ನಟಿ ಕೀರ್ತಿ ಸುರೇಶ್ ಮದುವೆ ಸುದ್ದಿಗೆ ರೆಕ್ಕೆ-ಪುಕ್ಕ
ನಟಿ ಕೀರ್ತಿ ಸುರೇಶ್ ಮದುವೆ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಕೀರ್ತಿ ಸುರೇಶ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಡಲು ಹೊಸದೊಂದು ಕಾರಣ ಸಿಕ್ಕಿದೆ.
Recommended Video
ಇತ್ತೀಚಿನ ದಿನಗಳಲ್ಲಿ ಕೀರ್ತಿ ಸುರೇಶ್ ಮದುವೆ ಕುರಿತು ಹರಿದಾಡಿದಷ್ಟು ಸುದ್ದಿಗಳು ಇನ್ನಾವ ನಟಿಯ ಮದುವೆಯ ಕುರಿತಾಗಿಯೂ ಹರಿದಾಡಿಲ್ಲ.
ತೆಲುಗು-ತಮಿಳಿನಲ್ಲಿ ಪ್ರಸ್ತುತ ಸಖತ್ ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ಕೀರ್ತಿ ಅವರು, ವೃತ್ತಿ ಜೀವನದ ಉಚ್ರಾಯ ಸ್ಥಿತಿಯಲ್ಲಿದ್ದಾಗಲೇ ಮದುವೆ ಬಂಧಕ್ಕೆ ಒಳಗಾಗುತ್ತಾರೆಯೇ ಎಬ ಅನುಮಾನಗಳು ಸಹ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಬ್ಯುಸಿನೆಸ್‌ಮನ್ ಅನ್ನು ಮದುವೆ ಆಗಲಿದ್ದಾರೆ ಕೀರ್ತಿ?
ನಟಿ ಕೀರ್ತಿ ಸುರೇಶ್ ಖ್ಯಾತ ಬ್ಯುಸಿನೆಸ್‌ಮನ್ ಅನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಈ ಮೊದಲೇ ಹರಡಿತ್ತು. ಕೀರ್ತಿ ಸುರೇಶ್ ಅವರ ತಂದೆ ಮಲಯಾಳಂ ನಿರ್ಮಾಪಕ ಸುರೇಶ್ ಅವರೇ ಈ ವರನನ್ನು ಹುಡುಕಿದ್ದಾರೆ ಎನ್ನಲಾಗಿತ್ತು.

ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಕೀರ್ತಿ
ಇದೀಗ ಈ ಸುದ್ದಿಗೆ ಪುಷ್ಠಿ ಬರುವಂತೆ ಮತ್ತೊಂದು ಸುದ್ದಿ ಹರಡಿದ್ದು. ಕೀರ್ತಿ ಸುರೇಶ್ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ. ಮದುವೆ ಆಗುತ್ತಿರುವ ಕಾರಣ ನಿರ್ದಿಷ್ಟ ಸಮಯದವರೆಗೆ ಕೀರ್ತಿ ಸುರೇಶ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಮದುವೆಗಾಗಿ ಚಿತ್ರೀಕರಣ ಮುಂದೂಡಿಕೆ?
ಹೊಸ ಸಿನಿಮಾಗಳ ಆಫರ್ ಅನ್ನು ಮುಂದೂಡುತ್ತಿರುವ ಕೀರ್ತಿ, ಇಂತಿಷ್ಟು ತಿಂಗಳ ನಂತರವಾದರಷ್ಟೆ ಸಿನಿಮಾಗಳಲ್ಲಿ ನಟಿಸುವೆ ಎಂದು ಹೇಳುತ್ತಿದ್ದಾರಂತೆ. ಮದುವೆ ಮುಗಿಸಿಕೊಂಡು ನಟನೆಗೆ ಮರಳುವ ಕಾರಣಕ್ಕೆ ಕೀರ್ತಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಎರಡು ವರ್ಷ ಸಖತ್ ಬ್ಯುಸಿ ಇದ್ದಾರೆ ಕೀರ್ತಿ
ಅಂಗಾತೆ, ಸರ್ಕಾರು ವಾರಿ ಪಾಟ ಸಿನಿಮಾಗಳಲ್ಲಿ ಕೀರ್ತಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಮರಕ್ಕರ್, ರಂಗ್ ದೇ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಐನಾ ಇಷ್ಟಂ ನೂವು ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಮಿಸ್ ಇಂಡಿಯಾ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಒಟ್ಟಿನಲ್ಲಿ ಈ ವರ್ಷ, ಮುಂದಿನ ವರ್ಷ ಸಖತ್ ಬ್ಯುಸಿ ಇದ್ದಾರೆ ಕೀರ್ತಿ.


Click it and Unblock the Notifications











