿ ನಟ ಕಾರ್ತಿಎರಡನೇ ಬಾರಿ ತಂದೆಯಾದ ಸಂತಸದಲ್ಲಿ ನಟ ಕಾರ್ತಿ

  ಇದೀಗ ವಿಶೇಷ ಅಂದರೆ ದಸರಾ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದ ಚಿತ್ರದಿಂದ ಯಾವುದೇ ಫೋಟೋ ರಿಲೀಸ್ ಆಗಿರಲಿಲ್ಲ. ಇದಾಗ ಮೊದಲ ಲುಕ್ ಬಿಡುಗಡೆಯಾಗಿದೆ. ನಟ ಕಾರ್ತಿ ಆಕ್ಷನ್ ಲುಕ್ ಇದಾಗಿದ್ದು, ಮಾಸ್ ಚಿತ್ರಪ್ರಿಯರು ಈ ಲುಕ್ ಗೆ ಫಿದಾ ಆಗಿದ್ದಾರೆ. ಚಿತ್ರದ ಖಡಕ್ ಲುಕ್ ಅನ್ನು ನಟ ಕಾರ್ತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡಿದ್ದಾರೆ.

  ಹೇ ಉದ್ಧವ್ ಠಾಕ್ರೆ ಎಂದು ಏಕವಚನದಲ್ಲಿ ಗಾಳಿ ಬಿಡಿಸಿದ ಕಂಗನಾ | Filmibeat Kannada

  ಇನ್ನೂ ಕಾರ್ತಿ ಲುಕ್ ಅನ್ನು ನಟಿ ರಶ್ಮಿಕಾ ಶೇರ್ ಮಾಡಿ ಅದ್ಭುತವಾಗಿದ್ದು, ಭಯ ಹುಟ್ಟಿಸುತ್ತಿದೆ ಎಂದಿದ್ದಾರೆ. ಅಂದ್ಹಾಗೆ ಸುಲ್ತಾನ್ ಭಾಗ್ಯರಾಜ್ ಕಣ್ಣನ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ. ದಕ್ಷಿಣ ಭಾರತೀಯ ಸಿನಿಮಾದಲ್ಲಿ ಸಂಚಲನ ಸೃಷ್ಟಿಮಾಡಿರುವ ನಟಿ ರಶ್ಮಿಕಾ ತಮಿಳಿನಲ್ಲಿ ನಟಿಸಿರುವ ಮೊದಲ ಸಿನಿಮಾವಾದರಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

  English summary
  Actor Karthi and Rashmika mandanna starrer Sultan film first look release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X