ಒಂದಾಗುತ್ತಿದೆ ಸಹೋದರರ ಜೋಡಿ: ರೀಮೇಕ್ ಸಿನಿಮಾದಲ್ಲಿ ಕಾರ್ತಿ-ಸೂರ್ಯ

ಕಾರ್ತಿ-ಸೂರ್ಯ ಸಹೋದರರ ತಮಿಳಿನ ಪ್ರತಿಭಾನ್ವಿತ ನಾಯಕ ನಟರು. ಕೇವಲ ಸಿದ್ಧಮಾದರಿಯ ಕಮರ್ಶಿಯಲ್ ಸಿನಿಮಾಗಳಿಗೆ ಬಂಧಿಸಿಕೊಳ್ಳದೆ ಪ್ರಯೋಗಗಳಿಗೆ ಒಳಪಡಿಸಿಕೊಳ್ಳುವ ಧೈರ್ಯವಂತರು.

Recommended Video

ಬಾಲಿವುಡ್ ನ ಖ್ಯಾತ ಮ್ಯೂಸಿಕ್ ಕಂಪೋಸರ್ ವಾಜಿದ್ ಖಾನ್ ನಿಧನ | Wajid Khan Passed Away | Music Composer

ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಈ ಸಹೋದರರು ಒಟ್ಟಗೆ ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬುದು ಬಹುಜನರ ಆಸೆ. ಆ ಆಸೆ ಕೊನೆಗೂ ಈಗ ಈಡೇರುತ್ತಿದೆ.

ರೀಮೇಕ್ ಸಿನಿಮಾ ಒಂದರಲ್ಲಿ ಸೂರ್ಯ ಮತ್ತು ಕಾರ್ತಿ ಅಭಿನಯಿಸಲಿದ್ದಾರೆ. ಸ್ವಂತ ಅಣ್ಣ-ತಮ್ಮಂದಿರದಾದರೂ ಸಹ ಇಬ್ಬರೂ ಬದ್ಧ ವೈರಿಗಳಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಕಾರ್ತಿ ಮತ್ತು ಸೂರ್ಯ ಒಟ್ಟಿಗೆ ನಟಿಸಲಿದ್ದಾರೆ

ಕಾರ್ತಿ ಮತ್ತು ಸೂರ್ಯ ಒಟ್ಟಿಗೆ ನಟಿಸಲಿದ್ದಾರೆ

ಮಲೆಯಾಳಂ ನಲ್ಲಿ ಸೂಪರ್-ಡೂಪರ್ ಹಿಟ್ ಆದ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದಲ್ಲಿ ಸೂರ್ಯ ಮತ್ತು ಕಾರ್ತಿ ಒಟ್ಟಿಗೆ ನಟಿಸಲಿದ್ದಾರೆ. ಇದಕ್ಕೆ ಮುನ್ನಾ ಸಸಿಕುಮಾರ್ ಮತ್ತು ಶರತ್‌ಕುಮಾರ್ ಈ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು, ಆದರೆ ಈಗ ಕಾರ್ತಿ ಮತ್ತು ಸೂರ್ಯ ನಟಿಸಲಿದ್ದಾರೆ ಎನ್ನಲಾಗಿದೆ.

ಯಾರು ಯಾವ ಪಾತ್ರದಲ್ಲಿ ನಟಿಸುತ್ತಾರೆ?

ಯಾರು ಯಾವ ಪಾತ್ರದಲ್ಲಿ ನಟಿಸುತ್ತಾರೆ?

ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ಪಾತ್ರಗಳಾದ ಅಯ್ಯಪ್ಪ ಹಾಗೂ ಕೋಶಿ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವರು ಸೂರ್ಯ, ಪೊಲೀಸ್ ಇನ್‌ಸ್ಪೆಕ್ಟರ್‌ ಅಯ್ಯಪ್ಪನ ಪಾತ್ರದಲ್ಲಿ ನಟಿಸಲಿ, ಕಾರ್ತಿ ಒರಟು ವ್ಯಕ್ತಿತ್ವದ ಕೋಶಿ ಪಾತ್ರದಲ್ಲಿ ನಟಿಸಲಿ ಎನ್ನುತ್ತಿದ್ದಾರೆ.

ಅಯ್ಯಪ್ಪನುಂ ಕೋಶಿಯುಂ ಸಿನಿಮಾ ರೀಮೇಕ್

ಅಯ್ಯಪ್ಪನುಂ ಕೋಶಿಯುಂ ಸಿನಿಮಾ ರೀಮೇಕ್

ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ತಮಿಳು ರೀಮೇಕ್‌ ಬಗ್ಗೆ ಈ ವರೆಗೆ ಸ್ಪಷ್ಟತೆ ದೊರೆತಿಲ್ಲ. ಯಾರೂ ಅಧಿಕೃತ ಹೇಳಿಕೆ ಸಹ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಸೂರ್ಯ ಮತ್ತು ಕಾರ್ತಿ ಒಟ್ಟಿಗೆ ನಟಿಸುವುದು ಪಕ್ಕಾ ಅಂತೆ.

ಜಾನ್ ಅಬ್ರಹಂ ಕೊಂಡಿದ್ದಾರೆ ಹಿಂದಿ ಹಕ್ಕು

ಜಾನ್ ಅಬ್ರಹಂ ಕೊಂಡಿದ್ದಾರೆ ಹಿಂದಿ ಹಕ್ಕು

ಅಯ್ಯಪ್ಪನುಂ ಕೋಶಿಯುಂ ಮಲಯಾಳಂ ಸಿನಿಮಾದಲ್ಲಿ ಅಯ್ಯಪ್ಪನ್ ನಾಯರ್ ಆಗಿ ಬಿಜು ಮೆನನ್, ಕೋಶಿ ಕುರಿಯನ್ ಆಗಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಈ ಸಿನಿಮಾದ ಹಿಂದಿ ಹಕ್ಕುಗಳನ್ನು ಬಾಲಿವುಡ್ ನಟ ಜಾನ್ ಅಬ್ರಹಾಂ ಖರೀದಿಸಿದ್ದಾರೆ. ಹಿಂದಿಯಲ್ಲಿಯೂ ಇದು ರೀಮೇಕ್ ಆಗುತ್ತಿದೆ.

More from Filmibeat

English summary
Tamil actors Karthi and Surya acting to together in Malayalam movie Ayyappanum Koshiyum remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X