For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಉದ್ಯಮಿ ಜೊತೆ ಮದುವೆ ವದಂತಿ: ಗರಂ ಆದ ಕೀರ್ತಿ ಸುರೇಶ್

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ, ಮುದ್ದು ಮುಖದ ಚೆಲುವೆ ಕೀರ್ತಿ ಸುರೇಶ್ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೀರ್ತಿ ಮದುವೆ ವಿಚಾರ ಕೇಳಿ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಆಗಿದೆ. ಅದ್ಭುತ ಅಭಿನಯದ ಜೊತೆಗೆ ಸೌಂದರ್ಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ರಾಷ್ಟ್ರಪ್ರಶಸ್ತಿ ವಿಜೇತೆ 'ಮಹಾನಟಿ' ಸುಂದರಿ ಇಷ್ಟು ಬೇಗ ಮದುವೆ ಆಗುವ ನಿರ್ಧಾರ ಮಾಡಿದ್ದಾರಾ ಎಂದು ಅನೇಕರಿಗೆ ಅಚ್ಚರಿ ಮೂಡಿಸಿದೆ.

  Anushka Shetty Speaks On Casting Couch In Tollywood | Casting Couch | Me Too | Oneindia kannada

  ಲಕ್ಷಾಂತರ ಯುವಕರ ಕನಸಿನ ರಾಣಿಯಾಗಿರುವ ಕೀರ್ತಿ ಮದುವೆ ವಿಚಾರ ಕೊರೊನಾ ವೈರಸ್ ಹಾವಳಿಯ ನಡುವೆಯು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದೆ. ಅಂದ್ಹಾಗೆ ಈ ಬಗ್ಗೆ ಈಗ ಕೀರ್ತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಆಧಾರ ರಹಿತ ವದಂತಿಯ ವಿರುದ್ಧ ಫುಲ್ ಗರಂ ಆಗಿದ್ದಾರೆ. 'ನನ್ನ ಮದುವೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಬದಲು ಕೊರೊನಾ ವಿರುದ್ಧ ಹೋರಾಡಿ' ಎಂದಿದ್ದಾರೆ. ಮುಂದೆ ಓದಿ..

  ಹಸೆಮಣೆ ಏರಲು ಸಜ್ಜಾದ ನಟಿ ಕೀರ್ತಿ ಸುರೇಶ್: ಹುಡುಗ ಯಾರು?ಹಸೆಮಣೆ ಏರಲು ಸಜ್ಜಾದ ನಟಿ ಕೀರ್ತಿ ಸುರೇಶ್: ಹುಡುಗ ಯಾರು?

  ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಕೀರ್ತಿ

  ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಕೀರ್ತಿ

  ಇತ್ತೀಚಿಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಕೀರ್ತಿ ಸುರೇಶ್ ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೀರ್ತಿ

  "ಈ ಸುದ್ದಿ ಕೇಳಿ ನನಗೆ ಅಚ್ಚರಿಯಾಗಿದೆ. ಈ ಸುದ್ದಿ ಹೇಗೆ ಹರಿದಾಡಲು ಪ್ರಾರಂಭವಾಯಿತು ಎನ್ನುವುದು ನನಗೆ ಗೊತ್ತಿಲ್ಲ. ಸದ್ಯಕ್ಕಂತೂ ಮದುವೆ ಆಗುವ ಬಗ್ಗೆ ಯೋಜನೆ ಇಲ್ಲ. ಶೀಘ್ರದಲ್ಲೇ ಮದುವೆ ಆಗಲ್ಲ" ಎಂದು ಹೇಳಿದ್ದಾರೆ.

  ತಾಯಿ ನಟಿಸಿದ್ದ ಸಿನಿಮಾದ ರಿಮೇಕ್ ನಲ್ಲಿ ನಟಿ ಕೀರ್ತಿ ಸುರೇಶ್?ತಾಯಿ ನಟಿಸಿದ್ದ ಸಿನಿಮಾದ ರಿಮೇಕ್ ನಲ್ಲಿ ನಟಿ ಕೀರ್ತಿ ಸುರೇಶ್?

