For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಜೊತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಸ್ಟಾರ್ ನಟಿ

  |

  ನಟಸಾರ್ವಭೌಮ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಏಪ್ರಿಲ್ 24 ರಂದು ಆಚರಿಸಲಾಗಿದೆ. ಕೋಟ್ಯಾಂತರ ಅಭಿಮಾನಿಗಳು ಅಣ್ಣಾವ್ರ ಜನುಮದಿನವನ್ನು ಕೊಂಡಾಡಿದ್ದಾರೆ.

  ಡಾ ರಾಜ್ ಹುಟ್ಟುಹಬ್ಬದ ವಿಶೇಷವಾಗಿ ಸೌತ್ ಇಂಡಿಯಾದ ಸ್ಟಾರ್ ನಟಿ ಕೀರ್ತಿ ಸುರೇಶ್ ಅಣ್ಣಾವ್ರ ಜೊತೆಗಿನ ತಮ್ಮ ಬಾಲ್ಯದ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

  ಅಣ್ಣಾವ್ರ ಮನೆ ಹುಡುಕಿಕೊಂಡು ಬಂದ ಖ್ಯಾತ ನಟಿ ಕೀರ್ತಿ ಸುರೇಶ್ಅಣ್ಣಾವ್ರ ಮನೆ ಹುಡುಕಿಕೊಂಡು ಬಂದ ಖ್ಯಾತ ನಟಿ ಕೀರ್ತಿ ಸುರೇಶ್

  ಸಹೋದರಿ ರೇವತಿ ಸುರೇಶ್ ಮತ್ತು ಕೀರ್ತಿ ಸುರೇಶ್ ಇಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲಿ ಅಣ್ಣಾವ್ರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಸುರೇಶ್ ಏಪ್ರಿಲ್ 24 ರಂದು ಶೇರ್ ಮಾಡಿ, ರಾಜ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

  ಅಂದ್ಹಾಗೆ, ಕೀರ್ತಿ ಸುರೇಶ್ ಅವರು ಕಳೆದ ವರ್ಷ ಅಣ್ಣಾವ್ರ ಮನೆಗೆ ಭೇಟಿ ನೀಡಿದ್ದರು. ಸದಾಶಿವ ನಗರದಲ್ಲಿರುವ ರಾಘವೇಂದ್ರ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದ ಕೀರ್ತಿ ಸುರೇಶ್, ರಾಘಣ್ಣ ದಂಪತಿಯನ್ನು ಭೇಟಿ ಮಾಡಿದ್ದರು.

  ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಡಾ ರಾಜ್ ಕುಮಾರ್ ಕುಟುಂಬ ಅಂದ್ರೆ ಕೀರ್ತಿ ಸುರೇಶ್ ಅವರ ಕುಟುಂಬಕ್ಕೆ ಮೊದಲಿನಿಂದಲೂ ಅಭಿಮಾನ. ಏಕಂದ್ರೆ, ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್ ಈ ಹಿಂದೆ ರಾಜ್ ಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ.

  ರಾಜ್‌ಕುಮಾರ್ ಅವರ 'ಸಮಯದ ಗೊಂಬೆ' ಸಿನಿಮಾದಲ್ಲಿ ಕೀರ್ತಿ ಸುರೇಶ್ ತಾಯಿ ಮೇನಕಾ ಸುರೇಶ್, ರಾಜ್‌ಕುಮಾರ್ ಅವರ ತಂಗಿಯ ಪಾತ್ರ ನಿರ್ವಹಿಸಿದ್ದಾರೆ.

  ಅಭಿಮಾನಿಗಳು ಏನೇ ಪ್ರಶ್ಮೆ ಕೇಳಿದ್ರೂ ಉತ್ತರ ಕೊಡ್ತಾರೆ - ರಮ್ಯಾ | Filmibeat Kannada

  'ಮಹಾನಟಿ' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಕೀರ್ತಿ ಸುರೇಶ್, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಯಶಸ್ವಿ ನಟಿ ಎನಿಸಿಕೊಂಡಿದ್ದಾರೆ. ಮೋಹನ್ ಲಾಲ್ ನಟನೆಯ ಮರಕ್ಕರ್, ರಜನಿಕಾಂತ್ ಜೊತೆ ಅಣ್ಣಾತ್ತೆ, ಮಹೇಶ್ ಬಾಬು ಜೊತೆ ಸರ್ಕಾರು ವಾರಿ ಪಾಟ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  English summary
  South actress Keerthy Suresh Remembers Dr Rajkumar on His 92nd Birthday By Sharing Pic Of Her with THE LEGEND.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X