ರಜನಿಕಾಂತ್ ಆರೋಗ್ಯ ರಹಸ್ಯ: ಚರ್ಚೆ ಹುಟ್ಟುಹಾಕಿದ ಕಸ್ತೂರಿ ಶಂಕರ್ ಪೋಸ್ಟ್
ಆರೋಗ್ಯ ತಪಾಸಣೆಗಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅಮೆರಿಕ ತೆರಳಿದರು. ಯುಎಸ್ ಮೆಯೊ ಕ್ಲಿನಿಕ್‌ನಲ್ಲಿ ರಜನಿ ಮತ್ತು ಮಗಳು ಐಶ್ವರ್ಯ ಕಾಣಿಸಿಕೊಂಡಿರುವ ಫೊಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೊರೊನಾ ಭೀತಿ ಹಿನ್ನೆಲೆ ಭಾರತದಿಂದ ನೇರವಾಗಿ ಅಮೆರಿಕಾ ಹೋಗುವವರಿಗೆ ಯುಎಸ್ ಸರ್ಕಾರ ನಿಷೇಧ ಹೇರಿದೆ. ಹೀಗಿದ್ದರೂ ಸೂಪರ್ ಸ್ಟಾರ್ ಅಮೆರಿಕಾಗೆ ಹೋಗಿದ್ದು ಏಕೆ ಎಂದು ತಮಿಳು ನಟಿ, ಹೋರಾಟಗಾರ್ತಿ ಕಸ್ತೂರಿ ಶಂಕರ್ ಪ್ರಶ್ನಿಸಿದ್ದಾರೆ.
ರಜನಿಕಾಂತ್ ಆರೋಗ್ಯ ತಪಾಸಣೆಗಾಗಿ ಯುಎಸ್ ಹೋಗಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ರಜನಿಗೆ ಚಿಕಿತ್ಸೆ ನೀಡಲು ಸಮರ್ಥರಿಲ್ಲವೇ? ಅಮೆರಿಕಾದಲ್ಲಿ ತಪಾಸಣೆ ಮಾಡಿಸುವುದರ ಹಿಂದಿನ ಕಾರಣವೇನು ಎಂದು ಕಸ್ತೂರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ರಜನಿಕಾಂತ್‌ಗೆ ಏನಾಗಿದೆ ಎಂದು ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿರುವ ಕಸ್ತೂರಿ, ಜಯಲಲಿತಾ ಘಟನೆಯನ್ನು ರಜನಿ ಅಭಿಮಾನಿಗಳಿಗೆ ನೆನಪಿಸಿದ್ದಾರೆ. ಹಾಗಾದ್ರೆ, ಕಸ್ತೂರಿ ಶಂಕರ್ ಪೋಸ್ಟ್‌ನಲ್ಲಿ ಏನಿದೆ? ಮುಂದೆ ಓದಿ...

ನಿಷೇಧ ಇದ್ದರೂ ಯುಎಸ್ ಹೋಗಿದ್ದೇಕೆ?
''ಮೇ ತಿಂಗಳ ಪ್ರಾರಂಭದಿಂದಲೇ ಭಾರತದಿಂದ ನೇರವಾಗಿ ಅಮೆರಿಕಾ ಬರುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಯಾವುದೇ ವೈದ್ಯಕೀಯ ವಿನಾಯಿತಿಗಳನ್ನು ಸಹ ಕೊಟ್ಟಿಲ್ಲ. ಇಂತಹ ಸಮಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪ್ರಯಾಣಿಸುವುದೇ? ಹಠಾತ್ ರಾಜಕೀಯಿಂದ ಹಿಂದೆ ಸರಿದರು....ಈಗ ಇದು..... ರಜನಿ ಸರ್ ಸ್ಪಷ್ಟಪಡಿಸಿ...'' ಎಂದು ಕಸ್ತೂರಿ ಶಂಕರ್ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.

ಅಮೆರಿಕಾ ಜರ್ನಿ ಹಿಂದೆ ಅನುಮಾನ
''ಕೇವಲ ಎನ್‌ಆರ್‌ಐ ವ್ಯಕ್ತಿಗಳಿಗೆ, ಯುಎಸ್ ಮೂಲದವರಿಗೆ ಹಾಗೂ ಬೇರೆ ದೇಶಗಳಿಂದ ಹೊರಡುವ ಭಾರತೀಯರು ಮಾತ್ರ ಅಮೆರಿಕಾಗೆ ಹಿಂತಿರುಗಲು ಅನುಮತಿ ನೀಡಲಾಗಿದೆ. ಆದರೆ, ರಜನಿಕಾಂತ್ ಮಾತ್ರ ಭಾರತ ಸರ್ಕಾರದ ಅನುಮತಿ ಪಡೆದು ಯುಎಸ್‌ಗೆ ಹೋಗಿದ್ದಾರೆ. ಅವರ ಪ್ರಯಾಣದ ಹಿಂದೆ ಬಲವಾದ ಅನುಮಾನಗಳು ಮೂಡಿದೆ. ಇದರ ಬಗ್ಗೆ ಆಲೋಚಿಸುತ್ತಿದ್ದರೆ ಹುಚ್ಚು ಹಿಡಿಯುತ್ತಿದೆ'' ಎಂದು ಬರೆದುಕೊಂಡಿದ್ದಾರೆ ಕಸ್ತೂರಿ.

