ಅಯ್ಯೋ ಮಹಾನಟಿಗೆ ಏನಾಯ್ತು? ಕೀರ್ತಿ ಸುರೇಶ್ ಇನ್‌ಸ್ಟಾಗ್ರಾಮ್ ಪೋಸ್ಟ್ ಫುಲ್ ವೈರಲ್
'ಮಹಾನಟಿ' ಸಾವಿತ್ರಿ ಪಾತ್ರದಲ್ಲಿ ನಟಿಸಿ ಸಿನಿರಸಿಕರ ಮನಗೆದ್ದ ಚೆಲುವೆ ಕೀರ್ತಿ ಸುರೇಶ್. ಸದ್ಯ ಟಾಲಿವುಡ್, ಕಾಲಿವುಡ್‌ನಲ್ಲಿ ಈ ಚೆನ್ನೈ ಚೆಲುವೆ ಹವಾ ಜೋರಾಗಿದೆ. ನಿಧಾನವಾಗಿ ಗ್ಲಾಮರಸ್ ರೋಲ್‌ಗಳಿಗೂ ಚೆಲುವೆ ಸೈ ಎನ್ನುತ್ತಿದ್ದಾರೆ. ಹಾಟ್ ಹಾಟ್ ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ. ಸದ್ಯ ಕೀರ್ತಿ ಇನ್‌ಸ್ಟಾಗ್ರಾಮ್ ಪೋಸ್ಟ್ ನೋಡಿದ ಅಭಿಮಾನಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ.
ಸದ್ಯ ತಮಿಳು, ತೆಲುಗು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಂದ 'ದಸರಾ' ಸಿನಿಮಾದಲ್ಲಿ ವೆನ್ನೆಲ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಕೀರ್ತಿ ಗ್ಲಾಮರ್ ರೋಲ್‌ಗಳನ್ನು ಮಾಡಲು ಸಿದ್ಧರಿದ್ದರೂ ಹೆಚ್ಚು ಹೆಚ್ಚು ಡೀ ಗ್ಲಾಮರಸ್ ರೋಲ್‌ಗಳೇ ಆಕೆಯನ್ನು ಅರಸಿ ಬರ್ತಿವೆ. ಪಾತ್ರ ಯಾವುದೇ ಆದರೂ ತಮ್ಮ ಅಭಿನಯದ ಮೂಲಕ ಆಕೆ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಹೆಚ್ಚು ಮಹಿಳಾ ಪ್ರಧಾನ ಸಿನಿಮಾಗಳನ್ನು ಮುಖ ಮಾಡಿದ್ದಾರೆ. 'ದಸರಾ' ಸಕ್ಸಸ್ ಬೆನ್ನಲ್ಲೇ 5 ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

ಕೀರ್ತಿ ಇದ್ದಕ್ಕಿಂದಂತೆ ಮುಖ ಸುಟ್ಟು ಹೋದಂತೆ ಗುರುತೇ ಸಿಗದಂತೆ ಇರುವ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಿಢೀರನೇ ಈ ಫೋಟೊಗಳನ್ನು ನೋಡಿದವರು ಮಹಾನಟಿಗೆ ಏನಾಯ್ತು? ಎಂದು ಒಂದು ಕ್ಷಣ ಶಾಕ್ ಆಗಿದ್ದಾರೆ. ಅಂದಹಾಗೆ ಇದು ಕೀರ್ತಿ ನಟಿಸಿದ 'ಸಾನಿ ಕಾಯಿದಂ' ಚಿತ್ರದಲ್ಲಿ ಆಕೆಯ ಲುಕ್. ಅರುಣ್ ಮಥೇಶ್ವರನ್ ನಿರ್ದೇಶನದ ಈ ಕ್ರೈಂ ಡ್ರಾಮಾದಲ್ಲಿ ಕೀರ್ತಿ ಪೊನ್ನಿ ಎನ್ನುವ ಪಾತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ಮೇ 6ಕ್ಕೆ ಈ ಸಿನಿಮಾ ನೇರವಾಗಿ ಅಮೇಜಾನ್ ಪ್ರೈಂಗೆ ಬಂದಿತ್ತು. ಆ ಸಿನಿಮಾ ಒಂದು ವರ್ಷ ಪೂರೈಸಿದನ್ನು ಕೀರ್ತಿ ನೆನಪಿಸಿಕೊಂಡಿದ್ದಾರೆ.
