ಒಂದೇ ವಾರದಲ್ಲಿ ಎರಡು ಬಾರಿ ಮದುವೆಯಾದ ಕೀರ್ತಿ ಸುರೇಶ್, ಲಿಪ್ ಲಾಕ್ ಫೋಟೊ ವೈರಲ್...!
ಮೊನ್ನೆಯಷ್ಟೇ ಹಿಂದೂ ಸಂಪ್ರದಾಯದಂತೆ ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರ ಜೊತೆ ಸಪ್ತಪದಿ ತುಳಿದಿದ್ದ ಕೀರ್ತಿ ಸುರೇಶ್, ನಿನ್ನೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮದುವೆಯ ನಂತರ ತಮ್ಮ ಪತಿ ಆಂಟೋನಿ ತಟ್ಟಿಲ್ ಜೊತೆ ಲಿಪ್ ಲಾಕ್ ಮಾಡಿದ್ದಾರೆ. ಸದ್ಯ ಕೀರ್ತಿ ಸುರೇಶ್ ಅವರ ಈ ಚುಂಬನದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತ್ತ ಪತಿಗೆ ಕೀರ್ತಿ ಸುರೇಶ್ ಕಿಸ್ ಮಾಡಿದ್ದರೆ ಇತ್ತ ಪಡ್ಡೆಗಳ ಹೃದಯ ನುಚ್ಚು ನೂರಾಗಿದೆ.
ಇನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೋನಿ ತಟ್ಟಿಲ್ ವೈಟ್ & ವೈಟ್ ಕಾಸ್ಟೂಮ್‌ನಲ್ಲಿ ಮಿಂಚಿದರು. ಕೀರ್ತಿ ಸುರೇಶ್ ಅವರಂತು ಥೇಟ್ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದರು. ನೆಕ್ ಡಿಸೈನ್ ಇರುವ ವೈಟ್ ಗೌನ್‌ನಲ್ಲಿ ಕಣ್ಮನ ಸೆಳೆಯುತ್ತಿದ್ದರು. ಮದುವೆಯ ನಂತರ ತಮ್ಮ ಆಪ್ತ ಸ್ನೇಹಿತರ ಜೊತೆ ಕುಟುಂಬ ವರ್ಗದವರ ಜೊತೆ ಪಾರ್ಟಿ ಮಾಡಿ ಸಂಭ್ರಮಿಸಿದರು. ತಮ್ಮ ಪತಿ ಆಂಟೋನಿ ತಟ್ಟಿಲ್ ಜೊತೆ ಸಖತ್ತಾಗಿ ಹೆಜ್ಜೆಯನ್ನು ಹಾಕಿದರು.

"ForTheLoveOfNyke" ಎಂಬ ಅಡಿಬರಹದ ಜೊತೆ ಕೀರ್ತಿ ಸುರೇಶ್ ಸದ್ಯ ತಮ್ಮ ಈ ಎರಡನೇ ಮದುವೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. 14 ಗಂಟೆಯಲ್ಲಿ 1,464,271 ಅಧಿಕ ಲೈಕ್‌ಗಳನ್ನು ಪಡೆದಿವೆ. ಚಿತ್ರರಂಗದ ಸ್ನೇಹಿತರಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಇನ್ನುಳಿದಂತೆ ಕೀರ್ತಿ ಸುರೇಶ್ ಡಿಸೆಂಬರ್ 12ರಂದು ಗೋವಾದಲ್ಲಿ ದಕ್ಷಿಣ ಭಾರತದ ಸಾಂಪ್ರದಾಯದಂತೆ ವಿವಾಹವಾಗಿದ್ದರು. ಆಗ ಕೂಡ ವಿವಾಹ ಸಮಾರಂಭದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.ಇನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್ ಅನಿತಾ ಡೋಂಗ್ರೆ ಕೀರ್ತಿ ಸುರೇಶ್ ಅವರ ಮದುವೆಯ ವಸ್ತ್ರಗಳನ್ನು ವಿನ್ಯಾಸ ಮಾಡಿದ್ದರು. ಹಿಂದೂ ಸಂಪ್ರದಾಯದಂತೆ ನಡೆದ ಈ ಮದ್ವೆಯಲ್ಲಿ ಕೀರ್ತಿ ಸುರೇಶ್ ಹಳದಿ ಮತ್ತು ಹಸಿರು ಸೀರೆಯಲ್ಲಿ ಮಿಂಚಿದ್ದರು. ಹಸಿರು ಅಂಚುಗಳೊಂದಿಗೆ ಹಳದಿ ಮತ್ತು ಚಿನ್ನದ ಝರಿ ದಾರದ ಕಸೂತಿ ಸೀರೆಯ ಮೆರಗನ್ನು ಹೆಚ್ಚಿಸಿತ್ತು.
ಅಂದ್ಹಾಗೇ ದಕ್ಷಿಣ ಭಾರತೀಯ ಚಿತ್ರರಂಗದ ಮಹಾನಟಿ ಎಂದೆ ಕರೆಯಲ್ಪಡುವ ಕೀರ್ತಿ ಸುರೇಶ್ ಅವರ ಪತಿ ಆಂಟೋನಿ ತಟ್ಟಿಲ್ ಮೂಲತ: ಕೇರಳದ ಕೊಚ್ಚಿಯವರು. ಆಂಟೋನಿ ದುಬೈನಲ್ಲಿ ತಮ್ಮದೇ ಸ್ವಂತ ಉದ್ಯಮವನ್ನು ಹೊಂದಿದ್ದಾರೆ. ಕೀರ್ತಿ ಸುರೇಶ್ ಹಾಗೂ ಆಂಟೋನಿ ಇಬ್ಬರೂ 15 ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದರು. ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಸಪೋರ್ಟ್ ಮಾಡಿಕೊಂಡು ಬಂದಿದ್ದರು. ಕೊನೆಗೂ ಇಬ್ಬರೂ ಜೊತೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿ, ಡಿಸೆಂಬರ್ ಹನ್ನೆರಡರಂದು ಗೋವಾದಲ್ಲಿ ಸಪ್ತಪದಿಯನ್ನು ತುಳಿದರು.
ಒಟ್ನಲ್ಲಿ ಸದ್ಯಕ್ಕೆ ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಆಂಟೋನಿ ತಟ್ಟಿಲ್ ಅವರ ಜೊತೆ ಮದುವೆಯಾಗಿದ್ದಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗುವ ಮೂಲಕ ಹೊಸ ಬದುಕಿಗೆ ಮುನ್ನುಡಿಯನ್ನು ಬರೆದಿದ್ದಾರೆ. ತಮ್ಮ ಮದುವೆಯ ಫೋಟೊಗಳನ್ನು ಕೀರ್ತಿ ಸುರೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಫೋಟೊಗಳು ವೈರಲ್ ಆಗಿವೆ. ಇನ್ನು ಮದುವೆಯಾದ ನಂತರ ಸಾಮಾನ್ಯವಾಗಿ ನಾಯಕಿಯರು ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಕೀರ್ತಿ ಸುರೇಶ್ ಚಿತ್ರರಂಗದಲ್ಲಿ ಮುಂದುವರೆಯುತ್ತಾರಾ ಅಥವಾ ಬ್ರೇಕ್ ಪಡೆದು ಮನೆ-ಗಂಡ-ಸಂಸಾರ ಎಂದು ಬ್ಯುಸಿಯಾಗ್ತಾರಾ ಅನ್ನುವ ಕುತೂಹಲ ಅನೇಕರಲ್ಲಿದೆ.


Click it and Unblock the Notifications











