For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ಕಂಡು 'ಪೇಟಾ' ನಿರ್ದೇಶಕ ಹೇಳಿದ್ದೇನು?

  |

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೂರು ವರ್ಷದ ಬಳಿಕ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹೆಜ್ಜೆ ಇಡುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  ಇತ್ತೀಚಿಗಷ್ಟೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೈಲರ್ ತೆರೆಕಂಡಿತ್ತು. 4 ನಿಮಿಷದ ಟ್ರೈಲರ್ ಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಲೇಟ್ ಆಗಿ ಬಂದ್ರು ಲೇಟೆಸ್ಟ್ ಆಗಿ ಬರ್ತಿದ್ದಾರೆ ಎಂಬ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿ ಬರ್ತಿದೆ.

  'ಶ್ರೀಮನ್ನಾರಾಯಣ' ಟ್ರೈಲರ್ ರಿಲೀಸ್ ವೇಳೆ ರಕ್ಷಿತ್ ಕಣ್ಣೀರಿಟ್ಟಿದ್ದೇಕೆ?'ಶ್ರೀಮನ್ನಾರಾಯಣ' ಟ್ರೈಲರ್ ರಿಲೀಸ್ ವೇಳೆ ರಕ್ಷಿತ್ ಕಣ್ಣೀರಿಟ್ಟಿದ್ದೇಕೆ?

  ಕನ್ನಡ ಕಲಾಭಿಮಾನಿಗಳು ಮಾತ್ರವಲ್ಲ, ಪರಭಾಷೆಯ ಸ್ಟಾರ್ ಗಳು ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿದ್ದ ಪೇಟಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಕಾರ್ತಿಕ್ ಸುಬ್ಬರಾಜು ಶ್ರೀಮನ್ನಾರಾಯಣನಿಗೆ ಫಿದಾ ಆಗಿದ್ದಾರೆ.

  'ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು ಅದು ನನ್ನ ಅಧಿಕಾರ': ರಿಷಬ್ ಶೆಟ್ಟಿ'ರಕ್ಷಿತ್ ಸಿನಿಮಾ ಅಂದ್ಮೇಲೆ ನಾನು ಇರಲೇ ಬೇಕು ಅದು ನನ್ನ ಅಧಿಕಾರ': ರಿಷಬ್ ಶೆಟ್ಟಿ

  ಟ್ರೈಲರ್ ನೋಡಿ ಟ್ವೀಟ್ ಮಾಡಿರುವ ಕಾರ್ತಿಕ್ ಸುಬ್ಬರಾಜು ''ಅದ್ಭುತ ಸಿನಿಮೇಕರ್, ಬರಹಗಾರ, ನಟ ರಕ್ಷಿತ್ ಶೆಟ್ಟಿ ಅವರಿಗೆ ತಮಿಳು ಇಂಡಸ್ಟ್ರಿಗೆ ಸ್ವಾಗತ. ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್. ಆದಷ್ಟೂ ಬೇಗ ಅವನೇ ಶ್ರೀಮನ್ನಾರಾಯಣ ಚಿತ್ರವನ್ನ ಚಿತ್ರಮಂದಿರದಲ್ಲಿ ನೋಡಲು ಕಾಯುತ್ತಿದ್ದೇನೆ'' ಎಂದಿದ್ದಾರೆ.

  ಅಂದ್ಹಾಗೆ, ಅವನೇ ಶ್ರೀಮನ್ನಾರಾಯಣ ಚಿತ್ರದ ತಮಿಳು ವರ್ಷನ್ ಟ್ರೈಲರ್ ನಟ ಧನುಶ್ ರಿಲೀಸ್ ಮಾಡಿದ್ದರು. ತೆಲುಗಿನಲ್ಲಿ ನಾನಿ ಹಾಗೂ ಮಲಯಾಳಂ ಭಾಷೆಯಲ್ಲಿ ನಿವಿನ್ ಪೌಲಿ ಬಿಡುಗಡೆಗೊಳಿಸಿದ್ದರು.

  'ಶ್ರೀಮನ್ನಾರಾಯಣ' ಟ್ರೈಲರ್ ನಲ್ಲಿ ಹಾಲಿವುಡ್ ಚಿತ್ರದ 'ನೆರಳು': ಇದು ಕಾಪಿನಾ? ಸ್ಫೂರ್ತಿನಾ?'ಶ್ರೀಮನ್ನಾರಾಯಣ' ಟ್ರೈಲರ್ ನಲ್ಲಿ ಹಾಲಿವುಡ್ ಚಿತ್ರದ 'ನೆರಳು': ಇದು ಕಾಪಿನಾ? ಸ್ಫೂರ್ತಿನಾ?

  ಸಚಿನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಬಾಲಾಜಿ ಮನೋಹರ್ ಸೇರಿದಂತೆ ಹಲವು ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ಸಂಗೀತ ನೀಡಿದ್ದಾರೆ. ಡಿಸೆಂಬರ್ 27 ರಂದು ಐದು ಭಾಷೆಯಲ್ಲಿ ಸಿನಿಮಾ ತೆರೆಕಾಣುತ್ತಿದೆ.

  English summary
  Tamil Director Karthik Subbaraj watched Avne Srimannarayana Trailer and praised about rakshit shetty and team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X