ಫೋಟೋ ವೈರಲ್; ನಟೋರಿಯಸ್ ಲುಕ್ ನಲ್ಲಿ 'ಮಹಾನಟಿ' ಕೀರ್ತಿ ಸುರೇಶ್
ದಕ್ಷಿಣ ಭಾರತೀಯ ಸಿನಿಮಾ ರಂಗದ ಖ್ಯಾತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಿನ್ನ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ಕೀರ್ತಿ ಸುರೇಶ್ ಇತ್ತೀಚಿಗೆ 'ಮಿಸ್ ಇಂಡಿಯಾ' ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. 'ಮಿಸ್ ಇಂಡಿಯಾ' ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.
ಲಾಕ್ ಡೌನ್ ಬಳಿಕ ಕೀರ್ತಿ ಸುರೇಶ್ ಅಭಿನಯದ ಎರಡನೇ ಸಿನಿಮಾ ಒಟಿಟಿಲ್ಲಿ ರಿಲೀಸ್ ಆಗಿದೆ. ಈ ಮೊದಲು ಪೆಂಗ್ವಿನ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಇದೀಗ ಕೀರ್ತಿ ಸುರೇಶ್ ತಮಿಳಿನ 'ಸಾನಿ ಕಾಯಿದಮ್' ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸಾನಿ ಕಾಯಿದಮ್ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಕೀರ್ತಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.
ಗ್ಲಾಮ್ ಪಾತ್ರಗಳಲ್ಲಿ ಮತ್ತು ಪಕ್ಕದ ಮನೆ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ಕೀರ್ತಿ ಮೊದಲ ಬಾರಿಗೆ ನಟೋರಿಯಸ್ ಲುಕ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೀರ್ತಿ ಸುರೇಶ್ ಜೊತೆ ನಾಯಕನಾಗಿ ಸೆಲ್ವರಾಘವನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸೆಲ್ವರಾಘವನ್ ಮೊದಲ ಬಾರಿಗೆ ನಾಯಕನಾಗಿ ಬಣ್ಣಹಚ್ಚಿದ್ದಾರೆ. ಅಂದ್ಹಾಗೆ ಈ ಪೋಸ್ಟರ್ ನೋಡಿದ್ರೆ ಗೊತ್ತಾಗುತ್ತೆ, ಇದೊಂದು ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ ಎನ್ನುವುದು.

ಪೋಲೀಸ್ ಸ್ಟೇಷನ್ ನಲ್ಲಿ ರಕ್ತ ಸಿಕ್ತ ಲುಕ್ ನಲ್ಲಿ ಕುಳಿತಿರುವ ಕೀರ್ತಿ ಸುರೇಶ್ ಮತ್ತು ಸೆಲ್ವರಾಘವನ್ ಗೆಟಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಭಾಗದಲ್ಲಿ ಕತ್ತಿ, ಚಾಕು, ಲಾಂಗ್ ಸೇರಿದಂತೆ ಕ್ರೈಮ್ ಸಲಕರಣಿಗಳನ್ನು ಇಟ್ಟುಕೊಂಡಿದ್ದಾರೆ. ಮೊದಲ ಬಾರಿಗೆ ಕೀರ್ತಿ ಭಯಾನಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ ಸಾನಿ ಕಾಯಿದಮ್ ಚಿತ್ರಕ್ಕೆ ಅರುಣ್ ಮಾಥೇಶ್ವರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭಾರಿ ಕುತೂಹಲ ಮೂಡಿಸಿರುವ ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಕೀರ್ತಿ ಈ ಸಿನಿಮಾ ಜೊತೆಗೆ ಗುಡ್ ಲಕ್ ಸಖಿ, ಮರಕ್ಕರ್, ರಂಗ್ ದೇ, ಅಣ್ಣಾತೆ ಮತ್ತು ಸರ್ಕಾರು ವಾರಿ ಪಾಟ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಕೀರ್ತಿ ಮಹೇಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸಹ ಸದ್ಯದಲ್ಲೇ ಪ್ರಾರಂಭವಾಗಲಿದೆ.


Click it and Unblock the Notifications