ಮೆಯೊ ಕ್ಲಿನಿಕ್ ಭೇಟಿ ಏಕೆ?
''ಆರೋಗ್ಯ ತಪಾಸಣೆಗಾಗಿ ರಜನಿಕಾಂತ್ ವಿದೇಶಕ್ಕೆ ಹೋಗಿದ್ದಾರೆ ಎಂದು ಬಹಳಷ್ಟು ಜನರು ಹೇಳುತ್ತಿದ್ದಾರೆ. ಭಾರತೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದಂತಹ ಸ್ಥಿತಿ ರಜನಿ ಅವರಿಗೇನಾಗಿದೆ? ಸಾಮಾನ್ಯವಾದ ಆರೋಗ್ಯ ತಪಾಸಣೆ ಎಂದು ಹೇಳ್ತಾರೆ. ಆದರೆ ಮೆಯೊ ಕ್ಲಿನಿಕ್ ಹೃದಯ ಸಂಬಂಧಿ ಕಾಯಿಲೆಗೆ ಖ್ಯಾತಿ. ನಾನು ಇದರ ಬಗ್ಗೆ ಹೆಚ್ಚು ಯೋಚಿಸಿದರೆ ನನ್ನಲ್ಲಿ ಬಹಳ ಕೆಟ್ಟ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ'' ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದು ಜೋಕ್ ಮಾಡುವ ಸಂದರ್ಭವಲ್ಲ
''ರಜನಿಕಾಂತ್‌ಗೆ ಯಾವ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಅಭಿಮಾನಿಗಳು ಹೇಳಬೇಡಿ. ಅದು ಬಹಳ ಆತಂಕಕಾರಿ ವಿಷಯ. ಇಂತಹ ಸಮಯದಲ್ಲಿ ಖ್ಯಾತ ವ್ಯಕ್ತಿಗಳು ಹೀಗೆ ನಡೆದುಕೊಂಡರೆ ಅದನ್ನು ಸಾರ್ವಜನಿಕರು ಹೇಗೆ ತೆಗೆದುಕೊಳ್ಳುತ್ತಾರೆ'' ಎಂದು ಕಸ್ತೂರಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ರಜನಿ ಜೊತೆ ಹೋರಾಡಿದ್ದೇನೆ
''ರಜನಿಕಾಂತ್ ಅವರ ವಿರುದ್ಧ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಬಹಳಷ್ಟು ಮಂದಿ ಕೋಪ ಮಾಡಿಕೊಳ್ಳಬಹುದು. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ನಾನು ಅವರನ್ನು ಬೆಂಬಲಿಸಿದ್ದೇನೆ, ರಾಘವೇಂದ್ರ ಮಂಟಪಕ್ಕಾಗಿ ಹೋರಾಡಿದ್ದೇವೆ, ಇದನ್ನೆಲ್ಲಾ ಅಭಿಮಾನಿಗಳು ನೆನಪಿಟ್ಟುಕೊಳ್ಳಬೇಕು'' ಎಂದು ಕಸ್ತೂರಿ ಅಭಿಮಾನಿಗಳಿಗೆ ಮನವರಿಕೆ ಮಾಡಿದ್ದಾರೆ.
Recommended Video

ಜಯಲಲಿತಾ ಘಟನೆ ನೆನಪಿಸಿದ ನಟಿ
''ಎಲ್ಲರಂತೆ ರಜನಿಕಾಂತ್ ಅವರ ಆರೋಗ್ಯವಾಗಿರಬೇಕು ಎಂದು ನಾನು ಬಯಸುತ್ತೇನೆ. ಆದರೆ ಈ ಹಿಂದೆ ನಡೆದ ಕೆಲವು ಘಟನೆಗಳನ್ನು ಅಭಿಮಾನಿಗಳು ನೆನಪಿಸಿಕೊಳ್ಳಬೇಕು. ಈ ಹಿಂದೆ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅವರಿಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಬಯಸಿದರು. ಈಗ ರಜನಿಕಾಂತ್‌ಗೆ ಏನಾಗಿದೆ ಎಂದು ತಿಳಿಯ ಇಷ್ಟಪಡುತ್ತೇನೆ. ರಜನಿ ಸದಾ ಆರೋಗ್ಯವಾಗಿರಬೇಕು'' ಎಂದು ಕಸ್ತೂರಿ ಶಂಕರ್ ಪೋಸ್ಟ್ ಮಾಡಿ ಪ್ರಶ್ನಿಸಿದ್ದಾರೆ.


Click it and Unblock the Notifications











