ಕಾರ್ತಿ-ರಶ್ಮಿಕಾ ನಟನೆಯ 'ಸುಲ್ತಾನ್' ಸಿನಿಮಾದ ಹೊಸ ಪೋಸ್ಟರ್ ಹೀಗಿದೆ

ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾಗಳ ಜೊತೆಗೆ ತಮಿಳು ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ಸುಲ್ತಾನ್ ಸಿನಿಮಾ ಮೂಲಕ ರಶ್ಮಿಕಾ ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ನಟ ಕಾರ್ತಿ ಜೊತೆ ನಾಯಕಿಯಾಗಿ ನಟಿಸುತ್ತಿರುವ ರಶ್ಮಿಕಾ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಈಗಾಗಲೇ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಸಿನಿಮಾತಂಡ, ಇದೀಗ ದೀಪಾವಳಿಯ ಪ್ರಯುಕ್ತ ಹೊಸ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಪೋಸ್ಟರ್ ನಲ್ಲಿ ಕಾರ್ತಿ ಮತ್ತು ರಶ್ಮಿಕಾ ಇಬ್ಬರು ಕೈಹಿಡಿದು ದೇವಸ್ಥಾನದಲ್ಲಿ ಕುಳಿತಿದ್ದಾರೆ. ಸುತ್ತ ದೀಪಗಳನ್ನು ಹಚ್ಚಿ ಹಚ್ಚಿಡಲಾಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮ್ ಪಾತ್ರ ಬಿಟ್ಟು ಮೊದಲ ಬಾರಿಗೆ ಹಳ್ಳಿ ಲುಕ್ ನಲ್ಲಿ ಮಿಂಚಿದ್ದಾರೆ.

ಸುಲ್ತಾನ್ ಹೆಸರೇ ಹೇಳುವ ಹಾಗೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಲಾಕ್ ಡೌನ್ ಬಳಿಕ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭ ಮಾಡಿ ಆಗಲೇ ಯಶಸ್ವಿಯಾಗಿ ಶೂಟಿಂಗ್ ಮುಗಿಸಿದ್ದಾರೆ. ಇತ್ತೀಚಿಗೆ ಚಿತ್ರೀಕರಣ ಮುಗಿದ ಖುಷಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Karthi And Rashmika Mandanna Starrer Sulthan Movie New Poster Release On Deepavali

ಅಂದಹಾಗೆ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಇತ್ತೀಚಿಗೆ ನಟ ಶರ್ವಾನಂದ್ ಅಭಿನಯದ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ರಶ್ಮಿಕಾ ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Recommended Video

ಸೈಬರ್ ರಾಣೆ ಮೆಟ್ಟಿಲೇರಿದ Vinod Raj | Filmibeat Kannada

More from Filmibeat

English summary
Karthi and Rashmika Mandanna starrer Sulthan movie new poster released on the Occasion of Deepavali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X