ಲಾಕ್ ಡೌನ್ ನಲ್ಲಿ ನಾಟಿ ಮಾಡುತ್ತಿರುವ ನಟಿ ಕೀರ್ತಿ: ವಿಡಿಯೋ ವೈರಲ್

ಲಾಕ್ ಡೌನ್ ಸಮಯವನ್ನು ಅನೇಕರು ವಿವಿಧ ರೀತಿಯಲ್ಲಿ ಕಳೆಯುತ್ತಿದ್ದಾರೆ. ಅದರಲ್ಲೂ ಸೆಲೆಟ್ರಿಬಿಗಳ ಲಾಕ್ ಡೌನ್ ಹೇಗಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಕೆಲವರು ಈ ಸಮಯವನ್ನು ಕುಟುಂಬದ ಜೊತೆ ಹಾಯಾಗಿ ಕಳೆಯುತ್ತಿದ್ದಾರೆ. ಇನ್ನೂ ಕೆಲವರು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Recommended Video

ಬುದ್ಧ ಪೂರ್ಣಿಮೆ ದಿನ ನಟ ಚೇತನ್ ಎಂತಾ ಸುಂದರ ಮಾತನ್ನು ಹೇಳ್ತಾರೆ ಕೇಳಿ | Chethan | Buddha Poornima

ಅನೇಕರು ಸಾಮಾಜಿಕ ಜಾಲತಾಣಲ್ಲಿ ಆಕ್ವೀಟ್ ಆಗಿದ್ದು, ಅಭಿಮಾನಿಗಳ ಜೊತೆ ಆಗಾಗ ಮಾತನಾಡುತ್ತಿರುತ್ತಾರೆ. ಆದರೆ ತಮಿಳು ನಟಿ ಕೀರ್ತಿ ಪಾಂಡಿಯನ್ ಎಲ್ಲರಿಗಿಂತ ವಿಭಿನ್ನವಾದ ಕೆಲಸ ಮಾಡುತ್ತಿದ್ದಾರೆ. ಹೌದು, ಲಾಕ್ ಡೌನ್ ಸಮಯದಲ್ಲಿ ಕೀರ್ತಿ ಕೃಷಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಕೀರ್ತಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಈಗ ನಾಟಿ ಮಾಡುತ್ತಿದ್ದಾರೆ. ಮುಂದೆ ಓದಿ..,

ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡಿದ್ದ ನಟಿ

ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡಿದ್ದ ನಟಿ

ಇತ್ತೀಚಿಗೆ ನಟಿ ಕೀರ್ತಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಲಾಕ್ ಡೌನ್ ಅವಧಿಯನ್ನು ಹೊಲದಲ್ಲಿ ಕೆಲಸ ಮಾಡುತ್ತ ಎಂಜಾಯ್ ಮಾಡುತ್ತಿರುವ ನಟಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಅದೇ ಹೊಲದಲ್ಲಿ ನಾಟಿ ಮಾಡುತ್ತಿದ್ದಾರೆ ಕೀರ್ತಿ

ನಟಿ ಕೀರ್ತಿ ಉಳುಮೆ ಮಾಡಿದ್ದ ಹೊಲದಲ್ಲಿ ಈಗ ನಾಟಿ ಮಾಡುತ್ತಿದ್ದರೆ. ತಮಿಳುನಾಡಿನ ತಿರುನೆಲ್ಲೇಲಿಯಲ್ಲಿರುವ ಕೀರ್ತಿ ಅವರ ಸ್ವಂತ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಕೀರ್ತಿ ಸಸಿ ನಡುತ್ತಿರುವ ವಿಡೀಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅತ್ಯಂತ ಕೃತಜ್ಞತೆಯ ಕೆಲಸಗಳಲ್ಲಿ ಒಂದಾಗಿದೆ

"ನಾನು ಮಾಡಿದ ಅತ್ಯಂತ ಕೃತಜ್ಞತೆಯ ಕೆಲಸಗಳಲ್ಲಿ ಇದು ಒಂದಾಗಿದೆ. ಈ ಸಮಯದಲ್ಲಿ ಕೃಷಿ ಮಾಡುವುದನ್ನು ಕಲಿಯುತ್ತಿದ್ದೀನಿ. ಇದಕ್ಕಾಗಿ ದ್ರಿಯಾ ಮಗವನ್ನು ಕರೆದುಕೊಂಡು ಬರಬೇಕಾಯಿತು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಪ್ಪ ಮಾಡಿರುವ ವಿಡಿಯೋ

ಅಪ್ಪ ಮಾಡಿರುವ ವಿಡಿಯೋ

ಕೀರ್ತಿ ಪಾಂಡಿಯನ್ ನಾಟಿ ಮಾಡುತ್ತಿರುವ ವಿಡಿಯೋವನ್ನು ಅವರ ತಂದೆ ಅರುಣ್ ಪಾಂಡಿಯನ್ ಮಾಡಿರುವುದಾಗಿ ಹೇಳಿದ್ದಾರೆ. "ಇದು ನಮ್ಮ ಮನೆಯ ಆಸ್ತಿ. ಸಂಪರ್ಕ ತಡೆಯನ್ನು ಹೊಂದಿದೆ. ಇದು ಸಾರ್ವಜನಿಕ ಪ್ರದೇಶವಲ್ಲ" ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೀರ್ತಿ ಪಾಂಡಿಯನ್ ಬಗ್ಗೆ

ಕೀರ್ತಿ ಪಾಂಡಿಯನ್ ಬಗ್ಗೆ

ನಟಿ ಕೀರ್ತಿ ಪಾಂಡಿಯನ್ ತಮಿಳು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತಂದೆ ಅರುಣ್ ಪಾಂಡಿಯನ್ ರಾಜಕಾರಣಿ, ನಿರ್ಮಾಪಕ ಮತ್ತು ನಟರು. ತಮಿಳು ಮಾತ್ರ ವಲ್ಲದೆ ತೆಲುಗು ಮತ್ತು ಕನ್ನಡ ಸಿನಿಮಾದಲ್ಲಿಯೂ ಅರುಣ್ ಅಭಿನಯಿಸಿದ್ದಾರೆ. ಮಗಳು ಕೀರ್ತಿಗೆ ಕೃಷಿ ಅಂದರೆ ತುಂಬ ಇಷ್ಟವಂತೆ. ಹಾಗಾಗಿ ಕೃಷಿ ಮಾಡುತ್ತಿದ್ದಾರೆ.

ಕೀರ್ತಿ ಸಿನಿಮಾಗಳು

ಕೀರ್ತಿ ಸಿನಿಮಾಗಳು

ಕೀರ್ತಿ ಕಳೆದ ವರ್ಷ ತುಂಬ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದ್ದಾರೆ. ಇನ್ನು ತಮಿಳು ವೆಬ್ ಸಿರೀಸ್ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮಲಯಾಳಂನ ತಮಿಳು ರಿಮೇಕ್ ಹೆಲನ್ ಸಿನಿಮಾದಲ್ಲೂ ಕೀರ್ತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಅಭಿನಯಿಸುವ ಮೊದಲು ಕೀರ್ತಿ ಅಪ್ಪನ ನಿರ್ಮಾಣ ಸಂಸ್ಥೆ ನೋಡಿಕೊಳ್ಳುತ್ತಿದ್ದರು.

More from Filmibeat

English summary
Actress Keerthi Pandian busy with farming amid lockdown. Keerthi Pandian learnt how to plant saplings in farm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X