For Quick Alerts
  ALLOW NOTIFICATIONS  
  For Daily Alerts

  ದಳಪತಿಗೆ ಹುಟ್ಟುಹಬ್ಬಕ್ಕೆ ಕೀರ್ತಿ ಸುರೇಶ್ ವಿಶೇಷ ಗಿಫ್ಟ್: ವಯೊಲಿನ್ ವಾದನಕ್ಕೆ ಅಭಿಮಾನಿಗಳು ಫಿದಾ

  By ಫಿಲ್ಮ್ ಡೆಸ್ಕ್
  |

  ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಇತ್ತೀಚಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 46ನೇ ವಸಂತಕ್ಕೆ ಕಾಲಿಚ್ಚಿರುವ ವಿಜಯ್ ಈ ಬಾರಿ ಸರಳವಾಗಿ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ವಿಜಯ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೆ ಹರಿದು ಬರುತ್ತಿದೆ. ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿಯೇ ಶುಭಕೋರಿದ್ದಾರೆ.

  ವಿಶೇಷ ಅಂದರೆ ನಟಿ ಕೀರ್ತಿ ಸುರೇಶ್, ದಳಪತಿಗೆ ವಿಭಿನ್ನವಾಗಿ ವಿಶ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ. ಕೀರ್ತಿ ವಯೊಲಿನ್ ಮೂಲಕ ದಳಪತಿಗೆ ಶುಭಕೋರಿದ್ದಾರೆ. ಕೀರ್ತಿ ವಯೊಲಿನ್ ವಾದನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. "ಜೀವನ ತುಂಬಾ ಚಿಕ್ಕದು, ಯಾವಾಗಲು ಖುಷಿಯಾಗಿ ಇರಿ" ಎಂದು ವಿಜಯ್ ಗೆ ಶುಭಹಾರೈಸಿದ್ದಾರೆ.

  ದಳಪತಿ ವಿಜಯ್ ಹುಟ್ಟುಹಬ್ಬ: ಅಭಿಮಾನಿಗಳು, ಸಿನಿ ಗಣ್ಯರಿಂದ ಶುಭಾಶಯಗಳ ಸುರಿಮಳೆದಳಪತಿ ವಿಜಯ್ ಹುಟ್ಟುಹಬ್ಬ: ಅಭಿಮಾನಿಗಳು, ಸಿನಿ ಗಣ್ಯರಿಂದ ಶುಭಾಶಯಗಳ ಸುರಿಮಳೆ

  ಕೀರ್ತಿ ಸುರೇಶ್ ವಯೊಲಿನ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಜಯ್ ಅಭಿಮಾನಿಗಳು ರಿಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ಅಪ್ ಲೋಡ್ ಮಾಡುತ್ತಿದ್ದಂತೆ ಸಾವಿರಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.

  ಇನ್ನೂ ವಿಶೇಷ ಅಂದರೆ ಕೀರ್ತಿ ಸುರೇಶ್, ನಟ ವಿಜಯ್ ಅವರ ಬಿಗ್ ಫ್ಯಾನ್ ಅಂತೆ. ಚಿಕ್ಕ ವಯಸ್ಸಿನಿಂದಲೂ ಕೀರ್ತಿ, ವಿಜಯ್ ಅವರ ಫ್ಯಾನ್ ಆಗಿದ್ದು, ಸಿನಿಮಾಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಿದ್ದರಂತೆ. ನೆಚ್ಚಿನ ನಟನ ಜೊತೆ ಕೀರ್ತಿ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭೈರವ ಮತ್ತು ಸರ್ಕಾರ್ ಸಿನಿಮಾದಲ್ಲಿ ವಿಜಯ್ ಮತ್ತು ಕೀರ್ತಿ ಒಟ್ಟಿಗೆ ನಟಿಸಿದ್ದಾರೆ.

  English summary
  Actress keerthy Suresh Violin tribute to Thalapathy Vijay Birthday. Vijay celebrate his 46th birthday on June 22.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X