  ಸುಳ್ಳು ಸುದ್ದಿ ಹಬ್ಬಿಸುವುದಕ್ಕಿಂತ ಕೊರೊನಾ ವಿರುದ್ಧ ಹೋರಾಡಿ

  ಸುಳ್ಳು ಸುದ್ದಿ ಹಬ್ಬಿಸುವುದಕ್ಕಿಂತ ಕೊರೊನಾ ವಿರುದ್ಧ ಹೋರಾಡಿ

  ಕೀರ್ತಿ ಸುರೇಶ್ ವೈಯಕ್ತಿರ ಜೀವನದ ಬಗ್ಗೆ ವದಂತಿಗಳನ್ನು ಹರಡಿಸುವುದಕ್ಕಿಂತ ಪ್ರಮುಖ ವಿಚಾರಗಳ ಗಮನ ಕೊಡಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಚರ್ಚೆ ಮಾಡಲು ಮಹತ್ವದ ಸಮಸ್ಯೆಗಳಿವೆ. ಇಂತಹ ಆಧಾರ ರಹಿತ ವದಂತಿಗಳನ್ನು ಹರಡಿವುದಕ್ಕಿಂತ ಹೆಚ್ಚಾಗಿ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವತ್ತ ಗಮನ ಹರಿಸಬೇಕಿದೆ" ಎಂದು ಹೇಳಿದ್ದಾರೆ.

  ಉದ್ಯಮಿ ಜೊತೆ ಮದುವೆ ವದಂತಿ

  ಉದ್ಯಮಿ ಜೊತೆ ಮದುವೆ ವದಂತಿ

  ಕೀರ್ತಿ ಸುರೇಶ್ ಖ್ಯಾತ ಉದ್ಯಮಿ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಆ ಉದ್ಯಮಿ ಯಾರು ಎನ್ನುವುದು ಬಹಿರಂಗ ವಾಗಿರಲಿಲ್ಲ. ಕೀರ್ತಿ ಸುರೇಶ್ ಅರೇಂಜ್ ಮ್ಯಾರೇಜ್ ಆಗಲಿದ್ದು, ಪೋಷಕರು ಹುಡುಕಿದ ಹುಡುಗನನ್ನೇ ಕೀರ್ತಿ ಮದುವೆ ಆಗುತ್ತಿದ್ದಾರೆ, ಈಗಾಗಲೆ ಕೀರ್ತಿ ಅವರ ತಂದೆ ಸುರೇಶ್ ಕುಮಾರ್ ಮಗಳಿಗೆ ಹುಡುಗನನ್ನು ಹುಡುಕಿದ್ದಾರೆ, ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  ಕೀರ್ತಿ ಸುರೇಶ್ ಬಳಿ ಇರುವ ಸಿನಿಮಾಗಳು

  ಕೀರ್ತಿ ಸುರೇಶ್ ಬಳಿ ಇರುವ ಸಿನಿಮಾಗಳು

  ಕೀರ್ತಿ ಸುರೇಶ್ ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಅನ್ನಾತೆ' ಸಿನಿಮಾದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಜೊತೆಗೆ ಸಾಕಷ್ಟು ಸಿನಿಮಾನಿಗಳು ರಿಲೀಸ್ ಗೆ ರೆಡಿಯಾಗಿದೆ. ಮಿಸ್ ಇಂಡಿಯಾ, ಮರಕ್ಕರ್, ಗುಡ್ ಲಕ್ ಸಖಿ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ರಂಗ್ ದೆ ಮತ್ತು ಅನ್ನಾತೆ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ.

  Read more about: tamil marriage kollywood
  English summary
  South Indian famous Actress Keerthy Suresh reaction about her marriage rumors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X