"ನಾನು, ನನ್ನ ಕೊಳಕಾದ ಉಗುರುಗಳು, ಚಪ್ಪಲಿ, ಕಡ್ಡಿ ಕಿವಿಯೋಲೆ, ಮೆಟಾಡೋರ್ ವ್ಯಾನ್, ಸುಡಲೈ, ಸಂಗಯ್ಯ. ಸ್ವಲ್ಪ ಸೇಡು ಮತ್ತು ಕೆಲವು ಭಾವನೆಗಳು ಸೇರಿ ಅರುಣ್ ಮಾಥೇಶ್ವರನ್ ಸಿನಿಮಾ ಆಗಿತ್ತು. ಈ ವಿಶೇಷ ದಿನದಂದು ಪೊನ್ನಿ ಮತ್ತು ತಂಡವನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಕೀರ್ತಿ ಸುರೇಶ್ ಮಾಡಿದ್ದ ಪಾತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
'ಸಾನಿ ಕಾಯಿದಂ' ಸಿನಿಮಾ ಕಥೆ ಏನು ಅನ್ನೋದನ್ನು ನೋಡುವುದಾದರೆ ಪೊನ್ನಿ ಪೊಲೀಸ್ ಕಾನ್ಸ್‌ಸ್ಟೇಬಲ್. ಅವಳ ಗಂಡ ಮಾರಿ ರೈಸ್ ಮಿಲ್‌ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆ ಮಿಲ್‌ನಲ್ಲಿ ಜಾತಿ ಕಲಹ ಎದುರಿಸುತ್ತಾನೆ. ತನ್ನನ್ನು ತನ್ನ ಮಡದಿಯನ್ನು ಅವಮಾನಿಸಿದ ಮೇಲ್ಜಾತಿಗೆ ಸೇರಿದ ವ್ಯಕ್ತಿ ಮುಖಕ್ಕೆ ಉಗಿಯುತ್ತಾನೆ. ಈ ಕೋಪಕ್ಕೆ ಮೇಲ್ಜಾತಿಯವರು ಮಾರಿ ಹಾಗೂ ಆತನ ಕುಟುಂಬವನ್ನು ಹೇಗೆ ಸರ್ವನಾಶ ಮಾಡುತ್ತಾನೆ. ತಪ್ಪಿಸಿಕೊಂಡ ಪೊನ್ನಿ ತನ್ನ ಮಲ ಸಹೋದರನ ಜೊತೆ ಸೇರಿ ಅವರ ವಿರುದ್ಧ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ? ಅನ್ನುವ ಕಥೆ ಚಿತ್ರದಲ್ಲಿತ್ತು.
ಕ್ರೌರ್ಯ ಕೊಂಚ ಅತಿಯಾಯಿತು ಅನಿಸಿದರು ಕೀರ್ತಿ ಸುರೇಶ್ ಹಾಗೂ ಸೆಲ್ವರಾಘವನ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾದಲ್ಲಿ ಸುಟ್ಟ ಮುಖದ ಗಾಯಗಳೊಂದಿಗೆ ಕೀರ್ತಿ ಕಾಣಿಸಿಕೊಂಡಿದ್ದರು. ಅದಕ್ಕಾಗಿ ಹೇಗೆ ಮೇಕಪ್ ಮಾಡಿದ್ರು ಅನ್ನುವ ವಿಡಿಯೋವನ್ನು ಕೂಡ ಆಕೆ ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಪೋಸ್ಟ್‌ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ತೆಲುಗಿನ 'ಭೋಳಾ ಶಂಕರ್', ತಮಿಳಿನ 'ಮಾಮನನ್', 'ಸಿರೇನ್', 'ರಘು ತಾತ' ಹಾಗೂ 'ರಿವಾಲ್ವರ್ ರೀಟಾ' ಎನ್ನುವ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸ್ತಿದ್ದಾರೆ. 'ರಘು ತಾತ' ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ ಎನ್ನುವುದು ವಿಶೇಷ. 5 ಭಾಷೆಗಳಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











