For Quick Alerts
  ALLOW NOTIFICATIONS  
  For Daily Alerts

  ವಿಜಯ್‌ಗೆ ದೀಪಿಕಾ ಜೊತೆ ನಟಿಸಿ ಎಂದಿದ್ದ ಕೀರ್ತಿ ಸುರೇಶ್: ದಳಪತಿ ಪ್ರತಿಕ್ರಿಯೆ ಹೀಗಿತ್ತು

  |

  ತಮಿಳಿನ ಖ್ಯಾತ ನಟ ವಿಜಯ್ ದಳಪತಿ ಇತ್ತೀಚಿಗಷ್ಟೆ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟಿರುವ ನಟ ವಿಜಯ್ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಬೀಸ್ಟ್ ಸಿನಿಮಾದ ಪೋಸ್ಟರ್ ಅನ್ನು ಗಿಫ್ಟ್ ಆಗಿ ನೀಡಲಾಗಿದೆ.

  ವಿಜಯ್ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಪ್ರೀತಿಯ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು. ಜೊತೆಗೆ ದಳಪತಿ ವಿಜಯ್ ಹುಟ್ಟುಹಬ್ಬದ ವಿಶೇಷವಾಗಿ ದಿ ರೂಟ್ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿ ಟ್ವಿಟ್ಟರ್‌ನಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು.

  ಇದರಲ್ಲಿ ನಿರ್ದೇಶಕ ಲೋಕೇಶ್ ಕನಗನಾಜ್, ಅನಿರುದ್ಧ ರವಿಚಂದ್ರನ್, ಮಾಳವಿಕಾ ಮೋಹನ್, ಕೀರ್ತಿ ಸುರೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ಈವೆಂಟ್‌ನಲ್ಲಿ ಕೀರ್ತಿ ಸುರೇಶ್ ಹಂಚಿಕೊಂಡ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಮುಂದೆ ಓದಿ...

  ಅತೀ ದೊಡ್ಡ ಟ್ವಿಟ್ಟರ್ ಸ್ಪೇಸ್ ಈವೆಂಟ್

  ಅತೀ ದೊಡ್ಡ ಟ್ವಿಟ್ಟರ್ ಸ್ಪೇಸ್ ಈವೆಂಟ್

  ವಿಜಯ್ ಹುಟ್ಟುಹಬ್ಬದ ದಿನ ನಡೆಸಿದ ಈವೆಂಟ್ ಭಾರತದ ಅತೀ ದೊಡ್ಡ ಟ್ವಿಟ್ಟರ್ ಸ್ಪೇಸ್ ಈವೆಂಟ್ ಆಗಿ ಹೊರಹೊಮ್ಮಿದೆ. ಈ ಕಾರ್ಯಕ್ರಮದಲ್ಲಿ ನಟ ವಿಜಯ್ ಜೊತೆ ವಿಶೇಷ ನೆನಪವನ್ನು ಹಂಚಿಕೊಳ್ಳುವುದಾಗಿತ್ತು. ದಳಪತಿ ಜೊತೆ ಕಳೆದ ಸ್ಮರಣೀಯ ಕ್ಷಣವನ್ನು ಹಂಚಿಕೊಂಡವರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು.

  ದೀಪಿಕಾ ಜೊತೆ ವಿಜಯ್ ನಟಿಸುವ ಆಸೆ ವ್ಯಕ್ತಪಡಿಸಿದ್ದೆ

  ದೀಪಿಕಾ ಜೊತೆ ವಿಜಯ್ ನಟಿಸುವ ಆಸೆ ವ್ಯಕ್ತಪಡಿಸಿದ್ದೆ

  ಕೀರ್ತಿ, ವಿಜಯ್ ಅವರ ಬಳಿ ದೀಪಿಕಾ ಪಡುಕೋಣೆ ಜೊತೆ ನಟಿಸಿ ಎಂದು ಹೇಳಿದ ಕ್ಷಣವನ್ನು ಮೆಲುಕು ಹಾಕಿದ್ರು. ಸರ್ಕಾರ್ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್, ವಿಜಯ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಂದ ಈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ವಿಜಯ್‌ಗೆ ಹೇಳಿದ್ದ ಮಾತನ್ನು ಕೀರ್ತಿ ಸುರೇಶ್ ಬಹಿರಂಗ ಪಡಿಸಿದರು, "ಅವರು(ವಿಜಯ್) ದೀಪಿಕಾ ಪಡುಕೋಣೆ ಜೊತೆ ನಟಿಸಬೇಕು ಎನ್ನುವ ನನ್ನ ಬಯಕೆಯನ್ನು ವ್ಯಕ್ತಪಡಿಸಿದ್ದೆ" ಎಂದು ಬಹಿರಂಗ ಪಡಿಸಿದ್ದರು.

  ವಿಜಯ್ ಪ್ರಕ್ರಿಯೆ ಹೀಗಿತ್ತು

  ವಿಜಯ್ ಪ್ರಕ್ರಿಯೆ ಹೀಗಿತ್ತು

  ಕೀರ್ತಿ ಮಾತಿಗೆ ವಿಜಯ್ ನೀಡಿದ ಪ್ರತಿಕ್ರಿಯೆ ಅಚ್ಚರಿ ಗೊಳಿಸುವಂತೆ ಮಾಡುತ್ತೆ. "ನನ್ನ ಸಿನಿಮಾಗಳಿಗೆ ನಾಯಕಿ ಆಯ್ಕೆ ಪ್ರಕ್ರಿಯೆ ದೀಪಿಕಾ ಪಡುಕೋಣೆಯಿಂದ ಪ್ರಾರಂಭವಾಗಿ ಕೀರ್ತಿ ಸುರೇಶ್ ಅವರೊಂದಿಗೆ ಕೊನೆಗೊಳ್ಳುತ್ತದೆ" ಎಂದು ವಿಜಯ್ ಉತ್ತರಿಸಿದ್ದರು. ಈ ಘಟನೆಯನ್ನು ಕೀರ್ತಿ ಸಂವಾದದಲ್ಲಿ ಹಂಚಿಕೊಂಡಿದ್ದಾರೆ.

  June 28ಕ್ಕೆ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಲಾವಿದರ ಸಂಘ!! | Filmibeat Kannada
  ವಿಜಯ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿರುವ ಕೀರ್ತಿ

  ವಿಜಯ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿರುವ ಕೀರ್ತಿ

  ಅಂದಹಾಗೆ ಕೀರ್ತಿ ಸುರೇಶ್ ದಳಪತಿ ವಿಜಯ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಬಂದ ಭೈರವ ಮತ್ತು 2018ರಲ್ಲಿ ಬಂದ ಸರ್ಕಾರ್ ಚಿತ್ರಗಳಲ್ಲಿ ಕೀರ್ತಿ ನಾಯಕಿಯಾಗಿ ಮಿಂಚಿದ್ದಾರೆ. ಈ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ ಚಿತ್ರಗಳಾಗಿವೆ.

  English summary
  Actress Keerthy Suresh expressed her interest that Vijay Should act alongside Deepika Padukone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X